ADVERTISEMENT

ಕಾರ್ಯಕ್ಷಮತೆಯನ್ನು ಹೆಚ್ಚಿಸಲು, ಜ್ಞಾಪಕ ಶಕ್ತಿಯ ವೃದ್ಧಿಗೆ ಕಿರುನಿದ್ರೆ ಸಹಾಯಕ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 17:07 IST
Last Updated 26 ನವೆಂಬರ್ 2021, 17:07 IST
   

ಬಿಡುವಿಲ್ಲದ ಕೆಲಸದಲ್ಲಿ ಮುಳುಗುವವರಿಗೆ ಕಿರುನಿದ್ರೆ ಕನಸಿನ ಮಾತು. ಇನ್ನು ಹಲವರಿಗೆ ಕಿರುನಿದ್ರೆ ಸೋಮಾರಿತನದ ಸಂಕೇತ. ಆದರೆ ಅಧ್ಯಯನಗಳ ಪ್ರಕಾರ ದಿನದಲ್ಲಿನ ಕಿರುನಿದ್ರೆ ಕಾರ್ಯ ಕ್ಷಮತೆಯನ್ನು ಹೆಚ್ಚಿಸಲು, ಜ್ಞಾಪಕ ಶಕ್ತಿಯ ವೃದ್ಧಿಗೆ, ಕ್ರಿಯಾಶೀಲತೆಗೆ, ದಿನದ ಹುರುಪಿಗೆ ಅವಶ್ಯಕ ಎಂದು ಹೇಳುತ್ತವೆ.

ಮಧ್ಯಾಹ್ನದ ನಿದ್ರೆಗೆ ಕಾರಣಗಳೇನು ?

ಸಾಮಾನ್ಯವಾಗಿ ಎಲ್ಲರಿಗೂ ಮಧ್ಯಾಹ್ನದ ವೇಳೆ ಮಂಪರು ಹತ್ತುವುದು, ಕೆಲಸದಲ್ಲಿ ನಿರಾಸಕ್ತಿ ಸಹಜ. ಇದು ದೇಹದಲ್ಲಿನ ಸರ್ಕಾಡಿಯನ್ ಲಯ (CIRCARDIAN RHYTHM)ನ ನಿಯಮ . ಇದು ಒಂದು ದೇಹದಲ್ಲಿನ ಜೈವಿಕ ಗಡಿಯಾರ. ಈ ಜೈವಿಕ ಗಡಿಯಾರವ ವ್ಯಕ್ತಿಯ ನಿದ್ರೆ. ಹಾರ್ಮೋನ್ ಗಳ ಸಮತೋಲನ. ಅದರಲ್ಲಿಯೂ ಕಾರ್ಟಿಸೋನ್ ಹಾಗೂ ಅಡಿನೋಸಿನ್ ಹಾರ್ಮೋನ್ ಗಳ ಸಮತೋಲನವನ್ನು ಕಾಪಾಡುತ್ತದೆ.

ಕಾರ್ಟಿಸಾನ್ ವ್ಯಕ್ತಿಯನ್ನು ಎಚ್ಚರವಾಗಿಡುವ ಹಾರ್ಮೋನ್ ಆಗಿದ್ದು ದಿನದ ಆರಂಭದಲ್ಲಿ ಹೆಚ್ಚಿದ್ದು ದಿನದ ಕೊನೆಯಲ್ಲಿ ಕಡಿಮೆಯಾಗುತ್ತದೆ. ಆಡಿಸೋನಿಸ್ ನಿದ್ರೆಗೆ ಸಹಾಯಕ. ಆದುದರಿಂದ ನಿದ್ರೆಗೆ ಜೈವಿಕ ಗಡಿಯಾರ, ಹಾರ್ಮೋನ್ ಗಳು, ವ್ಯಕ್ತಿಯ ಆಹಾರಾಭ್ಯಾಸ, ವ್ಯಾಯಾಮ ಎಲ್ಲವೂ ಪ್ರಮುಖ ಪಾತ್ರ ವಹಿಸುತ್ತದೆ.

ADVERTISEMENT

ಮಧ್ಯಾಹ್ನದ ಕಿರುನಿದ್ರೆಯ ಸಾಧಕ– ಭಾದಕಗಳು :
* ದಿನವಿಡೀ ಹುರುಪಿನಿಂದ ಕೆಲಸ ನಿರ್ವಹಿಸಲು ಕಿರುನಿದ್ರೆ ಅವಶ್ಯಕ.
* ವ್ಯಕ್ತಿಯ ಕೆಲಸದ ಉತ್ಪಾದಕತೆ, ಮನಸ್ಥಿತಿ, ಮನಸ್ಸನ್ನು ಚುಕುರುಗೊಳಿಸಲು ಕಿರುನಿದ್ರೆ ಸಹಾಯಕ.
* ಕೆಲವರಿಗೆ ರಾತ್ರಿಯ ಹೊತ್ತು ನಿದ್ರಿಸಲು ಮಧ್ಯಾಹ್ನದ ಕಿರುನಿದ್ರೆ ತೊಂದರೆಯಾಗಬಹುದಾಗಿದೆ.
*ದೀರ್ಘಕಾಲ ನಿದ್ರೆಗೆ ಜಾರಲು ಸಮಯ ತೆಗೆದುಕೊಳ್ಳುವುದರಿಂದ ಬೆಳಗ್ಗೆ ಏಳಲು ತೊಂದರೆಯಾಗಬಹುದಾಗಿದೆ.
* ಕಿರುನಿದ್ರೆಯ ನಂತರ ಕೆಲವರಿಗೆ ನಿರುತ್ಸಾಹ ತೋರಬಹುದಾಗಿದೆ.
* ಯಾರೆಲ್ಲ ಕಿರುನಿದ್ರೆ ಮಾಡುವುದು ಸೂಕ್ತವಲ್ಲ :
* ರಾತ್ರಿಯ ನಿದ್ರೆಯಲ್ಲಿ ತೊಂದರೆಯಿರುವವರು ಅಂದರೆ ಪದೇ ಪದೇ ಎಚ್ಚರವಾಗುವುದು, ನಿದ್ರೆಗೆ ಜಾರಲು ಹೆಚ್ಚು ಸಮಯ ತೆಗೆದುಕೊಳ್ಳುವವರು, ಅನಿಯಮಿತ ನಿದ್ರಾಭ್ಯಾಸವಿರುವವರು ಕಿರುನಿದ್ರೆಗೆ ಹೋಗುವುದು ಸೂಕ್ತವಲ್ಲ.

ಕಿರುನಿದ್ರೆ ಮಾಡಲು ಹೀಗೆ ಮಾಡುವುದು ಸೂಕ್ತ :
* ಮಧ್ಯಾಹ್ನದ ವೇಳೆ ಕಿರುನಿದ್ರೆಗೆ ಹೋಗುವುದು ಸೂಕ್ತ. ತಡವಾದ ಕಿರುನಿದ್ರೆ ರಾತ್ರಿಯ ನಿದ್ರೆಗೆ ತಡೆಯಾಗಬಹುದಾಗಿದೆ.
* ನಿದ್ರಾ ಕೋಣೆಯು ನಿದ್ರಿಸಲು ಪೂರಕವಾಗಿರುವುದು ಅಂದರೆ ಕತ್ತಲಿನಿಂದ ಕೂಡಿದ್ದು , ಹಾಸಿಗೆ , ದಿಂಬು ಸೂಕ್ತವಾಗಿದ್ದು, ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳಿಂದ ದೂರ ಉಳಿಯುವುದು ಒಳಿತು.
* ಕಿರುನಿದ್ರೆಯ ಸಮಯವು 10-20 ನಿಮಿಷ ಸೂಕ್ತವೆನಿಸುತ್ತದೆ. ಇದಕ್ಕೂ ಹೆಚ್ಚು ಮಾಡಿದಲ್ಲಿ ರಾತ್ರಿಯ ನಿದ್ರೆಗೆ ತೊಂದರೆಯಾಗಬಹುದಾಗಿದೆ.
* ಸ್ಕ್ರೀನ್ ಟೈಮ್‌ನೊಂದಿಗೆ ಕಿರುನಿದ್ರೆಯ ಪ್ರಯತ್ನ ವ್ಯರ್ಥವಾಗಬಹುದಾಗಿದೆ.

– ಡಾ. ಸ್ಮಿತಾ ಜೆ ಡಿ, ಓರಲ್ ಮೆಡಿಸಿನ್ ಅಂಡ್ ರೇಡಿಯೋಲಾಜಿ ತಜ್ಞರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.