ADVERTISEMENT

ದಿನ ಭವಿಷ್ಯ: ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಡಿಸೆಂಬರ್ 2025, 23:30 IST
Last Updated 2 ಡಿಸೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ವ್ಯವಹಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸರಿ ಎನಿಸಲಿದೆ. ಧರ್ಮ ವಿರೋಧಿ ಕಾರ್ಯಗಳನ್ನು ಮಾಡದಿರಿ. ಅಜೀರ್ಣ ಸಮಸ್ಯೆಯನ್ನು ಎದುರಿಸಿ ಅಧಿಕವಾಗಿ ಆಯಾಸವಾಗಬಹುದು.
  • ವೃಷಭ
  • ಮುಂದಿನ ಗುರಿ ಸಾಧನೆಗೆ ಇಂದು ಅತಿ ಮುಖ್ಯವಾದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಬದಲಾವಣೆ ತರುವ ವಿಚಾರವಾಗಿ ಕ್ರಾಂತಿಕಾರಿ ನಡೆಯೊಂದನ್ನು ಕೈಗೊಳ್ಳುವಿರಿ. ಮಹಾಗಣಪತಿಯನ್ನು ಆರಾಧಿಸಿ.
  • ಮಿಥುನ
  • ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಆಪ್ತರು ತಿಳಿಸಿಕೊಡುವರು. ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ. ಭೋಜನದ ಸಮಯವು ಹೆಚ್ಚು ಕಡಿಮೆ ಆಗುವುದು.
  • ಕರ್ಕಾಟಕ
  • ನಿಮ್ಮ ತಪ್ಪುಗಳನ್ನು ಸರಿಪಡಿಸುವವರ ಮೇಲೆ ಬೇಸರ ಮಾಡಿಕೊಳ್ಳಬೇಡಿ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭದ ದಿನವಾಗಿರುತ್ತದೆ. ಸಾಕುಪ್ರಾಣಿಯ ಅನಾರೋಗ್ಯ ನಿದ್ದೆಗೆಡಿಸಲಿದೆ.
  • ಸಿಂಹ
  • ಮಧ್ಯವರ್ತಿಗಳ ಅತಿ ಆಸೆಯಿಂದ ರೈತರಿಗೆ ಲಾಭವಿರುವುದಿಲ್ಲ.ಅದಕ್ಕಾಗಿ ನೇರವಾಗಿ ರೈತಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಿ. ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಹೊಸತನ ಕಂಡುಬರಲಿದೆ.
  • ಕನ್ಯಾ
  • ಚಕ್ರವ್ಯೂಹದಲ್ಲಿ ಸಿಲುಕಿದ ನಿಮಗೆ ಅದನ್ನು ಭೇದಿಸುವ ಉಪಾಯವು ಮಿತ್ರರಿಂದ ಸಿಗುತ್ತದೆ. ನಿಮ್ಮದೇ ನಿರೀಕ್ಷೆಯಲ್ಲಿರುವ ಕುಟುಂಬದ ವ್ಯಕ್ತಿಗಳಿಗೆ ನಿಮ್ಮ ಬಿಗುವಿನ ದಿನಚರಿಯಿಂದಾಗಿ ಸ್ವಲ್ಪ ಬೇಸರ ಉಂಟಾಗಬಹುದು.
  • ತುಲಾ
  • ನಿಮ್ಮೊಳಗಿರುವ ಮಾತನ್ನು ಭಯವಿಲ್ಲದೇ ತಿಳಿಸಿರುವುದರಿಂದ ಹೆಚ್ಚಿನ ವ್ಯಾಪಾರವನ್ನು ಗಿಟ್ಟಿಸಿಕೊಳ್ಳುವಿರಿ. ಮಕ್ಕಳಿಂದ ದುಬಾರಿ ವಸ್ತುಗಳ ಖರೀದಿಯ ಒತ್ತಡ ಬರುವುದು. ಆಫೀಸಿನ ಕೆಲಸ ಕಾರ್ಯಗಳು ಹೆಚ್ಚೆನಿಸುವುದು.
  • ವೃಶ್ಚಿಕ
  • ಎಲ್ಲ ಕಾರ್ಯಗಳ ವೈಫಲ್ಯಕ್ಕೆ ಪ್ರಧಾನ ಕಾರಣವಾಗಿ ನಿಮ್ಮ ಅನುಭವದ ಕೊರತೆಯಾಗಿರುತ್ತದೆ. ವೈಫಲ್ಯದಿಂದ ದುಃಖಿತರಾಗದೇ ಪುನಃ ಪ್ರಯತ್ನಿಸಿ. ನೆಂಟರಿಷ್ಟರ ಆಗಮನ ಮನೆಯಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಲಿದೆ.
  • ಧನು
  • ಈ ದಿನ ಉದ್ಯೋಗಾವಕಾಶದ ದೃಷ್ಟಿಯಿಂದ ಬಹಳ ಮಹತ್ವಪೂರ್ಣವಾಗಿರುತ್ತದೆ. ಬಂಗಾರ ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯುವುದು. ಜಗನ್ಮಾತೆಯನ್ನು ಆರಾಧಿಸಿ ಶುಭ ಉಂಟಾಗುವುದು.
  • ಮಕರ
  • ಮಹತ್ವಾಕಾಂಕ್ಷೆ ಈಡೇರಿಸಿ ಕೊಳ್ಳುವ ಪ್ರಯತ್ನದಲ್ಲಿ ಸಕಾರಾತ್ಮಕ ದೃಷ್ಟಿಕೋನವಿರಲಿ. ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಸೂಕ್ತ ಕಾಲವಾಗಿದೆ. ನೀವು ವಹಿಸಿಕೊಂಡ ಜವಾಬ್ದಾರಿ ಎಲ್ಲದಕ್ಕಿಂತ ಮುಖ್ಯವಾಗುತ್ತದೆ.
  • ಕುಂಭ
  • ಕೇವಲ ನಿಮ್ಮ ಆಲಸ್ಯತನಕ್ಕೋಸ್ಕರವಾಗಿ ಕೆಲಸ ಕಾರ್ಯಗಳನ್ನು ಮುಂದೂಡುವುದು ಸರಿಯಲ್ಲ. ಕೊಡು ಕೊಳ್ಳುವ ವಿಚಾರದಲ್ಲಿ ಜಾಗರೂಕರಾಗಿರಿ. ಸಂಪಾದನೆಯಲ್ಲಿ ಕಡಿಮೆಯಿರದಿದ್ದರೂ ಆರ್ಥಿಕವಾಗಿ ಚಿಂತೆಯಿರದು.
  • ಮೀನ
  • ನಿಮ್ಮ ಒಳ್ಳೆಯ ನಿರ್ಧಾರಗಳಿಗೆ ಪ್ರಭಾವಿಗಳ ಹಸ್ತಕ್ಷೇಪ ಇರಬಹುದು. ನಿಮ್ಮ ಬುದ್ಧಿಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಗೌರವಾನ್ವಿತವಾಗಿ ಬದುಕುವುದನ್ನು ರೂಢಿಸಿಕೊಳ್ಳಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.