ADVERTISEMENT

ದಿನ ಭವಿಷ್ಯ: ಸಮಸ್ಯೆ, ದುಃಖಗಳೆಲ್ಲಾ ಹಂತ ಹಂತವಾಗಿ ದೂರವಾಗುವುದು

ಪ್ರಜಾವಾಣಿ ವಿಶೇಷ
Published 30 ಸೆಪ್ಟೆಂಬರ್ 2023, 18:30 IST
Last Updated 30 ಸೆಪ್ಟೆಂಬರ್ 2023, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಉದ್ಯೋಗ ದೊರೆಯುವ ಸುಳಿವಿನ ಕಾರಣದಿಂದಾಗಿ ಜೀವನದಲ್ಲಿನ ಸಮಸ್ಯೆಗಳು ಮತ್ತು ದುಃಖಗಳೆಲ್ಲಾ ಹಂತ ಹಂತವಾಗಿ ದೂರಾಗುವುದು. ವೈದ್ಯಕೀಯ ವಿದ್ಯಾರ್ಥಿ ಸಮೂಹಕ್ಕೆ ಉತ್ತಮ ಅವಕಾಶಗಳು ಲಭಿಸಲಿವೆ.
  • ವೃಷಭ
  • ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳು ಹೆಚ್ಚಾಗಲಿದ್ದು ನಿಮ್ಮ ವ್ಯಾಪಾರ, ವ್ಯವಹಾರಕ್ಕೆ ಆತಂಕದ ಪರಿಸ್ಥಿತಿ ಎದುರಾಗಬಹದು. ಖರ್ಚು ಕಡಿಮೆ ಮಾಡಿ. ಸ್ನೇಹಿತರಿಂದ ಸಹಾಯ ಸಹಕಾರಗಳು ಸಕಾಲದಲ್ಲಿ ದೊರೆಯಲಿದೆ.
  • ಮಿಥುನ
  • ಆಸ್ತಿ ವಿಷಯಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಹಿತೈಷಿಯೊಬ್ಬರ ನೆರವು ಪಡೆಯುವಿರಿ. ಶಿವನ ಆರಾಧನೆಯಿಂದಾಗಿ ನಿಮ್ಮ ಅಭೀಷ್ಟ ಪ್ರಾಪ್ತಿಯಾಗುವುದು. ಪ್ರಾಪ್ತ ವಯಸ್ಕರಿಗೆ ವಿವಾಹ ನಿಶ್ಚಯವಾಗುವುದು.
  • ಕರ್ಕಾಟಕ
  • ತಾಂತ್ರಿಕ ಕ್ಷೇತ್ರದಲ್ಲಿನ ನಿಮ್ಮ ಸಲಹೆ ಸೂಚನೆಗಳಿಗೆ ನಿಮ್ಮ ಅಧಿಕಾರಿ ವರ್ಗದವರಲ್ಲಿ ಹೆಚ್ಚು ಮನ್ನಣೆ ಸಿಗಲಿದೆ. ಆಹಾರ ಬೆಳೆಗಳು ರೈತರಿಗೆ ನಿರೀಕ್ಷೆಗೂ ಮೀರಿದ ಆದಾಯ ತರಲಿದೆ. ಯಾತ್ರೆ ಕೈಗೊಳ್ಳುವ ಮನಸ್ಸಾಗಲಿದೆ.
  • ಸಿಂಹ
  • ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಒಂದು ಸುಮಧುರ ಘಟನೆಯು ಇಂದು ನಿಮ್ಮ ಬಾಳಲ್ಲಿ ನಡೆಯಲಿದೆ. ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾದ ಬದಲಾವಣೆ ಉಂಟು ಮಾಡಲಿದ್ದೀರಿ.
  • ಕನ್ಯಾ
  • ರಾಜಕೀಯ ವ್ಯಕ್ತಿಗಳಿಗೆ ವಿರೋಧ ಪಕ್ಷದವರಿಂದ ಅಥವಾ ಶತ್ರುಗಳಿಂದ ತೊಂದರೆ ಆಗಬಹುದು. ಇಂದಿನ ಯೋಜನೆಗಳಿಗೆ ಮನೆಯವರಿಂದ ವಿರೋಧ ವ್ಯಕ್ತವಾಗಬಹುದು. ಉತ್ತಮ ದೈವ ಬಲವಿದ್ದು ಸಂಪತ್ತು ಕೈಗೂಡುವುದು.
  • ತುಲಾ
  • ಕುಟುಂಬದ ಸರ್ವತೋಮುಖ ಬೆಳವಣಿಗೆಗೆ ನಿಮ್ಮ ಪಾತ್ರ ಬಹಳ ಮುಖ್ಯ ಎಂಬುದು ನಿಮ್ಮ ಕುಟುಂಬ ವರ್ಗಕ್ಕೆ ಮನದಟ್ಟಾಗುವುದು. ವಿವಾಹ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ.
  • ವೃಶ್ಚಿಕ
  • ರಾಜಕೀಯ ರಂಗ ಪ್ರವೇಶಿಸಲು ತೀರ್ಮಾನಿಸುವುದಕ್ಕೆ ಈ ದಿನ ಸೂಕ್ತ ಕಾಲ. ಕುಟುಂಬದಲ್ಲಿದ್ದಂಥ ವೈಮನಸ್ಸು, ಭಿನ್ನಾಭಿಪ್ರಾಯಗಳು ನಿರಾತಂಕವಾಗಿ ದೂರಾಗಲಿವೆ. ಹಸಿರು ಬಣ್ಣ ನಿಮ್ಮ ವ್ಯಕ್ತಿತ್ವಕ್ಕೆ ಉತ್ತಮವಾಗಿರುವುದು.
  • ಧನು
  • ಹಿಂದೆ ಮಾಡಿದ ತಪ್ಪುಗಳಿಗೆ ಇಂದು ಪಶ್ಚಾತಾಪ ಪಡುತ್ತಿದ್ದರೂ ಪುನಃ ತಪ್ಪುಗಳು ಪುನರಾವರ್ತನೆಯಾಗುತ್ತಿವೆ. ಅತಿಯಾದ ಆಲಸ್ಯ, ನಿದ್ದೆಯಂತಹ ಸಮಸ್ಯೆ ನಿಮ್ಮನ್ನು ಕಾಡಲಿದೆ. ಮಾತನಾಡುವಾಗ ಎಚ್ಚರವಹಿಸಿ.
  • ಮಕರ
  • ಇಂದಿನ ಜೀವನದಲ್ಲಿ ನಿಮಗೆದುರಾಗಿ ಬರುತ್ತಿರುವ ಅದೃಷ್ಟದ ಲಾಭವನ್ನು ವ್ಯರ್ಥವಾಗದಂತೆ ಪಡೆದುಕೊಳ್ಳಲು ನಿಮ್ಮ ಪರಿಪೂರ್ಣ ಪ್ರಯತ್ನವನ್ನು ಹಾಕುವುದು ಅಗತ್ಯ. ಗುರು-ಹಿರಿಯರ ದರ್ಶನ ಭಾಗ್ಯವಿರುವುದು.
  • ಕುಂಭ
  • ವಿದ್ಯಾರ್ಥಿಗಳ ಉತ್ತಮ ಶ್ರೇಣಿಯ ಕನಸು ನನಸಾಗುವುದು. ಇಷ್ಟಪಟ್ಟ ರೀತಿ ಉದ್ಯೋಗಾವಕಾಶಗಳು ಕೂಡ ದೊರಕುವ ಸಾಧ್ಯತೆ ಇದೆ. ಶ್ರೀ ಲಕ್ಷ್ಮಿಯನ್ನು ಪೂಜಿಸಿದಲ್ಲಿ ಏಳಿಗೆ ಹೊಂದಲು ಸಾಧ್ಯವಾಗುವುದು.
  • ಮೀನ
  • ಬೆಳ್ಳಿ-ಬಂಗಾರ ಮಾರಾಟಗಾರರಿಗೆ ಬಿಡುವಿಲ್ಲದಂತಹ ವ್ಯಾಪಾರ ಆಗುವುದು. ನೆರೆಹೊರೆಯವರು ನಿಮ್ಮ ಸರಳತೆಯನ್ನು ದುರುಪಯೋಗ ಪಡೆಸಿಕೊಂಡಾರು ಗಮನವಿರಲಿ. ಚೋರ ಕೃತ್ಯಗಳು ನಡೆಯುವ ಸಂಭವವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.