ADVERTISEMENT

ಹೆಚ್ಚು ಹೊತ್ತು ಕುಳಿತು ಕೆಲಸ: ಹೃದಯಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2011, 19:30 IST
Last Updated 12 ಆಗಸ್ಟ್ 2011, 19:30 IST
ಹೆಚ್ಚು ಹೊತ್ತು ಕುಳಿತು ಕೆಲಸ: ಹೃದಯಕ್ಕೆ ಕುತ್ತು
ಹೆಚ್ಚು ಹೊತ್ತು ಕುಳಿತು ಕೆಲಸ: ಹೃದಯಕ್ಕೆ ಕುತ್ತು   

ನೀವು ಸುಮಾರು 10 ಗಂಟೆ ಹಾಗೂ ಅದಕ್ಕಿಂತ ಹೆಚ್ಚು ಸಮಯ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುತ್ತೀರಾ?

ಹಾಗಾದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ಅಕಾಲ ಮರಣಕ್ಕೆ ತುತ್ತಾಗುವ ಅಪಾಯ ಹೆಚ್ಚುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಾಗೆಯೇ ಈ ಅಪಾಯದ ತೀವ್ರತೆ ದೈಹಿಕ ವ್ಯಾಯಾಮದ ಕೊರತೆ ಅಥವಾ ಕಡಿಮೆ ವ್ಯಾಯಾಮದ ಮೇಲೆ ಅವಲಂಬಿಸಿದೆ ಎಂದು ಆಸ್ಟ್ರೇಲಿಯಾದ ಮೆಲ್ಬರ್ನ್ ಐಡಿಐ ಹೃದಯ ಹಾಗೂ ಮಧುಮೇಹ ಇನ್‌ಸ್ಟಿಟ್ಯೂಟ್‌ನ  ಸಂಶೋಧಕ ನೆವಿಲ್ಲೆ ಒವೆನ್ ಹೇಳಿದ್ದಾರೆ.

ಅಂತೆಯೇ ತಮ್ಮ ಹೆಚ್ಚು ಸಮಯವನ್ನು ಶಾಲೆಯಲ್ಲಿ, ಮನೆಯಲ್ಲಿ ಹಾಗೂ ವಾಹನಗಳಲ್ಲಿ ಕುಳಿತೇ ಕಳೆಯುತ್ತಿರುವ ಮಕ್ಕಳ ಇಂದಿನ ಹಾಗೂ ಮುಂದಿನ ಭವಿಷ್ಯದ ಆರೋಗ್ಯವೂ ಅಪಾಯದ ಅಂಚಿನಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.