ADVERTISEMENT

ವ್ಯವಸ್ಥೆಯ ದುರುಪಯೋಗ ಬೇಡ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2011, 18:30 IST
Last Updated 4 ಫೆಬ್ರುವರಿ 2011, 18:30 IST

~ಯಾವುದೇ ಒಂದು ಹೊಸ ವ್ಯವಸ್ಥೆಗೂ ತನ್ನದೇ ಆದ ಅನಾನುಕೂಲತೆಗಳೂ ಇರುತ್ತವೆ. ಅಂತೆಯೇ ಈ ವ್ಯವಸ್ಥೆಯಲ್ಲಿಯೂ ದುರುಪಯೋಗ ಮಾಡಿಕೊಳ್ಳುವವರು ಇದ್ದೇ ಇರುತ್ತಾರೆ. ಆದರೆ ಆಸ್ಪತ್ರೆಗಳು ಇದಕ್ಕೆ ಅವಕಾಶ ನೀಡಬಾರದು.ಹೆರಿಗೆಯಿಂದ ದೇಹದ ಆಕಾರ ಕೆಡುತ್ತದೆ, ದೈಹಿಕ ಮಾಟದಲ್ಲಿ ವ್ಯತ್ಯಾಸವಾಗುತ್ತದೆ ಎಂಬ ಕಾರಣಕ್ಕೆ ಬಾಡಿಗೆ ತಾಯಿಯ ಮೊರೆ ಹೋಗುವವರೂ ಇದ್ದಾರೆ. ವೃತ್ತಿ ನಿರತ ಮಹಿಳೆಯರು ತಾಯ್ತನದಿಂದ ತಮ್ಮ ಭವಿಷ್ಯಕ್ಕೆ ಅಡ್ಡಿಯಾದೀತು ಎಂಬ ಕಾರಣವೊಡ್ಡಿ ತಾಯ್ತನವನ್ನೂ ಬಾಡಿಗೆ ಪಡೆಯಲು ಆಲೋಚಿಸುವುದೂ ಇದೆ. ಇದು ಪ್ರಕೃತಿಗೆ ವ್ಯತಿರಿಕ್ತವಾದುದಷ್ಟೇ ಅಲ್ಲ, ಹೆಣ್ಣುತನಕ್ಕೇ ಅಪಮಾನಕರ ಸಂಗತಿ’ ಎನ್ನುತ್ತಾರೆ ಸ್ತ್ರೀ ತಜ್ಞೆ ಡಾ.ಕಾಮಿನಿರಾವ್.

ಅದೇ ರೀತಿ ಅನೇಕ ಮಹಿಳೆಯರು ಕೇವಲ ಹಣದ ಮೇಲಿನ ಮೋಹದಿಂದ ಬಾಡಿಗೆ ತಾಯಿಯಾಗಲು ಹಂಬಲಿಸುತ್ತಾರೆ. ಮೆಟ್ರೊ ನಗರಗಳಲ್ಲಂತೂ ಗರ್ಭ ಬಾಡಿಗೆಯಿಂದ ಹಣ ಗಳಿಸುವುದು ಅತ್ಯಂತ ಸುಲಭದ ಮಾರ್ಗವೆಂದು ಪರಿಗಣಿಸಿದಂತಿದೆ. ಅನೇಕ ಕಾಲೇಜು ಹುಡುಗಿಯರೂ ಕೇವಲ ಹಣಕ್ಕಾಗಿ ಗರ್ಭ ಬಾಡಿಗೆ ನೀಡಲು ಮುಂದೆ ಬರುತ್ತಿರುವುದು ಕಳವಳಕಾರಿ.

ಆದರೆ ಇಂತಹ ಯಾವುದೇ ಸಂಗತಿಗಳಿಗೆ ನಮ್ಮ ಕೇಂದ್ರದಲ್ಲಿ ಅವಕಾಶ ನೀಡಲಾಗುವುದಿಲ್ಲ. ಬಾಡಿಗೆ ತಾಯ್ತನ ಸೇವೆಯನ್ನು ಬಯಸುವ ಮಹಿಳೆಗೆ ದೈಹಿಕ ತೊಂದರೆಗಳಿರುವುದನ್ನು ಖಚಿತಪಡಿಸಿಕೊಂಡ ಮೇಲಷ್ಟೇ ನಾವು ಈ ಚಿಕಿತ್ಸೆಯನ್ನು ಆರಂಭಿಸುತ್ತೇವೆ ಎನ್ನುವುದು ಅವರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.