ADVERTISEMENT

ಸರಾಗ ಉಸಿರಾಟ ‘ಅಮೃತ’ ಚಿಕಿತ್ಸೆ

ಡಾ ಜಿ.ನರಸಿಂಹಸ್ವಾಮಿ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ಚಳಿಗಾಲ ಬಂತೆಂದರೆ ಸಾಮಾನ್ಯವಾಗಿ ಕಾಡುವ  ಶೀತ ಘಾತಕ ರೋಗವಾಗಿ ತಲ್ಲಣಗೊಳಿಸುತ್ತದೆ. ಶೀತವು ಮನುಷ್ಯರಲ್ಲಿ ಸಾಮಾನ್ಯವಾಗಿ ಕಾಡುವ ತೊಂದರೆ, ಇದಕ್ಕೆ ಕಾರಣ ಋತು ವೈಪರೀತ್ಯ. ಎಲ್ಲಾ ರೋಗಗಳಿಗೂ ಮೂಲವಾಗಿ ಮೊದಲು ಶೀತಬಾಧೆ ಕಾಣಿಸಿಕೊಳ್ಳುತ್ತದೆ. ಇದು ೩ ದಿವಸ ಮುಂಚಿತವಾಗಿ ರೋಗದ ಲಕ್ಷಣವಾಗಿ ಕಾಣಿಸಿಕೊಳ್ಳುತ್ತದೆ.

ಸೀನುವಿಕೆ, ತಲೆನೋವು, ಉಸಿರುಕಟ್ಟುವಿಕೆ, ಕೆಮ್ಮು, ಮೂಗಿನಲ್ಲಿ ಸೊರಗುಟ್ಟುವಿಕೆ ಮತ್ತು ಆಯಾಸ ಇವು ಸಾಮಾನ್ಯ ಶೀತದ ಗುಣಲಕ್ಷಣ­ಗಳು. ಇವು ೨ ರಿಂದ ೧೪ ದಿನಗಳವರೆಗೆ ಇರು­ತ್ತವೆ. ಇದರ ಹೊರತಾಗಿ, ಶೀತ ಪದೇ ಪದೇ ಕಾಣಿಸಿ­ಕೊಂಡು ಬಹಳ ದಿನ ಕಾಡಿ­ದರೆ ಅದು ಒಂದು ಬಗೆಯ ಅಲರ್ಜಿ ಅಥವಾ ಸೈನುಸೈಟಿಸ್ ಎನಿಸಿಕೊಳ್ಳುತ್ತದೆ.

ಸೈನುಸೈಟಿಸ್ ಎಂದರೆ ಇಲ್ಲಿ ಮೂಗಿನ ಒಳ ಪದರದ (ಮ್ಯೂಕಸ್ ಮೆಮ್‌ಬ್ರೇನ್) ಹಣೆ ಮತ್ತು ಮುಖದ ಮೂಳೆಗಳಲ್ಲಿರುವ ರಂಧ್ರಗಳ ಒಳಭಾಗವು ಸೊಂಕಿಗೊಳಗಾಗಿರುತ್ತದೆ. ಈ ರಂಧ್ರಗಳಿಂದ ಸೋಂಕಿಗೊಳಗಾದ ದ್ರವವು ಮೂಗಿನೊಳಗೆ ಸೋರಲು ಪ್ರಾರಂಭವಾಗುತ್ತದೆ. ಮೂಗಿನ ಒಳಪದರದ ಉರಿಯೂತದಿಂದಾಗಿ ದ್ರವವು ಸ್ರವಿಸದೆ ಗಾಳಿಯಲ್ಲಿ ಬಂಧಿಸಲ್ಪಟ್ಟು ತೀವ್ರವಾದ ನೋವು, ಕೀವು ಮತ್ತು ದುರ್ಗಂಧಯುಕ್ತ ಕಫಕ್ಕೆ ಕಾರಣವಾಗುತ್ತದೆ. ಮೂಗಿನ ಒಳಭಾಗದಲ್ಲಿ ನಿರ್ವಾತ ಸ್ಥಿತಿಯಿಂದಾಗಿ ಸಾಮಾನ್ಯವಾಗಿ ಕಣ್ಣುಗಳ ಮೇಲ್ಭಾಗ, ಮಧ್ಯಭಾಗ ಮತ್ತು ಹಿಂಭಾಗಗಳಲ್ಲಿ ತೀವ್ರ ನೋವುಂಟಾಗುತ್ತದೆ. ಗಲ್ಲದ ಭಾಗದಲ್ಲೂ ನೋವು ಉಂಟಾಗುತ್ತದೆ.

ಸೋಂಕಿಗೊಳಗಾದ ಭಾಗಗಳಲ್ಲಿ ನೋವು ಮತ್ತು ತಲೆನೋವು ಬೆಳಗಿನ ಸಮಯದಲ್ಲಿ ತೀವ್ರವಾಗಿದ್ದು ಸಂಜೆಯ ವೇಳೆಗೆ ಕ್ಷೀಣಿಸುತ್ತದೆ. ಹಣೆಯ ಭಾಗ­ದಲ್ಲಿ ಮುಟ್ಟಲು ಅಸಾಧ್ಯವಾದ ನೋವಿರುತ್ತದೆ. ಮೂಗಿನ ಒಳಪದರದ ಉರಿಯೂತದಿಂದ ಸ್ರವಿಸು­ವಿಕೆ ನಿಂತು, ನಿರ್ವಾತ ಸ್ಥಿತಿಯಿಂದಾಗಿ ಹಳದಿ ಹಸಿರು ಬಣ್ಣ ಮಿಶ್ರಿತ ಕೀವು ಮೂಗಿನಿಂದ ಹೊರಬರ­ಲಾರಂಭಿಸುತ್ತದೆ. ಇದರಿಂದಾಗಿ ವಾಸನಾ ಶಕ್ತಿ, ರುಚಿ ನೋಡುವ ಶಕ್ತಿ ಕುಂದುತ್ತದೆ. ಜ್ವರ ಬಂದಂತಾಗಿ ಗಂಟಲು ಕಟ್ಟಿಕೊಂಡು ಕೆಮ್ಮು ಪ್ರಾರಂಭವಾಗುತ್ತದೆ. ಇಂತಹ ಸೈನಸ್ ಸೋಂಕು ಗುಣವಾಗಲು ಬಹಳ ದಿನಗಳು ಬೇಕಾಗುವುದು ಅಥವಾ ದೀರ್ಘ ಕಾಲದ ವ್ಯಾಧಿಯಾಗಿ ಪರಿಣಮಿಸಬಹುದು. ಕೆಲವು ಸಲ ದೀರ್ಘ ಕಾಲದ ಸೈನಸ್ ಪದೇ ಪದೇ ಹಾಗೂ ವಿಳಂಬವಾಗಿ ಗುಣವಾಗುವ ಶೀತದಿಂದ ಭಾಧಿಸುತ್ತದೆ. ಆದರೆ ಗುಣವಾಗದ ಸೈನುಸೈಟಿಸ್, ಬ್ರಾಂಕೈಟಿಸ್ ಅಥವಾ ಉಬ್ಬಸ ರೋಗಕ್ಕೆ ಹಾಗೂ ಕಿವಿಯೂತಕ್ಕೆ ತಿರುಗುತ್ತದೆ. ಕೆಲವೊಂದು ಸಲ ಈ ಸೈನುಸೈಟಿಸ್ ಸೋಂಕು ಮೆದುಳಿನ ಒಳಪದರಗಳಿಗೂ ಪಸರಿಸಿ ಮೆನಿಂಜೈಟಿಸ್ ಮತ್ತು ಬ್ರೈನ್‌ಆಬ್‌ಸೆಸ್ ಉಂಟಾಗುತ್ತದೆ.

ಸೀನು
ಅರಿವಿದ್ದೊ ಅಥವಾ ಅರಿವಿಲ್ಲದೆಯೋ ವೇಗವಾಗಿ ಗಾಳಿಯನ್ನು ಮೂಗಿನೊಳಗೆ ಎಳೆದುಕೊಂಡು ಅಷ್ಟೇ ವೇಗವಾಗಿ ಮೂಗು ಮತ್ತು ಬಾಯಿಯ ಮೂಲಕ ಹೊರ ಬರುವಾಗ ಒಂದು ರೀತಿಯ ಶಬ್ದ ಉತ್ಪತ್ತಿಯಾಗುತ್ತದೆ. ಇದೇ ಸೀನು. ಸೀನು ಒಂದು ರೀತಿಯ ಉಪಕಾರಾತ್ಮಕ ಕ್ರಿಯೆ. ಇದರಿಂದ ದೂಳಿನ ಕಣಗಳು ಹೊರದೂಡಲಾಗುತ್ದೆ. ಉಸಿರಾಡುವಾಗ ಒವ್ಮೊಮ್ಮೆ ಗಾಳಿಯ ಜೊತೆ ದೂಳಿನ ಕಣಗಳು ಒಳಹೋದಾಗ ಮೆದುಳಿನ ನರಜಾಲಕ್ಕೆ ಪ್ರಚೋದನೆಯಾಗಿ ಮಿಂಚಿನಂತೆ ಕಾರ್‍ಯ ನಿರ್ವಹಿಸಿ ಸೀನು ಕ್ರಿಯೆಯಿಂದ ಅವುಗಳನ್ನು ಹೊರತಳ್ಳಲಾಗುತ್ತದೆ. ಇದಕ್ಕೆ ಕಾರಣಗಳು ಅಲರ್ಜಿ ಮತ್ತು ಮೂಗು ಸೋರುವಿಕೆ. ಆದರೆ ನಿರಂತರ ಸೀನುವಿಕೆ ಬಹಳ ದಿನಗಳವರೆಗೆ ಕಾಡಿಸಿ ಅಸ್ತಮಾ ಅಥವಾ ಉಬ್ಬಸ ಉಂಟಾಗುತ್ತದೆ.

ಅಸ್ತಮಾ (ವೀಜಿಂಗ್)
ಬ್ರಾಂಕೈಟಿಸ್ ಮಕ್ಕಳಲ್ಲಿ ಅತಿಯಾಗಿ ಕಾಡುವ ಸಮಸ್ಯೆಯಾಗಿದೆ. ಇತ್ತೀಚಿನ ಅಂಕಿ ಅಂಶದ ಪ್ರಕಾರ ೧೨ ರಿಂದ ೧೫% ಹುಡುಗರು ಮತ್ತು ೧೦ ರಿಂದ ೧೨% ಹುಡುಗಿಯರು ಒಂದಲ್ಲ ಒಂದು ರೀತಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ಅತಿಯಾದ ವಾಯು ಮಾಲಿನ್ಯದಿಂದ ಹೆಚ್ಚಿದೆ. ಮುಖ್ಯವಾಗಿ ಮೋಟಾರು ವಾಹನಗಳಿಂದ ಹೊರಬರುವ ವಿಷಕಾರಿ ಅನಿಲಗಳು. ತೀವ್ರವಾದ ಸೈನುಸೈಟಿಸ್ ಮಕ್ಕಳಲ್ಲಿ ಎಲ್ಲಾ ರೀತಿಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. (ಆಟಪಾಟಗಳಲ್ಲಿ ಹಾಗೂ ಇನ್ನಿತರ ಚಟುವಟಿಕೆ) ಇದರಿಂದ ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ ಉಸಿರಾಟದ ತೊಂದರೆ ಉಂಟಾಗುತ್ತದೆ.

ಅಸ್ತಮಾ ರೋಗಕ್ಕೆ ಆಯುರ್ವೇದದ ಚಿಕಿತ್ಸೆ
- ಆಯುರ್ವೇದದ ಚಿಕಿತ್ಸೆಯಲ್ಲಿ ಅಸ್ತಮಾವನ್ನು ನಿಗ್ರಹಿಸಲು ವಾತಾನುಲೋಮನ ಅಂದರೆ ವಾಯುವಿನ ಮಾರ್ಗವನ್ನು ಬದಲಿಸುವಿಕೆ ಹಾಗೂ ಅವಿರೋಧವಾದ ಕಫವನ್ನು ವಿರೇಚನ ಬೇಧಿಯ ಮೂಲಕ ಕಫವನ್ನು ಮತ್ತು ಪಿತ್ತವನ್ನು ಹೊರಹಾಕುವ ವಿಧಾನವನ್ನು ಚಿಕಿತ್ಸೆಯಲ್ಲಿ ಅಳವಡಿಸಿಕೊಳ್ಳಬೇಕು. ಔಷಧಿಯಲ್ಲಿ ಪ್ರಮುಖವಾಗಿ ಉಷ್ಣ, ಸೂಕ್ಷ್ಮ, ತೀಕ್ಷ್ಣವಾದ ಗುಣವುಳ್ಳ ಕಫವನ್ನು ಕರಗಿಸುವಂಥಹ ಹಾಗೂ ವಾಯುವಿನ ಮಾರ್ಗವನ್ನು ಬದಲಿಸುವ ವಿಮುಖಮಾಡುವ ಗುಣವುಳ್ಳ ಗಿಡಮೂಲಿಕೆಗಳನ್ನು ಉಪಯೋಗಿಸಬೇಕು. ಸಾಮಾನ್ಯವಾಗಿ ಅಸ್ತಮಾ ಖಾಯಿಲೆಯ ಚಿಕಿತ್ಸೆಯಲ್ಲಿ ಆಡುಸೋಗೆ, ಆಡುಮುಟ್ಟದ ಬಳ್ಳಿ, ಕರಿಮೆಣಸು, ಹಸಿಶುಂಠಿ, ಮೆಂತ್ಯ, ಬೆಳ್ಳುಳ್ಳಿ, ಲವಂಗ, ಚಕ್ಕೆ, ತೇಜಪತ್ರ, ಹಿಪ್ಪಲಿ ಇವುಗಳನ್ನು ವಿವಿಧ ರೀತಿಯ ಔಷಧಿ ಕಲ್ಪಗಳಿಂದ ಉಪಯೋಗಿಸಲ್ಪಡುತ್ತದೆ. ಇವುಗಳಿಂದ ತಯಾ­ರಾದ ಮಾತ್ರೆ, ಕಷಾಯ, ಚೂರ್ಣ, ಲೇಹ್ಯ , ಆಸವ ಮತ್ತು ಅರಿಷ್ಠಗಳನ್ನು ಉಪಯೋಗಿಸಲಾ­ಗುತ್ತದೆ. ಅಸ್ತಮಾ (ದಮ್ಮು, ಕೆಮ್ಮು) ಗುಣಪಡಿ­ಸಿ­ಕೊಳ್ಳಲು ನಿಯಮಿತವಾದ ಪಥ್ಯ ಹಾಗೂ ಔಷಧಿ ಉಪಯೋಗಿಸುವುದರಿಂದ ಸಾಧ್ಯ. ಔಷಧಿಯ ಜತೆಗೆ ಯಾವ ಕಾರಣಗಳಿಂದ ಅಸ್ತಮಾ ರೋಗ ಬರು­ವುದೋ ಅವುಗಳನ್ನು ವರ್ಜ್ಯ  ಮಾಡುವುದರಿಂದ ರೋಗವನ್ನು ಹತೋಟಿಗೆ ತರಬಹುದು. ನಿಯಮಿತವಾಗಿ ಅಮೃತ ಔಷಧಿ­ಯನ್ನು ಉಪಯೋಗಿಸುವುದರಿಂದ (ಕನಿಷ್ಟ ೩-೪ ತಿಂಗಳವರೆಗೆ ) ರೋಗವನ್ನು ಸಂಪೂರ್ಣ ಗುಣಪಡಿಸಬಹುದು.

(ಮೊಬೈಲ್: ೯೪೪೮೮ ೫೫೩೧೩)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.