ADVERTISEMENT

ನಿಮ್ಮ ಹೃದಯ

ಡಾ.ಸಿ.ಎನ್‌.ಮಂಜುನಾಥ್‌
Published 26 ಅಕ್ಟೋಬರ್ 2012, 19:30 IST
Last Updated 26 ಅಕ್ಟೋಬರ್ 2012, 19:30 IST

 ನೇತ್ರಾವತಿ, ಕುಮಟಾ
ನನ್ನ ಮಗಳಿಗೆ 5 ವರ್ಷ. ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಬೇಕೇ? ಎಷ್ಟನೇ ವರ್ಷದಲ್ಲಿ ಮಾಡಿಸಿದರೆ ಒಳ್ಳೆಯದು ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೂಲಂಕಷವಾಗಿ ತಿಳಿಸಿ.

- ಹೃದಯದಲ್ಲಿ ರಂಧ್ರದ ಸಮಸ್ಯೆ ಇರುವವರಿಗೆ  ಸಾಮಾನ್ಯವಾಗಿ ಪದೇ ಪದೇ ಕೆಮ್ಮು, ಜ್ವರ, ನ್ಯುಮೋನಿಯಾ ಕಾಣಿಸಿಕೊಂಡು ಬೆಳವಣಿಗೆ ಕುಂಠಿತವಾಗುತ್ತದೆ. ಹೃದಯದ ರಂಧ್ರ ದೊಡ್ಡದಾಗಿದ್ದಲ್ಲಿ, ಮೇಲ್ಕಂಡ ಲಕ್ಷಣಗಳು ತಮ್ಮ ಮಗುವಿಗೆ ಇದ್ದರೆ ಚಿಕಿತ್ಸೆಯ ಅಗತ್ಯ ಇರುತ್ತದೆ. ಹೃದಯದ ರಂಧ್ರ ಬಹಳ ಚಿಕ್ಕದಿದ್ದರೆ ಇನ್ನಷ್ಟು ದಿನ ಕಾಯಬಹುದು.

ಯಾವುದಕ್ಕೂ ನಿಮ್ಮ ಮಗುವನ್ನು ನಮ್ಮ ಆಸ್ಪತ್ರೆಗೆ ಒಮ್ಮೆ ಕರೆದುಕೊಂಡು ಬಂದು ಎಕೋಕಾರ್ಡಿಯೋಗ್ರಾಂ ತಪಾಸಣೆ ಮಾಡಿಸಿ. ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು. ಆತಂಕಪಡುವ ಪ್ರಮೇಯ ಇಲ್ಲ.

ಎ.ಎನ್.ಪವಿತ್ರಾ ಗೌಡ,  ಬೆಂಗಳೂರು

 ನನಗೆ ಪದೇ ಪದೇ ಎದೆನೋವು ಬರುತ್ತಿತ್ತು. ಇಸಿಜಿ, ಕಲರ್ ಡಾಪ್ಲರ್ ಮತ್ತು ಕಾರ್ಡಿಯಾಕ್ ಆಂಜಿಯೊ ತಪಾಸಣೆಯನ್ನು ಮಾಡಿಸಿದೆ. ಎಲ್ಲವೂ ನಾರ್ಮಲ್ ಇದೆ, ಆದರೂ ಇನ್ನೂ ಎದೆ ನೋವು ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಸೂಚಿಸಿರುವ ಮಾತ್ರೆಗಳನ್ನು ಎಷ್ಟು ದಿನ ತೆಗೆದುಕೊಳ್ಳಬೇಕು, ದಯವಿಟ್ಟು ತಿಳಿಸಿ.

-ತಮಗೆ ಇರುವ ಎದೆನೋವು ಹೃದಯಕ್ಕೆ ಸಂಬಂಧಪಟ್ಟದ್ದೋ ಇಲ್ಲವೋ ಎಂದು ತಿಳಿಯಬೇಕಾದಲ್ಲಿ, ಸ್ಟ್ರೆಸ್ ಇಸಿಜಿಯನ್ನು () ಮಾಡಿಸಬೇಕು.  ಇದರಲ್ಲಿ ಏನೂ ವ್ಯತ್ಯಾಸ ಇಲ್ಲದಿದ್ದರೆ ತಮಗಿರುವ ಎದೆನೋವು ಹೃದಯಕ್ಕೆ ಸಂಬಂಧಿಸಿದ್ದಾಗಿರುವುದಿಲ್ಲ ಅಥವಾ ಇದರಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಲ್ಲಿ, ಕರೋನರಿ ಆಂಜಿಯೋಗ್ರಾಂ ಮಾಡುವ ಅವಶ್ಯಕತೆ ಇರುತ್ತದೆ. ಯಾವುದಕ್ಕೂ   ತಪಾಸಣೆ ಮಾಡಿಸಿ, ಸೂಕ್ತ ಸಲಹೆಯನ್ನು ಪಡೆದರೆ ಒಳ್ಳೆಯದು.

ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಉತ್ತರಿಸಲಿದ್ದಾರೆ.

ಪ್ರಶ್ನೆ ಕಳುಹಿಸುವ ವಿಳಾಸ: ಸಂಪಾದಕರು, ನಿಮ್ಮ ಹೃದಯ, ಭೂಮಿಕಾ ವಿಭಾಗ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು- 560001
ಇ-ಮೇಲ್ ವಿಳಾಸ: bhoomika@prajavani.co.in

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.