ADVERTISEMENT

ಶಿವ ಸರಣಿ ವೆಬ್‌ನಲ್ಲಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 13:37 IST
Last Updated 1 ಆಗಸ್ಟ್ 2019, 13:37 IST
ಅಮೀಶ್ ತ್ರಿಪಾಠಿ
ಅಮೀಶ್ ತ್ರಿಪಾಠಿ   

ಅಮೀಶ್ ತ್ರಿಪಾಠಿ ಬರೆದ ಶಿವ ಸರಣಿಯ ಪುಸ್ತಕಗಳು ಸುಲಭಕ್ಕೆ ನೆನಪಿನಿಂದ ಮರೆಯಾಗಲಾರವು. ಶಿವ, ನಂದಿ, ಸತಿ, ವೀರಭದ್ರ, ದಕ್ಷ... ಇಂತಹ ಪುರಾಣಗಳಲ್ಲಿ ಬರುವ ಪಾತ್ರಗಳ ಹೆಸರು ಬಳಸಿ ಹೊಸ ರೀತಿಯಲ್ಲಿ ಕಥೆ ಹೆಣೆದ ಈ ಸರಣಿ ಬಹಳ ಜನಪ್ರಿಯಗೊಂಡಿದೆ. ಈ ಸರಣಿಯ ಪುಸ್ತಕಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದ ಕೂಡ ಆಗಿವೆ.

ಈಗ ಈ ಸರಣಿಯು ವೆಬ್ ಸಿರೀಸ್ ರೂಪದಲ್ಲಿ ಕೂಡ ಬರಲಿದೆ. ಓದುವ ಹವ್ಯಾಸ ಇಲ್ಲದವರಿಗೆ, ನೋಡುವುದನ್ನೇ ಪ್ರೀತಿಸುವವರಿಗೆ ಶಿವ ಸರಣಿಯ ಕಥೆ ತಿಳಿದುಕೊಳ್ಳುವ ಅವಕಾಶ ಲಭ್ಯವಾಗಲಿದೆ.

ಅಂದಹಾಗೆ, ಈ ಸರಣಿಯ ಮೊದಲ ಪುಸ್ತಕ ‘ಇಮ್ಮಾರ್ಟಲ್ಸ್‌ ಆಫ್‌ ಮೆಲೂಹ’ ಪುಸ್ತಕದ ಸಿನಿಮಾ ಹಕ್ಕುಗಳನ್ನು ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ 2014ರಲ್ಲೇ ಪಡೆದಿದ್ದರು. ಆದರೆ, ಅದನ್ನು ಸಿನಿಮಾ ಮಾಡುವ ಯೋಜನೆ ಕ್ರಿಯೆಗೆ ಬರಲೇ ಇಲ್ಲ.

ADVERTISEMENT

‘ಹಕ್ಕುಗಳು ಈಗ ಕರಣ್ ಅವರಿಂದ ನಮಗೆ ವಾಪಸ್ ಬಂದಿವೆ. ಒಬ್ಬ ನಿರ್ಮಾಪಕರ ಜೊತೆ ಹೊಸದಾಗಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಶಿವ ಸರಣಿಯನ್ನು ಆಧರಿಸಿ ವೆಬ್ ಸಿರೀಸ್‌ ರೂಪಿಸುವ ಕೆಲಸ ನಡೆದಿದೆ’ ಎಂದು ಅಮೀಶ್ ಹೇಳಿದ್ದಾರೆ.

ಆದರೆ, ಈ ಸಿರೀಸ್‌ಅನ್ನು ಯಾರು ನಿರ್ಮಾಣ ಮಾಡಲಿದ್ದಾರೆ, ಅದು ಬಿಡುಗಡೆ ಆಗುವುದು ಯಾವಾಗ ಎಂಬೆಲ್ಲ ಮಾಹಿತಿಗಳನ್ನು ಅಮೀಶ್ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.