ADVERTISEMENT

ಹುಬ್ಬಳ್ಳಿ: 19ರಿಂದ ಬಂಗಾಳಿ ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 9:22 IST
Last Updated 17 ಅಕ್ಟೋಬರ್ 2018, 9:22 IST

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿರುವ ಕ್ಲರ್ಕ್‌ ಇನ್‌ ಹೋಟೆಲ್‌ನಲ್ಲಿ ಅ. 19ರಿಂದ 28ರ ವರೆಗ ಬಂಗಾಳಿ ಆಹಾರ ಮೇಳ ನಡೆಯಲಿದ್ದು, 44 ನಮೂನೆಯ ಖಾದ್ಯಗಳು ಲಭಿಸಲಿವೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೋಟೆಲ್‌ನ ಪ್ರಧಾನ ವ್ಯವಸ್ಥಾಪಕ ಆರ್‌.ಕೆ. ಮಹಾರಾಣಾ ‘ವಾಣಿಜ್ಯ ನಗರಿಯಲ್ಲಿ 150ಕ್ಕೂ ಹೆಚ್ಚು ಬಂಗಾಳಿ ಕುಟುಂಬಗಳು ವಾಸ ಮಾಡುತ್ತಿವೆ. ಅವರಿಗೆ ಹಾಗೂ ಸ್ಥಳೀಯರಿಗೆ ಬಂಗಾಳಿ ಆಹಾರದ ರುಚಿ ಉಣಬಡಿಸುವ ಉದ್ದೇಶದಿಂದ ಮೇಳ ಆಯೋಜಿಸಲಾಗಿದ್ದು, ಪ್ರತಿದಿನ ಸಂಜೆ 7ರಿಂದ ರಾತ್ರಿ 11 ಗಂಟೆ ತನಕ ನಡೆಯುತ್ತದೆ. ಇದಕ್ಕಾಗಿ ಬಂಗಾಳಿ ಅಡುಗೆಯಲ್ಲಿ ಪರಿಣತಿ ಹೊಂದಿರುವ ಬಾಣಸಿಗರು ಬಂದಿದ್ದಾರೆ’ ಎಂದರು.

‘ನಿತ್ಯ ಬೇರೆ ಬೇರೆ ಪದಾರ್ಥಗಳ ಊಟ ಇರುತ್ತದೆ. ಹತ್ತು ನಮೂನೆಯ ಐಸ್‌ಕ್ರೀಮ್‌ಗಳನ್ನು ಇಡಲಾಗುತ್ತದೆ. ವಯಸ್ಕರರಿಗೆ ₹ 499 ಮತ್ತು ಮಕ್ಕಳಿಗೆ ₹ 299 ದರ ನಿಗದಿ ಮಾಡಲಾಗಿದೆ. ಸಸ್ಯಹಾರ ಮತ್ತು ಮಾಂಸಹಾರ ಎರಡೂ ಬಗೆಯ ಊಟ ಇರುತ್ತದೆ’ ಎಂದು ತಿಳಿಸಿದರು.

ADVERTISEMENT

ಬಂಗಾಳಿ ರುಚಿಯ ಮಾದರಿಯಲ್ಲಿ ಸೂಪ್‌, ಸಲಾಡ್‌, ಹುಳಿಯ ಚಾರ್ಟ್ಸ್‌, ಮೆದಿನಾ ಪುರೇರಾ, ಚಿಂಗಡಿ ಸೂಪ್‌, ಚೇಟಕಿ ಮುಚ್ಚೀರ ಬಾಜಾ. ಡಾರ್ಜಿಲಿಂಗ್‌ ಸಸ್ಯಹಾರಿಯ ಸ್ಪಿಂಗ್‌ ರೋಲ್‌, ಬೇಹಾಲೇಹರ್‌ ಚಿಕನ್‌ ಪಕೋಡಾ, ಬ್ಯಾಂಕುರಾರ ಆಲೂ ಸೂಪ್‌, ಕಾಲಿಯಾ, ಮುರ್ಗಿ ಮಂಗಸಾ ಕೋಸಾ, ಹಸಿ ಶುಂಠಿಯ ಪನ್ನೀತ್‌, ಹಕ್ಕಾ ಶಾವಿಗೆ, ಲಂಗಚಾ, ಮಿಹಿಂದಾ ಹೀಗೆ ವಿವಿಧ ತಿನಿಸುಗಳು ಮೇಳದಲ್ಲಿ ಸಿಗುತ್ತವೆ.

ಹೋಟೆಲ್‌ನ ಕಾರ್ಯನಿರ್ವಾಹಕ ಮುಖ್ಯಸ್ಥ ಸಂಜಯ್‌ ಮಂಡಲ್‌, ಸಹಾಯಕ ಮ್ಯಾನೇಜರ್‌ ಸೌಮ್ಯರಂಜನ್‌ ಬಿಶಿ, ಆಡಳಿತ ಮಂಡಳಿ ಸದಸ್ಯರಾದ ರಾಕೇಶ ಕೋಟಿ, ವಿನಯ್‌ ಕೋಟಿ, ರಾಹುಲ್‌ ಕೋಟಿ ಮತ್ತು ಪ್ರದೀಪ್‌ ಷಾ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.