ADVERTISEMENT

ಪ್ರಾಣಿ ಪ್ರಪಂಚ- ಎಷ್ಟು ಪರಿಚಿತ?

ವಿಜ್ಞಾನ ವಿಶೇಷ

ಎನ್.ವಾಸುದೇವ್
Published 15 ಡಿಸೆಂಬರ್ 2018, 19:30 IST
Last Updated 15 ಡಿಸೆಂಬರ್ 2018, 19:30 IST
   

1. ಸ್ತನಿ ವರ್ಗದ ಕೆಲವು ಗೊರಸಿನ ಪ್ರಾಣಿಗಳು ಪಡೆದಿರುವ ದ್ವಿವಿಧ ಶಿರ ಶೃಂಗಾರಗಳಾದ ಕೊಂಬು ಮತ್ತು ಕವಲು ಕೊಂಬು ಗೊತ್ತಲ್ಲ? ಅಂಥ ಅಲಂಕಾರಗಳನ್ನು ಪಡೆದಿರುವ ಒಂದೊಂದು ಪ್ರಾಣಿಗಳು ಚಿತ್ರ-1 ಮತ್ತು ಚಿತ್ರ-2ರಲ್ಲಿವೆ. ಈ ಕೆಳಗೆ ಹೆಸರಿಸಿರುವ ಪ್ರಾಣಿಗಳಲ್ಲಿ ಯಾವುವು ಕೊಂಬನ್ನೂ, ಕವಲು ಕೊಂಬನ್ನೂ ಪಡೆದಿವೆ- ಗುರುತಿಸಬಲ್ಲಿರಾ?
ಅ. ಜಿಂಕೆ ಬ. ಕರಿ ಚಿಗರೆ
ಕ. ಆರಿಕ್ಸ್ ಡ. ಎಲ್ಕ್
ಇ. ಮೂಸ್ ಈ. ಆಕ್
ಉ. ಕುಡು ಟ. ರೇನ್ ಡೀರ್

2. ಎರಡು ಬಗೆಯ ಹಕ್ಕಿಗೂಡುಗಳು ಚಿತ್ರ-3 ಮತ್ತು ಚಿತ್ರ-4ರಲ್ಲಿವೆ. ಖಗ ಜಗತ್ತಿನಲ್ಲಿ ಗೂಡನ್ನೇ ನಿರ್ಮಿಸದ ಹಕ್ಕಿ ವಿಧಗಳೂ ಬೇಕಾದಷ್ಟಿವೆ. ಅಂತಹ ಹಕ್ಕಿಗಳನ್ನು ಈ ಪಟ್ಟಿಯಲ್ಲಿ ಪತ್ತೆ ಮಾಡಿ:
ಅ. ಝೇಂಕಾರದ ಹಕ್ಕಿ ಬ. ಸ್ಟಾರ್ಕ್
ಕ. ಪೆಂಗ್ವಿನ್ ಡ. ಗೀಜಗ
ಇ. ಆಸ್ಟ್ರಿಚ್ ಈ. ವಾರ್ಬ್ಲರ್
ಉ. ಗನೆಟ್ ಟ. ಆಲ್ಬಟ್ರಾಸ್

3. ಅತ್ಯಂತ ನಿಕಟ ಸಂಬಂಧಿಗಳಾದ ಇಬ್ಬಗೆಯ ವಾನರರು ಚಿತ್ರ-5 ಮತ್ತು ಚಿತ್ರ-6ರಲ್ಲಿವೆ. ವೃಷ್ಟಿವನವಾಸಿಗಳಾಗಿರುವ ಈ ವಾನರರು ಆಫ್ರಿಕದ ಒಂದು ಪ್ರಸಿದ್ಧ ನದಿಯ ಎದುರು ಬದುರು ದಂಡೆಗಳಲ್ಲಿ ಒಂದನ್ನೊಂದು ಸಂಧಿಸದೆ ಪ್ರತ್ಯೇಕವಾಗಿ ನೆಲೆಸಿವೆ:
ಅ. ಈ ವಾನರರ ಹೆಸರುಗಳೇನು?
ಬ. ಇವುಗಳ ನೈಸರ್ಗಿಕ ನೆಲೆಯ ಮೂಲಕ ಪ್ರವಹಿಸುತ್ತಿರುವ ನದಿ ಯಾವುದು?

ADVERTISEMENT

4. ವಿಸ್ಮಯಕರ ರೂಪದ, ತುಂಬ ಪರಿಚಿತ ಸಾಗರ ಪ್ರಾಣಿ ಜೆಲ್ಲಿ ಮೀನು ಚಿತ್ರ-7ರಲ್ಲಿದೆ. ಜೆಲ್ಲಿ ಮೀನುಗಳು ಯಾವ ಪ್ರಾಣಿವರ್ಗಕ್ಕೆ ಸೇರಿವೆ ಗೊತ್ತೇ?
ಅ. ದವಡೆ ರಹಿತ ಮತ್ಸ್ಯ ವರ್ಗ ಬ. ನೈಡೇರಿಯನ್ ವರ್ಗ
ಕ. ಚಿಪ್ಪಿನ ಜೀವಿಗಳ ವರ್ಗ ಡ. ಮೃದ್ವಂಗಿ ವರ್ಗ

5. ಬೆಕ್ಕುಗಳ ಕುಟುಂಬದ ಸುಪ್ರಸಿದ್ಧ ಪ್ರಭೇದ ಸಿಂಹ ಚಿತ್ರ–8ರಲ್ಲಿದೆ. ಬೆಕ್ಕುಗಳ ಇಡೀ ಕುಟುಂಬದಲ್ಲಿ ಸಿಂಹಗಳ ಅತ್ಯಂತ ವಿಶೇಷ ಗುಣ-ಲಕ್ಷಣಗಳು ಇವುಗಳಲ್ಲಿ ಯಾವುವು?
ಅ. ಚುಕ್ಕಿ, ಪಟ್ಟೆ ಇತ್ಯಾದಿ ಚಿತ್ತಾರ ರಹಿತ ಚರ್ಮ ಬ. ದೊಡ್ಡ ಗಾತ್ರದ ಶರೀರ
ಕ. ಗರಿಷ್ಠ ದೇಹ ಶಕ್ತಿ ಡ. ಸಾಂಘಿಕ ಜೀವನ ಕ್ರಮ
ಇ. ಭಾರೀ ವೇಗದ ಓಟ ಸಾಮರ್ಥ್ಯ ಈ. ಗಂಡುಗಳಲ್ಲಿ ಕೊರಳ ಸುತ್ತಲ ಕೇಶಾಲಂಕಾರ

6. ಸಾಗರವಾಸಿಗಳಾಗಿರುವ ಒಂದು ಬಗೆಯ ವಿಶಿಷ್ಟ ಜೀವಿಗಳು ನಿರ್ಮಿಸಿರುವ ಸುಂದರ ಸಂಕೀರ್ಣ ಸೃಷ್ಟಿಯೊಂದು ಚಿತ್ರ-9ರಲ್ಲಿದೆ:

ಅ. ಈ ನಿರ್ಮಿತಿ ಯಾವುದು?
ಬ. ಇಂತಹ ನಿರ್ಮಿತಿಗಳನ್ನು ರೂಪಿಸುವ ಪ್ರಾಣಿಯ ಹೆಸರೇನು?
ಕ. ಇಂಥ ನಿರ್ಮಿತಿಗಳಲ್ಲಿನ ಪ್ರಧಾನ ದ್ರವ್ಯ ಯಾವುದು?

7. ವಲಸೆ ಪಯಣ ಕೈಗೊಂಡಿರುವ ಹಕ್ಕಿ ಗುಂಪೊಂದು ಚಿತ್ರ-10ರಲ್ಲಿದೆ. ಪ್ರತಿವರ್ಷ ಚಳಿಗಾಲದಲ್ಲಿ ಹಲವಾರು ಹಕ್ಕಿ ಪ್ರಭೇದಗಳು ನಮ್ಮ ದೇಶಕ್ಕೂ ವಲಸೆ ಬರುತ್ತವೆ. ಹಾಗೆ ನಮ್ಮ ದೇಶಕ್ಕೆ ವಲಸೆ ಬರುವ ಹಕ್ಕಿಗಳು ಈ ಪಟ್ಟಿಯಲ್ಲಿ ಯಾವುವು?
ಅ. ಸೈಬೀರಿಯನ್ ಕ್ರೇನ್ ಬ. ಆರ್ಕ್ಟಿಕ್ ಟರ್ನ್
ಕ. ಫ್ಲೆಮಿಂಗೋ ಡ. ಪೆಲಿಕನ್
ಇ. ಆಸ್ಪ್ರೇ ಈ. ಸ್ಪೂನ್ ಬಿಲ್

8. ನದಿ ದಂಡೆಗಳ ಕೆಸರಿನ ಹೊಂಡಗಳ ಬಳಿ ಗುಂಪು ಸೇರಿರುವ ಚಿಟ್ಟೆಗಳ ಗುಂಪನ್ನು ಚಿತ್ರ-11ರಲ್ಲಿ ಗಮನಿಸಿ. ಕೆಸರು ನೀರಿನ ಬಳಿ ಪಾತರಗಿತ್ತಿಗಳು ಹೀಗೆ ಗುಂಪು ಸೇರುವ ಉದ್ದೇಶ ಏನು?
ಅ. ನೀರನ್ನು ಹೀರುವುದು
ಬ. ಕೆಸರು ನೀರಲ್ಲಿ ಬೆರೆತ ಲವಣ-ಖನಿಜಗಳನ್ನು ಸೇವಿಸುವುದು
ಕ. ಕೆಸರಲ್ಲಿ ಸಿಲುಕಿದ ಸೂಕ್ಷ್ಮ ಜೀವಿಗಳನ್ನು ಭಕ್ಷಿಸುವುದು
ಡ. ಮೊಟ್ಟೆ ಇಡುವುದು

9. ಬೃಹದಾಕಾರಕ್ಕೆ ಹೆಸರಾದ ಸಾಗರ ಪ್ರಾಣಿ ತಿಮಿಂಗಿಲ ಚಿತ್ರ-12ರಲ್ಲಿದೆ. ಧರೆಯ ಅತ್ಯಂತ ದೈತ್ಯಗಾತ್ರದ, ಗರಿಷ್ಠ ತೂಕದ ಪ್ರಾಣಿ ಎಂಬ ದಾಖಲೆಯನ್ನು ಹೊಂದಿರುವ ವಯಸ್ಕ ನೀಲಿ ತಿಮಿಂಗಿಲಗಳ ಶರೀರದ ಸರಾಸರಿ ತೂಕ ಎಷ್ಟು?
ಅ. 10 ಟನ್ ಬ. 50 ಟನ್
ಕ. 150 ಟನ್ ಡ. 250 ಟನ್
ಇ. 500 ಟನ್

10. ಚಿತ್ರ-13ರಲ್ಲಿರುವ ಬಾವಲಿ ಯಾವ ವರ್ಗದ್ದು ಎಂದು ಗುರುತಿಸಬಲ್ಲಿರಾ?
ಅ. ಹಂದಿ ಮೂಗಿನ ಬಾವಲಿ ಬ. ಹಾರುವ ನರಿ (ಪ್ಲೇಯಿಂಗ್ ಫಾಕ್ಸ್)
ಕ. ವಾಂಪೈರ್ ಬಾವಲಿ ಡ. ಎಲೆ ಮೂಗಿನ ಬಾವಲಿ

ಉತ್ತರಗಳು
1. ಕೊಂಬಿನ ಪ್ರಾಣಿಗಳು : ಬ, ಕ, ಈ ಮತ್ತು ಉ
ಕವಲು ಕೊಂಬಿನ ಪ್ರಾಣಿಗಳು : ಅ, ಡ, ಇ ಮತ್ತು ಟ

2. ಕ, ಇ ಮತ್ತು ಉ

3. ಅ. ಚಿತ್ರ-5 ಬೋನೋಬೋ ; ಚಿತ್ರ-6 ಚಿಂಪಾಂಜಿ ಬ. ಕಾಂಗೋ ನದಿ

4. ಬ. ನೈಡೇರಿಯನ್ ವರ್ಗ

5. ಡ ಮತ್ತು ಈ

6. ಅ. ಹವಳ ; ಬ. ಹವಳದ ಜೀವಿ ; ಕ. ಸುಣ್ಣದ ಕಾರ್ಬನೇಟ್

7. ಆರ್ಕ್ಟಿಕ್ ಟರ್ನ್ ಬಿಟ್ಟು ಇನ್ನೆಲ್ಲ

8. ಬ. ಲವಣ-ಖನಿಜಗಳ ಸೇವನೆ

9. ಕ. 150 ಟನ್

10. ಬ. ಹಾರುವ ನರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.