ADVERTISEMENT

ಜೀವಸಮೃದ್ಧ ಲೆನಾ ನದಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 19:30 IST
Last Updated 26 ಜೂನ್ 2019, 19:30 IST
ಲೇನಾ ನದಿ
ಲೇನಾ ನದಿ   

ವಿಶ್ವದ ಅತಿ ಉದ್ದ ನದಿಗಳಲ್ಲಿ ಲೆನಾ ಒಂದು. ಇದರ ಹೆಸರಿನ ಮೂಲವು ಸ್ಥಳೀಯ ಪದ ‘ಎಲ್ಯು ಎನೆ’ ಯಿಂದ ಬಂದಿದ್ದು, ಇದರ ಅರ್ಥ ದೊಡ್ಡ ನದಿಯೆಂದು. ನದಿಯ ಪ್ರಮುಖ ಉಪನದಿಗಳು ಲ್ಯಾಪಟಿವ್ ಮತ್ತು ಅರ್ಟಿಕ್.

ಮಧ್ಯ ಸೈಬೀರಿಯಾದ ಬೈಕಾಲ್‌ ಶಿಶರದಲ್ಲಿ ಹುಟ್ಟುವ ಈ ನದಿಯು ಕೈರಿಂಗಾ, ವಿಟಿಮ್‌ ನದಿಗಳನ್ನು ಕೂಡಿಕೊಂಡು ಹರಿಯುತ್ತದೆ. ಇದರ ಬಗ್ಗೆ ತಿಳಿಯೋಣ.

ಸ್ವಾರಸ್ಯಕರ ಸಂಗತಿಗಳು:

ADVERTISEMENT

* 17ನೇ ಶತಮಾನದಲ್ಲಿ ಡೆವಿಡ್ ಪಿಯಾಂಡಾನೇತೃತ್ವದ ರಷ್ಯಾದ ತುಪ್ಪಳ ಬೇಟೆಗಾರರ ತಂಡವು ಮೊದಲು ಲೆನ ನದಿಯನ್ನು ಅನ್ವೇಷಿಸಿತ್ತು.

* ಈ ನದಿಯ ಮುಖಜಭೂಮಿಯಲ್ಲಿ ಸೌತೇಕಾಯಿ, ಆಲೂಗಡ್ಡೆ, ಗೋಧಿ ಮತ್ತು ಬಾರ್ಲಿಬೆಳೆಗಳನ್ನು ಹೆಚ್ಚು ಬೆಳಯಲಾಗುತ್ತದೆ.

* ಪ್ರಾಣಿಗಳನ್ನು ಮೇಯಿಸಲು ಇದರ ಮುಖಜ ಭೂಮಿಯಲ್ಲಿ ದೊಡ್ಡದಾದ ಹುಲ್ಲುಗಾವಲು ಪ್ರದೇಶವಿದೆ

* ಈ ನದಿಯ ಸುತ್ತಲಿನ ಪ್ರದೇಶ ಖನಿಜ ಸಂಪತ್ತಿನ ಸಮೃದ್ಧತೆಯಿಂದ ಕೂಡಿದೆ.

* ಚಿನ್ನ ಮತ್ತು ವಜ್ರಗಳಂಥ ಅಮೂಲ್ಯವಾದ ಲೋಹಗಳು, ಕಬ್ಬಿಣದ ಅದಿರುಗಳು ಮತ್ತು ಕೋ ಕಿಂಗ್ ಕಲ್ಲಿದ್ದಲಿನ ನಿಕ್ಷೇಪಗಳನ್ನು ಕಾಣಬಹುದು.

* ಆಹಾರ, ತುಪ್ಪಳ, ಕೈಗಾರಿಕಾ ಉತ್ಪನ್ನಗಳು ಸೇರಿ ಸರಕು ಸಾಗಣೆಗೆ ಈ ನದಿಯ ದಾರಿಯನ್ನೇ ಬಳಸಲಾಗುತ್ತದೆ.

* ಕೋನಿಫೆರಸ್ ಕಾಡು ಗಳನ್ನು ಹೊಂದಿದ್ದು, ವೈವಿಧ್ಯಮಯ ಸಸ್ಯ ವರ್ಗ, ಪಾಚಿ, ಬಂಡೆಕಲ್ಲು, ಹೂವು ಜತೆಗೆ ಗಸೆಗಸೆಯನ್ನು ಹೊಂದಿದೆ.

* ಹಲವು ಬಗೆಯಪಕ್ಷಿಗಳಿಗೆ ಹೆಸರುವಾಸಿಯಾಗಿದ್ದು, ಆರ್ಕ್ಟಿಕ್, ಲ್ಯಾಮ್ರಿಗಳು, ಆರ್ಟಿಕ್ ಸಿಸ್ಕೊ, ಚುಂಗ್ ಸಾಲ್ಮಗಳು ಪ್ರಮುಖಮೀನಿನ ಪ್ರಭೇದಗಳು.

* ಮೀನುಗಾರಿಕೆ ಇಲ್ಲಿನ ಪ್ರಮುಖ ಆರ್ಥಿಕ ಮೂಲಗಳಲ್ಲಿ ಒಂದಾಗಿದೆ. 38 ವಿಧದ ಮೀನುಪ್ರಬೇಧಗಳು ಮತ್ತು 92 ಬಗೆಯ ಸಸ್ಯ ಪ್ರಬೇಧಗಳನ್ನು ಇಲ್ಲಿ ಕಾಣಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.