ADVERTISEMENT

ಟ್ರೈಗ್ಲಿಸರೈಡ್‌ ಸಮಸ್ಯೆಯೇ?ಮೀನನ್ನು ತಿನ್ನಿ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:45 IST
Last Updated 27 ಸೆಪ್ಟೆಂಬರ್ 2019, 19:45 IST
   

ಆರೋಗ್ಯಕ್ಕೆ ಹಾನಿ ಮಾಡಬಹುದಾದ ಕೊಲೆಸ್ಟ್ರಾಲ್‌ ಟ್ರೈಗ್ಲಿಸರೈಡ್‌. ಇದು ಹೆಚ್ಚು ಸದ್ದು ಮಾಡದೆ ನಿಮ್ಮ ಹೃದಯದ ಆರೋಗ್ಯವನ್ನು ಹದಗೆಡಿಸುತ್ತ ಹೋಗುತ್ತದೆ. ಟ್ರೈಗ್ಲಿಸರೈಡ್‌ ಮಟ್ಟವನ್ನು ಕಡಿಮೆ ಮಾಡುವ ಗುಣ ಒಮೆಗಾ–3 ಫ್ಯಾಟಿ ಆಮ್ಲದಲ್ಲಿದೆ. ಸಾಮಾನ್ಯವಾಗಿ ಕೆಲವು ಮೀನುಗಳಲ್ಲಿ ಕಂಡು ಬರುವ ಇದನ್ನು ಔಷಧ ರೂಪದಲ್ಲಿಯೂ ಸೇವಿಸಬಹುದು.

ಇತ್ತೀಚೆಗೆ ನಡೆದ ಸಂಶೋಧನೆಗಳ ಪ್ರಕಾರ ಒಮೆಗಾ–3 ಫ್ಯಾಟಿ ಆಮ್ಲವಿರುವ ಕೆಲವು ಔಷಧಗಳು ಟ್ರೈಗ್ಲಿಸರೈಡ್‌ ಅನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿ ನಿಯಂತ್ರಣದಲ್ಲಿಡುತ್ತವೆ. ಈಗಾಗಲೇ ಕೆಟ್ಟ ಕೊಲೆಸ್ಟ್ರಾಲ್‌ ಎಲ್‌ಡಿಎಲ್‌ ಕಡಿಮೆ ಮಾಡುವ ಸ್ಟ್ಯಾಟಿನ್‌ ಜೊತೆಗೆ ಇದನ್ನೂ ಕೊಡಲಾಗುತ್ತದೆ.

ಟ್ರೈಗ್ಲಿಸರೈಡ್‌ ಎಂಬ ಈ ಕೊಬ್ಬು ರಕ್ತದಲ್ಲಿ ಶೇಖರಣೆಯಾಗುತ್ತದೆ. ಇದು 200 ಎಂ.ಜಿ./ ಡಿ.ಎಲ್‌. ಇದ್ದರೆ ರಕ್ತನಾಳಗಳು ಕಿರಿದಾಗುತ್ತವೆ. ಇದರಿಂದ ಹೃದಯಾಘಾತ ಹಾಗೂ ಪಾರ್ಶ್ವವಾಯು ಸಾಧ್ಯತೆ ಅಧಿಕ. ಇದಲ್ಲದೇ ಟ್ರೈಗ್ಲಿಸರೈಡ್‌ ಮಟ್ಟ 500 ಎಂ.ಜಿ./ಡಿ.ಎಲ್‌ ಗಿಂತ ಜಾಸ್ತಿ ಇದ್ದರೆ ಪೇಂಕ್ರಿಯಾಟಿಸ್‌ ಸಮಸ್ಯೆ ಶುರುವಾಗಬಹುದು. ಅಂದರೆ ಇದು ಪೇಂಕ್ರಿಯಾಸ್‌ನಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ.

ADVERTISEMENT

ಟ್ರೈಗ್ಲಿಸರೈಡ್‌ ಕಡಿಮೆ ಮಾಡುವ ಒಮೆಗಾ–3 ಫ್ಯಾಟಿ ಆಮ್ಲವು ಮೀನಿನಲ್ಲಿ ಧಾರಾಳವಾಗಿರುತ್ತದೆ. ಸ್ಯಾಮನ್‌, ಮೆಕರೆಲ್‌, ಹೆರಿಂಗ್‌ ಹಾಗೂ ಟ್ಯುನಾ ಮೀನನ್ನು ವಾರಕ್ಕೆ ಎರಡು ಬಾರಿ ತಿಂದರೆ ದೇಹಕ್ಕೆ ಅಗತ್ಯವಿರುವ ಈ ಫ್ಯಾಟಿ ಆಮ್ಲವು ಲಭ್ಯವಾಗುತ್ತದೆ. ಆದರೆ ಮೀನಿನೆಣ್ಣೆಯ ಕ್ಯಾಪ್ಸೂಲ್‌ ಸೇವಿಸುವಾಗ ವೈದ್ಯರ ಸಲಹೆ ಪಡೆಯುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.