ADVERTISEMENT

ಅಮ್ಮನಾದ ಖುಷಿಯಲ್ಲಿ ನೇಹಾ ಗೌಡ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 6:24 IST
Last Updated 24 ಜೂನ್ 2020, 6:24 IST
ಮಗು ಜೊತೆ ನೇಹಾ ಪತಿ
ಮಗು ಜೊತೆ ನೇಹಾ ಪತಿ   

ಬಿಗ್‌ ಬಾಸ್‌ 3ರಲ್ಲಿ ಸ್ಪರ್ಧಿ ನೇಹಾ ಗೌಡ ಅವರು ಹೆಣ್ಣುಮಗುವಿನ ಅಮ್ಮನಾದ ಖುಷಿಯಲ್ಲಿದ್ದಾರೆ. ಮಗುವಿಗೆ ಈಗ ಮೂರು ತಿಂಗಳು. ಅಪ್ಪಂದಿರ ದಿನದಂದು, ಪತಿ ಮಗುವನ್ನು ಎತ್ತಿಕೊಂಡಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿ ನೇಹಾ ಶುಭಹಾರೈಸಿದ್ದಾರೆ. ಈ ಫೋಟೊ ಈಗ ವೈರಲ್‌ ಆಗಿದೆ.

‘ಒಂದು ದಿನದ ಮಗು’ ಎಂದುಫೋಟೊಗೆ ಟ್ಯಾಗ್‌ಲೈನ್‌ಬರೆದಿರುವ ನೇಹಾ, ‘ಹ್ಯಾಪಿ ಫಾದರ್ಸ್‌ ಡೇ 2020’ ಎಂದು ಪತಿಗೆ ಹಾರೈಸಿದ್ದಾರೆ. ನೇಹಾ ಮದುವೆಯಾದ ನಂತರ ತಮ್ಮ ಪತಿ ಭಾರ್ಗವ್‌ ಜಿ. ಗೌಡ ಜೊತೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ಅಲ್ಲೇ ಅವರಿಗೆ ಹೆಣ್ಣುಮಗು ಜನಿಸಿದೆ.

ಇನ್‌ಸ್ಟಾಗ್ರಾಂನಲ್ಲಿ ಕೆಲ ತಿಂಗಳ ಹಿಂದೆ ತಮ್ಮ ಸೀಮಂತದ ಫೋಟೊಗಳನ್ನು ಅವರು ಹಂಚಿಕೊಂಡಿದ್ದರು.ಗಗನಸಖಿಯಾಗಿದ್ದ ನೇಹಾ ಗೌಡ ‘ಬಿಗ್ ಬಾಸ್’ ಕನ್ನಡ ಸೀಸನ್ 3ನಲ್ಲಿ ನೇರ ಮತ್ತು ಖಡಕ್‌ ಮಾತುಗಳಿಂದ ಜನಪ್ರಿಯರಾಗಿದ್ದರು. ಕನ್ನಡದ ಡಾನ್ಸ್‌ ರಿಯಾಲಿಟಿ ಷೊದಲ್ಲಿ ಕೂಡ ಅವರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.