ADVERTISEMENT

ಥೈರಾಯಿಡ್‌ ಶಸ್ತ್ರಚಿಕಿತ್ಸೆ ಮಾಡಿಸಬಹುದೇ?

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 19:30 IST
Last Updated 15 ಜುಲೈ 2022, 19:30 IST
   

ಕಳೆದ 3 ವರ್ಷದಿಂದ ನನ್ನ ಥೈರಾಯಿಡ್ ಲೆಫ್ಟ್ ಲೋಬ್ ಗಾತ್ರ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಥೈರಾಯಿಡ್
ಟೆಸ್ಟ್, ಸ್ಕ್ಯಾನಿಂಗ್‌,ಎಫ್.ಎನ್.ಎ.ಸಿ ಟೆಸ್ಟ್ ಮಾಡಿಸುತ್ತಿದ್ದೆ. ರಿಪೋರ್ಟ್ ನಾರ್ಮಲ್‌ ಇದೆ. ಆದರೆ, ಈಚೆಗೆ ಥೈರಾಯಿಡ್ ಲೆಫ್ಟ್ ಲೋಬ್‌ನಲ್ಲಿ ನೋವು ಕಾಣಿಸುತ್ತಿದೆ. ಪಿಸಿಓಡಿ ಸಮಸ್ಯೆಯೂ ಇದೆ. ಆಹಾರ ನುಂಗಲು ಕಷ್ಟವಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿಸಲು ವೈದ್ಯರು ಸಲಹೆ ನೀಡಿದ್ದಾರೆ. ಇನ್ನು ಮದುವೆ ಆಗಿಲ್ಲ. ಥೈರಾಯಿಡ್‌ ಶಸ್ತ್ರಚಿಕಿತ್ಸೆ ಮಾಡಿಸಿದರೆ, ಮಗು ಆಗೋದಕ್ಕೆ ಏನಾದರೂ ತೊಂದರೆ ಆಗುತ್ತಾ ಮೇಡಂ?

ವಿಜಯಲಕ್ಷ್ಮಿ, 25 ವರ್ಷ

ಉತ್ತರ: ವಿಜಯಲಕ್ಷ್ಮಿ ಅವರೇ, ವೈದ್ಯರ ಸಲಹೆಯಂತೆ ಥೈರಾಯಿಡ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಮುಂದೆ ಮದುವೆಯಾಗಲು, ಮಕ್ಕಳಾಗುವುದಕ್ಕೆ ಏನು ತೊಂದರೆ ಇಲ್ಲ. ಥೈರಾಕ್ಸಿನ್‌ ಹಾರ್ಮೋನಿನ ಕೊರತೆಯುಂಟಾದರೆ ತಜ್ಞವೈದ್ಯರು ಅವಶ್ಯವಿದ್ದರೆ ಥೈರಾಕ್ಸಿನ್‌ ಮಾತ್ರೆ ತೆಗೆದುಕೊಳ್ಳಲು ಕೊಡುತ್ತಾರೆ. ಈ ರೀತಿ ಶಸ್ತ್ರಚಿಕಿತ್ಸೆ ಆದವರಿಗೆ ಮದುವೆಯಾಗಿ, ಮಕ್ಕಳಾಗಿವೆ. ಆತಂಕ ಬೇಡ. ವೈದ್ಯರ ಸಲಹೆ, ಸೂಚನೆಯನ್ನು ಪಾಲಿಸಿ.

ADVERTISEMENT

ಇನ್ನು ಪಿಸಿಓಡಿ ಸಮಸ್ಯೆಯನ್ನು ಜೀವನಶೈಲಿ ಉತ್ತಮಪಡಿಸಿಕೊಳ್ಳುವುದರಿಂದ ಹಾಗೂ ತಜ್ಞವೈದ್ಯರ ಸೂಕ್ತ ಚಿಕಿತ್ಸೆಯಿಂದ ಸರಿಪಡಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.