ADVERTISEMENT

ಪಪ್ಪಾಯಿ ಹಣ್ಣಿನ ವಿವಿಧ ರುಚಿಕರ ಅಡುಗೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:30 IST
Last Updated 28 ಫೆಬ್ರುವರಿ 2018, 19:30 IST
ಪಪ್ಪಾಯಿ ಹಣ್ಣಿನ ವಿವಿಧ ರುಚಿಕರ ಅಡುಗೆ
ಪಪ್ಪಾಯಿ ಹಣ್ಣಿನ ವಿವಿಧ ರುಚಿಕರ ಅಡುಗೆ   

ಪಾಯಸ

ಸಾಮಗ್ರಿಗಳು: ಸಿಪ್ಪೆ, ಬೀಜ ತೆಗೆದು ಚೆನ್ನಾಗಿ ತೊಳೆದು ತುರಿದ 1 ಕಪ್ ಪಪ್ಪಾಯಿ ಹಣ್ಣು, 2 ಕಪ್ ತೆಂಗಿನತುರಿ, 1 ಕಪ್ ಬೆಲ್ಲ, 1 ಚಮಚ ಅಕ್ಕಿ ಹಿಟ್ಟು, ಕಾಲು ಚಮಚ ಏಲಕ್ಕಿ ಪುಡಿ.

ವಿಧಾನ: ತೆಂಗಿನತುರಿಯನ್ನು ಸ್ವಲ್ಪ ನೀರು ಸೇರಿಸಿ ರುಬ್ಬಿ. ದಪ್ಪ ಕಾಯಿ ಹಾಲು ಹಿಂಡಿ ತೆಗೆದಿಡಿ. ನಂತರ ಪುನಃ ಸ್ವಲ್ಪ ನೀರು ಹಾಕಿ ರುಬ್ಬಿ. ನೀರು ಕಾಯಿಹಾಲು ಹಿಂಡಿ ತೆಗೆದು ಬೇರೆಯೇ ಇಡಿ. ಪಪ್ಪಾಯಿ ಹಣ್ಣಿನ ತುಂಡುಗಳನ್ನು ನೀರಿಗೆ ಹಾಕಿ ಚೆನ್ನಾಗಿ ತೊಳೆದು ತುರಿಯಿರಿ. ನಂತರ ನೀರು ಕಾಯಿಹಾಲಿನಲ್ಲಿ ತುರಿದ ಚೂರುಗಳನ್ನು ಹಾಕಿ ಬೇಯಿಸಿ. ಬೆಂದ ನಂತರ ಬೆಲ್ಲ ಹಾಕಿ ತಿರುಗಿಸಿ. ನಂತರ ಮಿಕ್ಸಿಗೆ ಹಾಕಿ ಒಂದು ಸುತ್ತು ತಿರುಗಿಸಿ ಪಾತ್ರೆಗೆ ಹಾಕಿ ಒಲೆಯ ಮೇಲಿಡಿ. ನಂತರ ಅಕ್ಕಿ ಹಿಟ್ಟನ್ನು ನೀರಿನಲ್ಲಿ ಕರಗಿಸಿ ಹಾಕಿ. ಚೆನ್ನಾಗಿ ಕುದಿಸಿದ ನಂತರ ದಪ್ಪ ತೆಂಗಿನ ಹಾಲು ಹಾಕಿ ಚೆನ್ನಾಗಿ ಕುದಿಸಿ, ಒಲೆಯಿಂದ ಕೆಳಗಿಳಿಸಿ. ಏಲಕ್ಕಿ ಪುಡಿ ಹಾಕಿ ಸರಿಯಾಗಿ ಬೆರೆಸಿ ತಟ್ಟೆಗೆ ಹಾಕಿ ಸವಿಯಿರಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.