ADVERTISEMENT

ನಿಮ್ಮ ಹೃದಯ- ಪ್ರಶ್ನೋತ್ತರ

ಡಾ.ಸಿ.ಎನ್‌.ಮಂಜುನಾಥ್‌
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಎ.ವಿ.ಶ್ರೀನಿವಾಸ, 65 ವರ್ಷ, ಹಾಸನ
 ನಾನು 1991ರಿಂದ ರಕ್ತದೊತ್ತಡಕ್ಕೆ ಮಾತ್ರೆಗಳನ್ನು ಸೇವಿಸುತ್ತಿದ್ದೇನೆ.  ದೀರ್ಘಕಾಲ ಮಾತ್ರೆ ಸೇವಿಸುವುದರಿಂದ ಮುಂದೆ ಏನಾದರು ತೊಂದರೆ ಉಂಟಾಗುತ್ತದೆಯೆ?

 ಮುಖ್ಯವಾಗಿ ಅಧಿಕವಾದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು.  ದೀರ್ಘಕಾಲ ಮತ್ತು ಜೀವನ ಪರ್ಯಂತ ಮಾತ್ರೆಗಳನ್ನು ಸೇವಿಸುವುದರಿಂದ ಯಾವ ತೊಂದರೆ ಕೂಡ ಇರುವುದಿಲ್ಲ.  ಈ ಮಾತ್ರೆಗಳನ್ನು ತೆಗೆದುಕೊಂಡರೆ, ಬೇರೆ ತೊಂದರೆಯಾಗುತ್ತದೆ ಎಂದು ನೀವು ತಿಳಿದರೆ ಅದು ತಪ್ಪು ಕಲ್ಪನೆ.

ಅಧಿಕ ರಕ್ತದೊತ್ತಡಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳದಿದ್ದರೆ, ಪಾರ್ಶುವಾಯು (ಸ್ಟ್ರೋಕ್) ಹೃದಯದ ಶಕ್ತಿಹೀನತೆ ಮತ್ತು ಹೃದಯಾಘಾತವಾಗುವ ಸಂಭವ ಹೆಚ್ಚಿರುತ್ತದೆ.  ಸಾಮಾನ್ಯವಾಗಿ ಇಂತಹ ಅಧಿಕ ರಕ್ತದೊತ್ತಡ ಇರುವವರು ವರ್ಷಕೊಮ್ಮೆ ಬ್ಲಡ್ ಶುಗರ್/ಕೊಲೆಸ್ಟ್ರಾಲ್/ಯೂರಿಯಾ ಕ್ರಿಯಾಟಿನೈನ್/ಎಲೆಕ್ಟ್ರೋಲೈಟ್ಸ್/ಇಸಿಜಿ/ಎಕೋ ಮತ್ತು ಟಿಎಂಟಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸೂಕ್ತ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.