ADVERTISEMENT

ಗರ್ಭಿಣಿಯರಲ್ಲಿ ಮಧುಮೇಹ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST

ಕೆಲವು ಗರ್ಭಿಣಿಯರಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತದೆ. ಗರ್ಭಧಾರಣೆಗೆ ಮುಂಚೆ ಮಧುಮೇಹ ಕಾಯಿಲೆ ಮಹಿಳೆಗೆ ಇರಲಿ ಅಥವಾ ಬಿಡಲಿ, ಗರ್ಭಧಾರಣೆ ನಂತರ ಇದು ಬರುವುದು ಸಾಮಾನ್ಯ. ಪ್ರಸವದ ಸಮಯದವರೆಗೂ ಮುಂದುವರಿಯುವ ಮಧುಮೇಹದಿಂದ ಬಳಲುವ ಮಹಿಳೆಯರ ಸಂಖ್ಯೆ ಕಡಿಮೆ. ಆದರೆ ಇದರ ನಿರ್ಲಕ್ಷ್ಯ ಸಲ್ಲದು.

ಮಹಿಳೆ ಗರ್ಭಿಣಿಯಾದ ನಂತರ 24ನೇ ವಾರದಿಂದ ಸಾಮಾನ್ಯವಾಗಿ ಇದು ಕಾಣಿಸಿಕೊಳ್ಳುತ್ತದೆ. ಅಧಿಕ ಸಕ್ಕರೆಯುಕ್ತ ರಕ್ತವು ಹೊಟ್ಟೆಯಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ.

ಚಿಕಿತ್ಸೆ: ಕಾರ್ಬೋಹೈಡ್ರೇಟ್ಸ್ ಹೆಚ್ಚಿನ ಪ್ರಮಾಣದಲ್ಲಿರುವ ಆಹಾರವನ್ನು ವರ್ಜಿಸಬೇಕು.
ವ್ಯಾಯಾಮ: ಹಾಗೆಯೇ ಗರ್ಭವತಿಯಾಗಿದ್ದಾಗ ಮಧುಮೇಹ ಹೊಂದಿದ್ದರೆ ವ್ಯಾಯಾಮ ಮಾಡುವುದು ಅತಿ ಮುಖ್ಯ.

ರಕ್ತ ತಪಾಸಣೆ: ಗರ್ಭಧಾರಣೆ ಸಂದರ್ಭದಲ್ಲಿ ಆರೋಗ್ಯ ಕಾಳಜಿಗಾಗಿ ಸ್ವಯಂ ರಕ್ತ ತಪಾಸಣೆ ಮಾಡಿಕೊಳ್ಳುವುದರಿಂದ ಕಾರ್ಯಯೋಜನೆ ಸರಳ.

ಇನ್ಸುಲಿನ್: ಗರ್ಭಸ್ಥ ಮಧುಮೇಹಿಗಳು ತಮ್ಮ ದೇಹ ಸರಿಯಾಗಿ ಕಾರ‌್ಯನಿರ್ವಹಿಸದೇ ಇದ್ದಾಗ ಇನ್ಸುಲಿನ್ ತೆಗೆದುಕೊಳ್ಳಬೇಕು.

ದುಷ್ಪರಿಣಾಮಗಳು
ಸಾಮಾನ್ಯವಾಗಿ, ಮಧುಮೇಹ ಹೊಂದಿದ ಗರ್ಭಿಣಿಯರ ಮೂತ್ರ ಜನಕಾಂಗಕ್ಕೆ ಸೋಂಕು ತಗುಲಿ ಬ್ಯಾಕ್ಟೀರಿಯಾ ಆಗಿ ಪರಿವರ್ತನೆಗೊಳ್ಳುವುದಲ್ಲದೇ ಅದು ಬೆಳೆಯಲು ದಾರಿ ಸುಗಮವಾಗುತ್ತದೆ.

ಪ್ರೀ ಎಕ್ಲಾಂಪ್ಸಿಯಾ: ಇದು ಗರ್ಭಿಣಿಯಲ್ಲಿ ಕಾಣಿಸಿಕೊಳ್ಳುವುದು ಸಹಜ. ಅಧಿಕ ರಕ್ತದೊತ್ತಡ ಹೊಂದಿದ್ದರೆ, ಮುಖ ಕೈ ಕಾಲುಗಳಲ್ಲಿ ಬಾವು ಬರುತ್ತಿದ್ದರೆ, ತೀವ್ರ ತೂಕ ಹೊಂದಿದ್ದದರೆ ಪ್ರೀ ಎಕ್ಲಾಂಪ್ಸಿಯಾ ಬರುತ್ತದೆ.

ಮ್ಯೋಕ್ರೋಸೋಮಿಯಾ: (ಬೃಹದಾಕಾರದ ಮಗು) ರಕ್ತದಲ್ಲಿರುವ ಅಧಿಕ ಸಕ್ಕರೆ ಅಂಶವನ್ನು ಗರ್ಭದಲ್ಲಿರುವ ಮಗು ಪಡೆದು, ಸಾಕಷ್ಟು ಇನ್ಸುಲಿನ್ ತಯಾರಿಸುತ್ತದೆ. ಹೆಚ್ಚುವರಿ ಇನ್ಸುಲಿನ್ ಮತ್ತು ಸಕ್ಕರೆ ಅಂಶವು ಮಗುವಿನ ಬೆಳವಣಿಗೆ ಹಾಗೂ ಅಧಿಕ ಬೊಜ್ಜಿಗೆ ದಾರಿ ಮಾಡಿಕೊಡುತ್ತದೆ.

ಹೈಪೋಗ್ಲೈಸೆಮಿಯಾ: (ಕಡಿಮೆ ಸಕ್ಕರೆ ಅಂಶ) ಪ್ರಸವದ ಸಂದರ್ಭದಲ್ಲಿ ರಕ್ತದಲ್ಲಿ ಅಧಿಕ ಸಕ್ಕರೆ ಅಂಶ ಹೊಂದಿದ್ದರೆ ಮಗು ಹೆಚ್ಚುವರಿ ಇನ್ಸುಲಿನ್ ಉತ್ಪಾದಿಸುವುದರಿಂದ ಮಗುವಿನ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗುತ್ತದೆ.

ಪ್ರಸವದ ನಂತರ ಮಧುಮೇಹ ಸಹಜಗೊಳ್ಳುವುದೇ?
ರಕ್ತದಲ್ಲಿರುವ ಸಕ್ಕರೆ ಅಂಶವು ಶಿಶುವಿಗೆ ಜನ್ಮ ನೀಡಿದ ನಂತರ ಸಹಜ ಸ್ಥಿತಿಗೆ ಮರಳುತ್ತದೆ. ಆದರೂ ಉತ್ತಮ ಆಹಾರ ಕ್ರಮ ರೂಪಿಸಿಕೊಳ್ಳುವುದು ಅತ್ಯಂತ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡುತ್ತಾ ಆರೋಗ್ಯಯುತ ತೂಕವನ್ನು ಕಾಪಾಡಿಕೊಳ್ಳಬೇಕು.

ಯಾರಲ್ಲಿ ಕಾಣಿಸಿಕೊಳ್ಳುತ್ತದೆ?
30 ವರ್ಷ ಮೀರಿದ ಮಹಿಳೆಯರು

ಅತಿ ಹೆಚ್ಚು ತೂಕ ಹೊಂದಿದವರು

ಕುಟುಂಬದಲ್ಲಿ ಅದಾಗಲೇ ಮಧುಮೇಹಿಗಳಿದ್ದವರು

9 ಪೌಂಡ್‌ಗಳಿಗಿಂತ ಅಧಿಕ ತೂಕದ ಮಗುವನ್ನು ಹೊಂದಿದವರು

ನಿಗದಿತ ಅವಧಿಗಿಂತ ಮುಂಚಿನ ಹೆರಿಗೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.