ADVERTISEMENT

ದಿನ ಭವಿಷ್ಯ: ಈ ರಾಶಿಯ ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿವೆ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ನವೆಂಬರ್ 2025, 23:30 IST
Last Updated 30 ನವೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಮಸ್ಯೆಯ ಗೋಪುರವನ್ನು ಹೊತ್ತಿರುವ ನಿಮಗೆ ಹಂತ ಹಂತವಾಗಿ ಪರಿಹಾರ ದೊರಕಲಿದೆ. ಕ್ರೀಡಾಪಟುಗಳು ತಮ್ಮ ಕ್ರೀಡೆಯಲ್ಲಿ ಉತ್ತಮ ಸಾಧನೆಯಿಂದ ಬಹುಮಾನದ ಜತೆಯಲ್ಲಿ ಗೌರವ ಗಳಿಸುವ ಯೋಗವಿದೆ.
  • ವೃಷಭ
  • ಗೊಂದಲಕ್ಕೆ ಬಂಧುಮಿತ್ರರಿಂದ ಸಲಹೆ ಪಡೆದು ಅಳವಡಿಸಿಕೊಳ್ಳುವು ದರಿಂದ ಪ್ರಯೋಜನ ಪಡೆದುಕೊಳ್ಳಲಿದ್ದೀರಿ. ಮುತುವರ್ಜಿವಹಿಸಿ ಮಾಡಿದ ಕೆಲಸ ಸಣ್ಣ ಮಕ್ಕಳಿಂದಾಗಿ ಹಾಳಾಗಬಹುದು.
  • ಮಿಥುನ
  • ಮಕ್ಕಳ ವಿಚಾರವಾಗಿ ಇದ್ದ ಸಮಸ್ಯೆಗಳು ಶೀಘ್ರ ಪರಿಹಾರವಾಗುವ ಲಕ್ಷಣಗಳು ತೋರಿಬರುತ್ತವೆ. ತಾತ್ಕಾಲಿಕ ಹುದ್ದೆಯವರಿಗೆ ಕಾಯಂ ಆಗುವ ಸಾಧ್ಯತೆ ಇರುತ್ತದೆ. ಪ್ರಗತಿ ಪ್ರಾಪ್ತಿಯಾಗಲಿದೆ.
  • ಕರ್ಕಾಟಕ
  • ಆತ್ಮೀಯರಿಂದ ಭೂಮಿಯ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ. ಮಗಳಿಂದ ಶುಭ ಸುದ್ದಿ ಕೇಳುವಿರಿ. ಔಷಧ ಮಾರಾಟದಿಂದ ಸಂಪಾದನೆ ಹೆಚ್ಚಳ. ಅನುಭವ ಕಥೆಗಳನ್ನು ಹಂಚಿಕೊಳ್ಳಲಿದ್ದೀರಿ.
  • ಸಿಂಹ
  • ಇತರರಿಗೆ ಸಮಯ ನೀಡುವುದರಿಂದ ಸ್ವಂತ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಮಗಳಿಗೆ ಹೆಸರಿಡುವ ವಿಷಯವಾಗಿ ಚರ್ಚೆ ಆಗುತ್ತದೆ. ಉದ್ಯೋಗದಿಂದ ಒಳ್ಳೆಯ ಅನುಭವ ಸಿಗಲಿದೆ.
  • ಕನ್ಯಾ
  • ಅಕ್ಕ ಪಕ್ಕದ ಮನೆಯವರ ಉಪಟಳ ತಡೆಯಲಾಗದೆ ಏರುಧ್ವನಿಯಲ್ಲಿ ಮಾತನಾಡುವಿರಿ. ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ಕನಸು ಕಾಣುವುದು ಮಾತ್ರವಲ್ಲದೆ ಅದನ್ನು ಸಾಕಾರಗೊಳಿಸಲು ಶ್ರಮವಹಿಸಿ.
  • ತುಲಾ
  • ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವ ಹಾದಿಯನ್ನು ನೋಡಿರಿ. ಸ್ಪರ್ಧಾತ್ಮಕ ಮನೋಭಾವವು ಅತ್ಯುನ್ನತ ಮಟ್ಟಕ್ಕೆ ಏರುವಂತೆ ಮಾಡುತ್ತದೆ. ಕ್ರಿಮಿಕೀಟಗಳಿಂದ ಅಲರ್ಜಿ ಉಂಟಾಗಬಹುದು.
  • ವೃಶ್ಚಿಕ
  • ಸವಾಲು ಸಾಮರ್ಥ್ಯದ ಬಗ್ಗೆ ಬಂದಾಗ ಎಂಥ ಕೆಲಸವನ್ನಾದರೂ ಮಾಡಲು ಮುಂದಾಗುತ್ತೀರಿ. ರಾಜಕೀಯ ವ್ಯವಹಾರಗಳ ಪ್ರಬಲ ಆಕಾಂಕ್ಷಿಯಾಗಿರುವ ನೀವು ಇನ್ನಷ್ಟು ಚುರುಕಾಗಬೇಕಾಗಿದೆ.
  • ಧನು
  • ಮಾನಸಿಕವಾಗಿ ಕುಗ್ಗದೇ ಧೈರ್ಯದಿಂದ ಇರುವುದು ಮೂಲ ಮಂತ್ರವಾಗಿರಲಿ. ನೂತನ ವಾಹನ ಕೊಳ್ಳುವ ಆಲೋಚನೆ ಬರಲಿದೆ. ಬ್ಯಾಂಕಿನ ಸಾಲಗಳು ತೀರಿ ನೆಮ್ಮದಿ ಮೂಡಲಿದೆ.
  • ಮಕರ
  • ಹೊಸ ವೃತ್ತಿಯ ವಿಚಾರವಾಗಿ ಅವಕಾಶಗಳು ಬರಲಿವೆ ಅದನ್ನು ಪ್ರಯೋಜನಾಕಾರಿಯಾಗಿ ಉಪಯೋಗಿಸಿಕೊಳ್ಳಿ. ಅಧಿಕಾರಿಗಳ ಭೇಟಿಯಿಂದ ಕೆಲಸ ಕಾರ್ಯಗಳು ಏರು-ಪೇರಾಗುವುದು.
  • ಕುಂಭ
  • ಚಂಚಲ ಮನೋಭಾವದಿಂದಾಗಿ ಕೆಲವು ತೀರ್ಮಾನ ತೆಗೆದುಕೊಳ್ಳುವುದು ಕಷ್ಟಕರ ಎನಿಸುವುದು. ಕಲ್ಲಿನ ಅಥವಾ ಟೈಲ್ಸ್ ಕೆಲಸ ಮಾಡುವವರು ಉದ್ಯೋಗದಲ್ಲಿ ಜಾಗ್ರತೆ ವಹಿಸಿ. ಮನೆಯ ಕೆಲಸದಲ್ಲಿ ನಿರ್ಲಕ್ಷ್ಯ ಬೇಡ.
  • ಮೀನ
  • ಪೂರ್ಣ ಪ್ರಮಾಣದಲ್ಲಿ ಶ್ರಮ ಪಟ್ಟರೆ ಎಲ್ಲದರಲ್ಲಿ ಜಯಗಳಿಸಬಹುದು. ನಿರುದ್ಯೋಗಿಗಳಿಗೆ ಅವಕಾಶಗಳು ಒದಗಿ ಬರಲಿವೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.