ADVERTISEMENT

ಗುರು ಗ್ಯಾರಿ ಕಾರಣ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2010, 18:30 IST
Last Updated 30 ಅಕ್ಟೋಬರ್ 2010, 18:30 IST

ಸಚಿನ್, ಸೆಹ್ವಾಗ್, ಗಂಭೀರ್, ದೋನಿ ಸೇರಿದಂತೆ ಹೆಚ್ಚಿನ ಆಟಗಾರರು ತಂಡದ ಇದುವರೆಗಿನ ಯಶಸ್ಸಿಗೆ ಕೋಚ್ ಗ್ಯಾರಿ ಕರ್ಸ್ಟನ್ ಕಾರಣ ಎನ್ನುತ್ತಿದ್ದಾರೆ. ಅವರ ತರಬೇತಿ ಶೈಲಿಯನ್ನು ಮೆಚ್ಚಿಕೊಂಡಿದ್ದಾರೆ. ವೀರೂ ಯಾವ ರೀತಿಯಲ್ಲಿ ಬ್ಯಾಟ್ ಬೀಸಿದರೂ ಅದಕ್ಕೆ ಗ್ಯಾರಿ ಚಪ್ಪಾಳೆ ತಟ್ಟುತ್ತಾರೆ! ಇದರರ್ಥ ಅವರು ಸೆಹ್ವಾಗ್‌ರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ.


ಸಚಿನ್, ದ್ರಾವಿಡ್ ಅವರು ಕರ್ಸ್ಟನ್ ಎದುರು ಆಡಿದವರು. ಅವರಿಗಿಂತ ಹೆಚ್ಚು ಪಂದ್ಯ ಆಡಿದ್ದಾರೆ. ಹೆಚ್ಚು ರನ್ ಗಳಿಸಿದ್ದಾರೆ. ಆದರೂ ಈ ಆಟಗಾರರಿಗೆ ಕರ್ಸ್ಟನ್ ಕೋಚಿಂಗ್ ಸ್ಟೈಲ್ ಇಷ್ಟವಾಗಿದೆ. ಕ್ರಿಕೆಟ್ ಲೋಕದ ಖ್ಯಾತ ಆಟಗಾರರನ್ನು ಒಳಗೊಂಡಿರುವ ಭಾರತ ತಂಡಕ್ಕೆ ತರಬೇತಿ ನೀಡುವುದು ಎಲ್ಲರಿಗೂ ಸಿಗುವ ಅದೃಷ್ಟವಲ್ಲ. ಆದರೆ ದಕ್ಷಿಣ ಆಫ್ರಿಕಾದ ಕರ್ಸ್ಟನ್ ತಮ್ಮ ವಿಶೇಷವಾದ ತರಬೇತಿ ಶೈಲಿಯ ಮೂಲಕ ಆಟಗಾರರ ಹಾಗೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾರತ ತಂಡವನ್ನು ಯಶಸ್ವಿನ ಪಥದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ.


‘ಭಾರತ ರಸ್ತೆಗಳಲ್ಲಿ ಕಾರುಗಳಿಗಿಂತ ಹೆಚ್ಚು ದನಗಳೇ ನಿಂತಿರುತ್ತವೆ. ಅಂತಹ ಸ್ಥಳಕ್ಕೆ ತೆರಳಿ ನಾವು ಕ್ರಿಕೆಟ್ ಆಡಬೇಕಾಯಿತು’ ಎಂದು 1996-97ರಲ್ಲಿ ಆಟಗಾರನಾಗಿ ಭಾರತ ಪ್ರವಾಸ ಮುಗಿಸಿ ಹೋಗಿದ್ದ ಗ್ಯಾರಿ ಭಾರತವನ್ನು ತೆಗಳಿದ್ದರು. ಆದರೆ ಈಗ ನೋಡಿ ಅವರಿಗೆ ಭಾರತ ಹಾಗೂ ಭಾರತ ಕ್ರಿಕೆಟ್ ತಂಡವನ್ನು ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ. ಯಶಸ್ಸು ಎಂಬುದು ಏನೆಲ್ಲಾ ಬದಲಾವಣೆ ಮಾಡಬಲ್ಲದು ನೋಡಿ!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.