* ಟೆನಿಸ್‌ನಲ್ಲಿ ಭಾರತದ ಭವಿಷ್ಯ ಹೇಗಿದೆ?
ಉತ್ತರ: ನಿವೃತ್ತಿಯ ಅಂಚಿನಲ್ಲಿದ್ದರೂ ಪೇಸ್ ಮತ್ತು ಭೂಪತಿ ಚೆನ್ನಾಗಿಯೇ ಆಡುತ್ತಿದ್ದಾರೆ. ಈಗಿನವರಲ್ಲಿ ಸೋಮದೇವ್, ರೋಹನ್ ಬೋಪಣ್ಣ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ನಮ್ಮೆಲ್ಲರ ಕನಸು ಪೇಸ್ ಮತ್ತು ಭೂಪತಿಯವರ ಸ್ಥಾನವನ್ನು ತುಂಬುವುದೇ ಆಗಿದೆ. ಭಾರತದ ಟೆನಿಸ್‌ಗೆ ರಾಜಕುಮಾರನಾಗುವ ಕನಸು ನನ್ನದು.
* ಮುಂದಿನ ವಿಂಬಲ್ಡನ್ ಟೂರ್ನಿ ಮತ್ತು ಒಲಿಂಪಿಕ್ಸ್‌ನಲ್ಲಿ ಭಾರತದ ಟೆನಿಸ್ ಆಟಗಾರರಿಂದ ಏನನ್ನು ನಿರೀಕ್ಷಿಸಬಹುದು?
ಉ: ಪೇಸ್ ಮತ್ತು ಭೂಪತಿ ಅವರಂಥ ಉತ್ತಮ ಆಟಗಾರರು ಇದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಸಾನಿಯಾ ಇದ್ದಾರೆ. ವಿಂಬಲ್ಡನ್‌ನಲ್ಲಿ ಉತ್ತಮ ಪ್ರದರ್ಶನ ನಿರೀಕ್ಷಿಸಬಹುದು. ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕದ ಭರವಸೆಯೂ ಇದೆ.
* ಮೈಸೂರು ಟೆನಿಸ್ ಬಗ್ಗೆ?
ಉ: ಅತ್ಯಂತ ಯೋಜನಾಬದ್ಧ ಊರು ಇದು. ಎಂಟಿಸಿಯಲ್ಲಿ ಅತ್ಯುತ್ತಮ ಸಿಂಥೆಟಿಕ್ ಕೋರ್ಟ್‌ಗಳಿವೆ. ಅಲ್ಲದೇ ತಿಂಗಳಿಗೆ ಕೇವಲ 150 ರೂ. ಅಗ್ಗದ ಶುಲ್ಕ ಪಡೆದು ತರಬೇತಿ ನೀಡಲಾಗುತ್ತಿದೆ. ರೋಹನ್ ಬೋಪಣ್ಣ, ಪ್ರಹ್ಲಾದ್ ಶ್ರೀನಾಥ್ ಅವರಂತಹ ಅತ್ಯುತ್ತಮ ಆಟಗಾರರು ಪ್ರವರ್ಧಮಾನಕ್ಕೆ ಬಂದಿದ್ದು ಇಲ್ಲಿಯೇ. ಇಲ್ಲಿಯ ಟೆನಿಸ್‌ಗೆ ಉತ್ತಮ ಭವಿಷ್ಯವಿದೆ.
* ಟೆನಿಸ್ ಕೇವಲ ಶ್ರೀಮಂತರ ಆಟವೇ?
ಉ: ಮೊದಲು ಈ ಭಾವನೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಮಧ್ಯಮವರ್ಗದ ಕುಟುಂಬಗಳ ಮಕ್ಕಳೂ ಈ ಆಟಕ್ಕೆ ಸೇರಲು ಬಹಳಷ್ಟು ಅವಕಾಶಗಳು ಇವೆ. ಎಐಟಿಎ ಹಲವು ಯೋಜನೆಗಳನ್ನು ರೂಪಿಸಿದೆ. ಅಲ್ಲದೇ ಎಂಟಿಸಿಯಂತಹ ಕ್ಲಬ್‌ನಲ್ಲಿ ಅತ್ಯಂತ ಕಡಿಮೆ ಶುಲ್ಕ ಇರುವುದು ಕೂಡ ಇದಕ್ಕೆ ಉದಾಹರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.