ADVERTISEMENT

ಕ್ಯಾಲಿಫೋರ್ನಿಯಾ: ಜಗತ್ತಿನ ಅತಿದೊಡ್ಡ ‘ಆಕ್ಟೋಪಸ್‌ ನರ್ಸರಿ’ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 16:30 IST
Last Updated 1 ನವೆಂಬರ್ 2018, 16:30 IST
ಅಕ್ಟೋಪಸ್‌ಗಳು
ಅಕ್ಟೋಪಸ್‌ಗಳು   

ಕ್ಯಾಲಿಫೋರ್ನಿಯಾ: ಮಾಂಟೆರೆ ಸಾಗರ ತೀರದ ಆಳದಲ್ಲಿ ಆಶ್ಚರ್ಯಕರವೆಂಬಂತೆ ನೂರಾರು ಆಕ್ಟೋಪಸ್‌ಗಳು ಒಂದೆಡೆ ಕಾಣಿಸಿಕೊಂಡಿರುವ ಅಪರೂಪದ ದೃಶ್ಯ ಕಂಡುಬಂದಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.

ಪೆಸಿಫಿಕ್ ಸಾಗರದ ಡೇವಿಡ್‌ಸನ್‌ ಸೀಮೌಂಟ್ ಪ್ರದೇಶದಲ್ಲಿ 2 ಮೈಲುಗಳ ಆಳದಲ್ಲಿನಾಟಿಲಸ್ ಜಲಾಂತರ್ಗಾಮಿ ಶೋಧನಾ ನೌಕೆ ದೊಡ್ಡ ಪ್ರಮಾಣದ ಆಕ್ಟೋಪಸ್‌ಗಳ ಸಮೂಹವನ್ನು ಗುರುತಿಸಿದೆ.

‘ನಾವು ಸೀಮೌಂಟ್ ಪ್ರದೇಶದ ಪೂರ್ವಭಾಗದಲ್ಲಿ ಆಳಸಾಗರಕ್ಕೆ ಹೋಗಿದ್ದೆವು, ಅಲ್ಲಿ ಡಜನ್‌ಗಟ್ಟಲೇ ಆಕ್ಟೋಪಸ್‌ಗಳು ಇದ್ದವು’ ಎಂದು ವಿಜ್ಞಾನಿ ಚಾಡ್ ಕಿಂಗ್ ಹೇಳಿದ್ದಾರೆ.

ADVERTISEMENT

ಮಯುಸ್ಕಾಕ್ಟೋಪಸ್ ರೊಬಸ್ಟಸ್ ಕುಂಟುಂಬಕ್ಕೆ ಸೇರಿದ ಚಿಕ್ಕ ಗಾತ್ರದ 1000ಕ್ಕೂ ಅಧಿಕ ಆಕ್ಟೋಪಸ್‌ಗಳು ಒಂದೆಡೆ ಇದ್ದವು. ಆಳಸಾಗರದ ಅಪರೂಪದ ಆಕ್ಟೋಪಸ್‌ಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

ಈ ಸಾಗರ ಜೀವಿಗಳು ಬಂಡೆಗಳ ಮೇಲೆ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ತಮ್ಮ ತೋಳುಗಳನ್ನು ಅಲುಗಾಡಿಸುತ್ತಾ ಮೊಟ್ಟೆಗಳನ್ನುರಕ್ಷಿಸುತ್ತವೆ. ಒಂದೂವರೆ ವರ್ಷದ ಹಿಂದೆ, ಕೊಸ್ಟಾರಿಕಾ ತೀರದ ಡೊರೆಡೊ ಔಟ್‌ಕ್ರಾಪ್ ಪ್ರದೇಶದಲ್ಲಿ ಈ ರೀತಿಯ ಅಕ್ಟೋಪಸ್‌ಗಳ ನರ್ಸರಿಯನ್ನು ಕಂಡಿದ್ದೆವು.

ಪೂರ್ವ ಅಮೆರಿಕದ ಸಮುದ್ರ ತೀರದಲ್ಲಿ ಎಂದೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಕ್ಟೋಪಸ್‌ಗಳನ್ನು ಕಂಡಿಲ್ಲ ಎಂದು ಕಿಂಗ್ ಹೇಳುತ್ತಾರೆ.

ಸಂತಾನೋತ್ಪತ್ತಿಗಾಗಿ ಕೆಲವು ನಿರ್ದಿಷ್ಟ ಪ್ರದೇಶದ ಬಂಡೆಗಳನ್ನೇ ಏಕೆ ಆಕ್ಟೋಪಸ್‌ಗಳು ಆಯ್ಕೆ ಮಾಡಿಕೊಳ್ಳುತ್ತವೆ ಎಂದರೆ, ಅವುಗಳಿಗೆ ಅಗತ್ಯವಾದ ಉಷ್ಣಾಂಶ ಒಂದು ಕಾರಣವಾಗಿದೆ ಎಂದು ಸಂಶೋಧಕರುತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.