ADVERTISEMENT

ದಿನ ಭವಿಷ್ಯ: ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿಂದ ಸಮಾಧಾನವಾಗುವುದು

ಪ್ರಜಾವಾಣಿ ವಿಶೇಷ
Published 2 ಅಕ್ಟೋಬರ್ 2023, 23:30 IST
Last Updated 2 ಅಕ್ಟೋಬರ್ 2023, 23:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಜನಗಳ ಕೆಟ್ಟ ದೃಷ್ಟಿಯ ಫಲವಾಗಿ ಜತೆಯಲ್ಲಿ ಸೋಮಾರಿತನ ಸೇರಿಕೊಂಡು ಉದ್ಯೋಗ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳು ಎದುರಾಗಬಹುದು. ವ್ಯಾಪಾರದಲ್ಲಿ ಉಂಟಾಗುವ ಪೈಪೋಟಿಯನ್ನು ಸಮರ್ಥವಾಗಿ ಎದುರಿಸುವಿರಿ.
  • ವೃಷಭ
  • ಲಾಭ ನಿರೀಕ್ಷೆಯಿಲ್ಲದೆ ಮಾಡಿದ ಕೆಲಸದಲ್ಲೂ ಅನಿರೀಕ್ಷಿತ ಲಾಭವಾಗಿರುವುದರಿಂದ ಸಂತೋಷ ಆಗುವುದು. ಶಿಕ್ಷಕ ವೃತ್ತಿಯಲ್ಲಿ ಸಾಧನೆ ತೋರಿ ಪ್ರಶಸ್ತಿ ಪಡೆಯುವಂತಾಗಲಿದೆ. ಸುಗಂಧ ದ್ರವ್ಯದ ಮಾರಾಟದಲ್ಲಿ ಲಾಭ ಸಿಗಲಿದೆ.
  • ಮಿಥುನ
  • ವಿದ್ಯಾರ್ಥಿಗಳು ತಮ್ಮ ವಿಶೇಷ ಅಧ್ಯಯನ ಕ್ಷೇತ್ರಗಳಲ್ಲಿ ಮುಂದುವರಿಯಲು ಬಹಳಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ. ಮನಸ್ಸಿನಲ್ಲಿ ಹಲವು ದಿನಗಳಿಂದ ಕಾಡುತ್ತಿರುವ ಸಮಸ್ಯೆಗಳಿಗೆ ಇಂದು ಉತ್ತರ ಸಿಗುವುದು.
  • ಕರ್ಕಾಟಕ
  • ಸೇವಕ ವರ್ಗದವರಲ್ಲಿ ಪ್ರೀತಿ ವಿಶ್ವಾಸದಿಂದ ವ್ಯವಹರಿಸಿ. ಸೇವಕ ವರ್ಗದ ಜನರ ಮೇಲಿನ ದೃಷ್ಟಿಕೋನ ಬದಲಾಯಿಸುವುದರಿಂದ ಹೆಚ್ಚಿನ ಅನುಕೂಲ. ಸ್ಟೇಷನರಿ ವ್ಯಾಪಾರ ಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸುವಿರಿ.
  • ಸಿಂಹ
  • ಕೈಗಾರಿಕೋದ್ಯಮಿಗಳು ಲಾಭದಾಯಕ ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುವಲ್ಲಿ ಬುದ್ಧಿವಂತಿಕೆಯನ್ನು ಉಪಯೋಗಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳಿಂದ ಸಮಾಧಾನವಾಗುವುದು.
  • ಕನ್ಯಾ
  • ಕಾರ್ಮಿಕರು ಸಹನಶೀಲರಾಗಿ ಕೆಲಸದ ಬಗ್ಗೆ ಸರಿಯಾಗಿ ಗಮನವಹಿಸುವುದರಿಂದ ಯಶಸ್ಸು ಪಡೆಯಬಹುದು. ಗೃಹೋಪಕರಣಗಳ ಖರೀದಿ ಅಥವಾ ನೂತನ ವಸ್ತ್ರವನ್ನು ಖರೀದಿ ಮಾಡುವ ಯೋಗವಿದೆ.
  • ತುಲಾ
  • ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚಿನ ಪರಿಣತಿ ಹೊಂದಿರುವವರಿಗೆ ವಿಶೇಷ ರೀತಿಯ ಉತ್ತಮ ಅವಕಾಶಗಳ ಜೊತೆಗೆ ಸ್ವಂತ ಉದ್ಯಮ ಸ್ಥಾಪಿಸುವ ಯೋಚನೆ ಹಾಗೂ ಅದಕ್ಕೆ ಬೇಕಾದ ಆರ್ಥಿಕ ಸಹಾಯದ ಜತೆಯಲ್ಲಿ ಜನಬಲ ಸಿಗಲಿದೆ.
  • ವೃಶ್ಚಿಕ
  • ಕೈಗಾರಿಕೋದ್ಯಮಿಗಳು ತಮ್ಮ ಕಂಪನಿಯ ತಯಾರಿಕಾ ಘಟಕದ ಅಭಿವೃದ್ಧಿಯನ್ನು ಮಾಡುವ ಬಗ್ಗೆ ಗಮನಹರಿಸಬಹುದು. ದ್ರವರೂಪದ ವಸ್ತುವಿನ ಅದರಲ್ಲೂ ತೈಲಗಳ ಮಾರಾಟದಲ್ಲಿ ಅಧಿಕ ಲಾಭವಿರುವುದು.
  • ಧನು
  • ಕಬ್ಬಿಣ ಹಾಗೂ ಸಿಮೆಂಟ್ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರದೊಂದಿಗೆ ಲಾಭ ಸಿಗಬಹುದು. ಮೆಚ್ಚಿದವರ ಜತೆಗೆ ಮದುವೆಯಾಗಲು ಮನೆಯ ಹಿರಿಯರಿಂದ ಒಪ್ಪಿಗೆ ಸಿಗಲಿದೆ. ಫೈನಾನ್ಸ್‌ನವರಿಗೆ ಆದಾಯ ವೃದ್ಧಿಯಾಗುತ್ತದೆ.
  • ಮಕರ
  • ಸಿದ್ಧ ಉಡುಪುಗಳ ಮಾರಾಟಗಾರರಿಗೆ ತಮ್ಮ ರಫ್ತು ವ್ಯಾಪಾರಗಳಿಂದ ಹೆಚ್ಚಿನ ಲಾಭ ಪಡೆಯಬಹುದು. ಅನವಶ್ಯಕ ತಿರುಗಾಟವಿದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಉತ್ತಮವಾದ ಆದಾಯ ಬರುವುದು.
  • ಕುಂಭ
  • ಸರ್ಕಾರಿ ಅಧಿಕಾರಿಗಳಲ್ಲಿ ವಿನಯ ಪೂರ್ವಕವಾಗಿ ನಡೆದುಕೊಳ್ಳುವುದರಿಂದ  ಕೆಲಸ ಸರಾಗವಾಗಿ ನಡೆಯುವುದು. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯವಾಗುತ್ತದೆ.
  • ಮೀನ
  • ಸಂಘ ಸಂಸ್ಥೆಗಳ ಜವಾಬ್ದಾರಿ ನೋಡುವವರಿಗೆ ನಾಲ್ಕಾರು ಮಾತು ಕೇಳಬೇಕಾಗುವುದು.  ಅತೀವ ಪ್ರಯತ್ನದ ಫಲವಾಗಿ ಹೊರ ದೇಶದಲ್ಲಿ ಉದ್ಯೋಗ ದೊರಕಿಸಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹ ಯೋಗವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.