ADVERTISEMENT

ಕೋವಿಡ್‌ನಿಂದ ವೃದ್ಧರ ಮಿದುಳಿಗೆ ಹಾನಿ: ಅಧ್ಯಯನ

ಐಎಎನ್ಎಸ್
Published 18 ಜನವರಿ 2022, 10:27 IST
Last Updated 18 ಜನವರಿ 2022, 10:27 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸದಿಲ್ಲಿ: ಕೋವಿಡ್‌ 19 ಸೋಂಕು ವೃದ್ಧರ ಮಿದುಳಿಗೆ ಹೆಚ್ಚು ಹಾನಿಯನ್ನು ಉಂಟುಮಾಡುತ್ತದೆ. ಅಲ್ಝೈಮರ್‌ಗೆ ಒಳಗಾದವರಿಗಿಂತ ಹೆಚ್ಚಿನ ಹಾನಿ ಕೋವಿಡ್‌ನಿಂದ ಸಂಭವಿಸುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ನ್ಯೂಯಾರ್ಕ್‌ ಯೂನಿವರ್ಸಿಟಿಯ ಗ್ರಾಸ್‌ಮನ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನ ಸಂಶೋಧಕರ ತಂಡ ನಡೆಸಿದ ಅಧ್ಯಯನದಲ್ಲಿ ವೃದ್ಧರ ಮಿದುಳಿಗೆ ಹಾನಿಯಾಗುವ ವಿಚಾರ ಪತ್ತೆಯಾಗಿದೆ. ಕೋವಿಡ್‌ನಿಂದ ಗುಣಮುಖರಾದ ವೃದ್ಧರು ಟಾಕ್ಸಿಕ್‌ ಮೆಟಬೋಲಿಕ್‌ ಎನ್‌ಸೆಫೆಲೊಪತಿ (ಟಿಎಂಇ)ಯಿಂದ ಬಳಲುತ್ತಿರುತ್ತಾರೆ ಎಂದು ಡೈಲಿ ಮೇಲ್‌ ವರದಿ ಮಾಡಿದೆ.

ಸೋಂಕು, ನಂಜು ಅಥವಾ ಅಂಗಾಂಗ ವೈಫಲ್ಯದ ಫಲಿತಾಂಶವನ್ನು ಟಿಎಂಇ ಎನ್ನಲಾಗುತ್ತದೆ. ಇದರಿಂದ ಬಳಲುತ್ತಿರುವ ಶೇಕಡಾ 60ರಷ್ಟು ವೃದ್ಧರಲ್ಲಿ ಮಿದುಳಿಗೆ ಹಾನಿಯಾಗಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

ADVERTISEMENT

2020ರಲ್ಲಿ ಮೊದಲನೇ ಕೋವಿಡ್‌ ಅಲೆ ಇದ್ದ ಸಂದರ್ಭ ಈ ಅಧ್ಯಯನವನ್ನು ನಡೆಸಲಾಗಿದೆ. ನೂತನ ರೂಪಾಂತರ ತಳಿಗಳಾದ ಡೆಲ್ಟಾ ಮತ್ತು ಓಮೈಕ್ರಾನ್‌ ಪ್ರಕರಣಗಳಲ್ಲೂ ಮಿದುಳಿಗೆ ಹಾನಿ ಇದೆಯೇ ಎಂಬುದು ತಿಳಿದುಬಂದಿಲ್ಲ.

ಕೋವಿಡ್‌ ಬಂದ ನಂತರ ಟಿಎಂಇ ಬೆಳವಣಿಗೆ ಹೊಂದಬಹುದು ಅಥವಾ ಕೆಲವು ಸಂದರ್ಭ ಸರ್ಜರಿ ವೇಳೆ ಅರಿವಳಿಕೆ ನೀಡುವ ಸಂದರ್ಭ ಟಿಎಂಇ ಬೆಳವಣಿಗೆಯಾಗುತ್ತದೆ ಎಂದು ವರದಿ ತಿಳಿಸಿದೆ.

ದೇಹದ ಜೀವಕೋಶಗಳು ನಂಜಾಗಿ ಪರಿವರ್ತನೆಗೊಂಡಾಗ ಮತ್ತು ದೇಹದ ಸಾಮಾನ್ಯ ಕ್ರಿಯಾದಿಗಳು ನಡೆಯದಂತೆ ತಡೆದಾಗ ಟಿಎಂಇ ರೂಪ ತಾಳುತ್ತದೆ. ಇದು ಮಿದುಳಿನಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ನೆನಪಿನ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಐಎಎನ್‌ಎಸ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.