ADVERTISEMENT

ಯುಗಾದಿಯಂದು ಸ್ಟಾರ್ ಸುವರ್ಣದಲ್ಲಿ ಸ್ಟಾರ್‌ ಮಹಾನಟಿ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 9:17 IST
Last Updated 4 ಏಪ್ರಿಲ್ 2019, 9:17 IST
ಯುಗಾದಿಯಂದು ಸ್ಟಾರ್ ಸುವರ್ಣದಲ್ಲಿ ಸ್ಟಾರ್‌ ಮಹಾನಟಿ
ಯುಗಾದಿಯಂದು ಸ್ಟಾರ್ ಸುವರ್ಣದಲ್ಲಿ ಸ್ಟಾರ್‌ ಮಹಾನಟಿ   

ಚಂದನವನದ ನಟಿಯರಾದ ಜಯಂತಿ, ಭಾರತಿ, ತಾರಾ, ಪ್ರಿಯಾಂಕ ಉಪೇಂದ್ರ, ಪ್ರಿಯಾಮಣಿ, ಹರಿಪ್ರಿಯಾ, ರಾಗಿಣಿ ದ್ವಿವೇದಿ ಮತ್ತು ರಚಿತಾ ರಾಮ್ ಅವರಿಗೆ ಸ್ಟಾರ್ ಸುವರ್ಣ ವಾಹಿನಿ ‘ಮಹಾನಟಿ’ ಪುರಸ್ಕಾರ ನೀಡಿ ಗೌರವಿಸಿದೆ.

ಬೆಂಗಳೂರಿನ ಡೊಂಕ ಹಳ್ಳ ಮೈದಾನದಲ್ಲಿ ಇತ್ತೀಚೆಗೆ ನಡೆದ ಸುಂದರ ಕಾರ್ಯಕ್ರಮದಲ್ಲಿಕನ್ನಡದ ಮೇರು ನಟಿಯರ ಸಾಧನೆಯನ್ನು ಗೌರವಿಸಲು ಕನ್ನಡ ಚಲನಚಿತ್ರೋದ್ಯಮದ ಖ್ಯಾತನಾಮರು ಸೇರಿದ್ದರು.

ಪ್ರಶಸ್ತಿ ಸ್ವೀಕರಿಸಿದ ಜಯಂತಿ, ಭಾರತಿ, ತಾರಾ, ಪ್ರಿಯಾಂಕ ಉಪೇಂದ್ರ,ಹರಿಪ್ರಿಯಾ, ರಾಗಿಣಿ ದ್ವಿವೇದಿ ಮತ್ತು ರಚಿತಾ ರಾಮ್ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಎದುರಾದ ಸವಾಲುಗಳ ಬಗ್ಗೆ ಮೆಲುಕು ಹಾಕಿದ್ದಾರೆ. ತಮಗೆ ಪ್ರೀತಿ ತೋರಿಸಿದ ಕುಟುಂಬ ಹಾಗೂ ಅಭಿಮಾನಿಗಳನ್ನು ನೆನೆದು ಭಾವುಕರಾಗಿದ್ದಾರೆ.

ADVERTISEMENT

ಸ್ಟಾರ್ ಮಹಾನಟಿ ಬರಿ ಮನರಂಜನೆಯ ಕಾರ್ಯಕ್ರಮವಾಗದೆ, ಚಿತ್ರರಂಗದಲ್ಲಿ ಅಗ್ರ ಸಾಧನೆಗೈದಿರುವ ಮಾಹಾನ್ ಕಲಾವಿದೆಯರನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು. ಇದೇ 6ರಂದು ಸಂಜೆ 6.30ಕ್ಕೆ ವೀಕ್ಷಕರಿಗೆ ಯುಗಾದಿ ಹಬ್ಬದ ಕೊಡುಗೆಯಾಗಿ ಸ್ಟಾರ್ ಸುವರ್ಣ ವಾಹಿನಿಯುಸ್ಟಾರ್‌ ಮಹಾನಟಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.