ADVERTISEMENT

ದಿನ ಭವಿಷ್ಯ: ನಿಮ್ಮ ಪ್ರಾಮಾಣಿಕತೆಯ ಫಲವಾಗಿ ಉದ್ಯೋಗದಲ್ಲಿ ಸ್ಥಾನಮಾನ ಸಿಗಲಿದೆ

ದಿನ ಭವಿಷ್ಯ: 05-02-2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 5 ಫೆಬ್ರುವರಿ 2024, 23:44 IST
Last Updated 5 ಫೆಬ್ರುವರಿ 2024, 23:44 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ಸಾಂಸಾರಿಕ ಮತ್ತು ವ್ಯಾಪಾರ ವ್ಯವಹಾರದ ವಿಚಾರಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳಿರಿ. ಖಾದ್ಯ ವಸ್ತುಗಳ ಮಾರಾಟದ ಉದ್ಯೋಗದವರು ನೆಮ್ಮದಿ ಕಾಣಬಹುದು. ವಾಣಿಜ್ಯ ಉದ್ಯಮಿಗಳಿಗೆ ವಿಶೇಷ ದಿನ
  • ವೃಷಭ
  • ಹಿತಶತ್ರುಗಳ ದ್ವೇಷ ಅಸೂಯೆಯಿಂದ ಬರುತಿದ್ದ ಮನದ ಕ್ಲೇಶ ದೂರಾಗುತ್ತದೆ. ವಿಶ್ರಾಂತಿಯಿಲ್ಲದ ಕಾರ್ಯದೊತ್ತಡದಿಂದ ಅನಾರೋಗ್ಯ ಉಂಟಾಗಬಹುದು. ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ. ಏಳಿಗೆ ಹೊಂದುವಿರಿ.
  • ಮಿಥುನ
  • ವೃತ್ತಿಯಲ್ಲಿನ ಬದಲಾವಣೆ ಮಾಡುವ ಬಗ್ಗೆ ಹೆಂಡತಿಯೊಡನೆ ಮತ್ತು ಸ್ನೇಹಿತರೊಡನೆ ಚರ್ಚಿಸಿ ತೀರ್ಮಾನಿಸುವುದು ಒಳ್ಳೆಯದು. ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ಅಥವಾ ರಿಪೇರಿಗಳಿಂದ ಆದಾಯ ಹೆಚ್ಚುವುದು.
  • ಕರ್ಕಾಟಕ
  • ನಿಮ್ಮ ಪ್ರಾಮಾಣಿಕತೆಯ ಫಲವಾಗಿ ಉದ್ಯೋಗದಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ. ಸಣ್ಣ ನೋವಿಗಾಗಿ ವೈದ್ಯರನ್ನು ಭೇಟಿ ಮಾಡಿದ ನಿಮಗೆ ತಪಾಸಣೆಯಿಂದ ಬಂದ ಫಲಿತಾಂಶ ಆತಂಕವನ್ನು ಸೃಷ್ಟಿ ಮಾಡಲಿದೆ.
  • ಸಿಂಹ
  • ಧೈರ್ಯಂ ಸರ್ವತ್ರ ಸಾಧನಂ ಎನ್ನುವ ವಾಕ್ಯದಂತೆ ಹೆದರದೆ ಧೈರ್ಯದಿಂದ ಮುನ್ನುಗ್ಗಿ. ವ್ಯವಹಾರಸ್ಥರು ನೂತನ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಒಪ್ಪಿಗೆ ನೀಡಲು ಈ ದಿನ ಸೂಕ್ತವಲ್ಲ.
  • ಕನ್ಯಾ
  • ಹೊಸ ಆಕಾಂಕ್ಷೆಗಳನ್ನು ಹಾಗೂ ಜೀವನದ ಗುರಿಗಳನ್ನು ಅರಿತುಕೊಂಡು ಮುಂದುವರಿಯುವಿರಿ. ನಿಮ್ಮ ಆದ್ಯತೆ ನಿಮ್ಮ ವೃತ್ತಿಪರ ಕೆಲಸಗಳ ಬಗೆಗೆ ಮಾತ್ರ ಇರಲಿ. ಕೆಲಸಗಳು ಪೂರ್ವ ಯೋಜನೆಯಂತೆ ನಡೆಯುವುದು ಕಷ್ಟಕರ.
  • ತುಲಾ
  • ತಂದೆಯೊಡನೆ ಕೂಡಿ ಅಧ್ಯಾತ್ಮಿಕ ಚಟುವಟಿಕೆಗಳಲ್ಲಿ ವಿಶೇಷ ಪಾತ್ರ ವಹಿಸುವ ಅವಕಾಶ ಈ ದಿನ ನಿಮ್ಮದಾಗಲಿದೆ. ವ್ಯವಹಾರದಲ್ಲಿ ಸಹೋದರನನ್ನು ಸೇರಿಸಿಕೊಂಡು ನೂತನ ಘಟಕಗಳನ್ನು ಆರಂಭಿಸಬಹುದು.‌
  • ವೃಶ್ಚಿಕ
  • ನಿಮ್ಮಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲಗಳನ್ನು ಹೊರ ತೆಗೆಯಲು ಹೊಸದನ್ನು ಕಲಿಯಲು ಮುಂದಾಗುವಂತಾಗಲಿದೆ. ವಿಶೇಷವಾಗಿ ಸಂಗೀತ ಶಾಸ್ತ್ರದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅಧಿಕ ಸಮಯ ಸಿಗುವುದು.
  • ಧನು
  • ಹಲವಾರು ಅವಕಾಶಗಳು ನಿಮಗೆದುರಾಗಿದ್ದರೂ ಸರಿಯಾಗಿ ಇರುವುದನ್ನೇ ಆಯ್ಕೆ ಮಾಡುವಿರಿ. ಕಾರ್ಯದೊತ್ತಡದ ನಡುವೆಯೂ ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ.
  • ಮಕರ
  • ಕಾರ್ಯ ಸಾಧನೆಗೆ ಕೆಲವರ ಅಡ್ಡಗಾಲು ಹಾಗೂ ಸಹೋದ್ಯೋಗಿಗಳ ನಿರ್ಧಾರಗಳಿಂದ ಸಮಸ್ಯೆ ಇರುತ್ತದೆ. ಕಿಂಚಿತ್ ಕಾರ್ಯಸಿದ್ದಿಯಿಂದಲೂ ನೆಮ್ಮದಿ ಕಂಡು ಬರಲಿದೆ. ಮಕ್ಕಳ ಮೇಲಿದ್ದ ಮುನಿಸು ಕರಗುವುದು.
  • ಕುಂಭ
  • ತಾಯಿಯ ಆರೋಗ್ಯದ ಬಗ್ಗೆ ಗಮನವನ್ನು ಹರಿಸಿ; ಅದರಲ್ಲೂ ಹೊಟ್ಟೆಗೆ ಸಂಬಂಧಿಸಿದ ರೋಗ ಲಕ್ಷಣಗಳು ಅನುಭವಕ್ಕೆ ಬಂದಲ್ಲಿ, ತಡಮಾಡದೆ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವುದು ಉತ್ತಮ.
  • ಮೀನ
  • ಮಕ್ಕಳ ಮೇಲಿನ ವ್ಯಾಮೋಹ ಅತಿಯಾಗಿ ಸಮಾಜದಲ್ಲಿ ಗೌರವ ಕಳೆದುಕೊಳ್ಳುವ ಘಟನೆ ನಿಮ್ಮ ಬಾಳಲ್ಲಿ ನೆಡೆಯಬಹುದು. ಕಂಪನಿಯ ಹಣಕಾಸಿನ ನಿರ್ವಹಣೆಯಲ್ಲಿ ನಿಮ್ಮ ಪಾತ್ರ ಪ್ರಮುಖವಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.