ADVERTISEMENT

ದಿನ ಭವಿಷ್ಯ: ಅವಿವಾಹಿತರಿಗೆ ಶುಭ ಫಲಗಳು ಲಭಿಸುವುದು..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಡಿಸೆಂಬರ್ 2025, 23:30 IST
Last Updated 6 ಡಿಸೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಬಹುದಿನದಿಂದ ಮುಂದೂಡಲ್ಪಟ್ಟಿದ್ದ ದೂರದ ಪ್ರಯಾಣವನ್ನು ಅನಿವಾರ್ಯವಾಗಿ ಕೈಗೊಳ್ಳಬೇಕಾಗುತ್ತದೆ. ದೈವಾನುಗ್ರಹದಿಂದ ಕಾರ್ಯಗಳು ಕೈಗೂಡಿ ಬಹುಮಟ್ಟಿಗೆ ನಿರೀಕ್ಷಿತ ಫಲ ಲಭಿಸಲಿದೆ.
  • ವೃಷಭ
  • ನಿಮಗಿಂತಲೂ ಕಷ್ಟಪಡುತ್ತಿರುವಂಥ ವ್ಯಕ್ತಿಗಳನ್ನು ನೋಡಿ, ಕಷ್ಟಗಳನ್ನು ಎದುರಿಸುವ ಧೈರ್ಯ ಪಡೆಯುವಿರಿ. ಉತ್ತಮವಾದ ಕಾರ್ಯಕ್ಷೇತ್ರಕ್ಕೆ ಪ್ರವೇಶಿಸಿದ ನಿಮ್ಮನ್ನು ಸ್ವಸ್ಥಾನದ ಜನರು ಶ್ಲಾಘಿಸುತ್ತಾರೆ.
  • ಮಿಥುನ
  • ವೃತ್ತಿಯಲ್ಲಿ ಹೆಚ್ಚಿನ ಜವಾಬ್ದಾರಿ ಇರುವುದರಿಂದ ವೈಯಕ್ತಿಕ ಜೀವನದ ಬಗ್ಗೆ ಗಮನ ಕಡಿಮೆ ಅಗುವುದು. ತೆರೆಮರೆಯಲ್ಲಿನ ಕೆಲಸದಿಂದಾಗಿ ಅಧಿಕಾರ ಪಡೆದುಕೊಳ್ಳುವಿರಿ. ಅವಿವಾಹಿತರಿಗೆ ಶುಭ ಫಲಗಳು ಲಭಿಸುವುದು.
  • ಕರ್ಕಾಟಕ
  • ಒಂದು ಕಾಯಿಲೆಗೆಂದು ತೆಗೆದುಕೊಂಡ ಔಷಧಿ ಬೇರೆ ಕಾಯಿಲೆಗೆ ಕಾರಣವಾಗಬಹುದು. ಒಳ ಮನಸ್ಸಿಗೆ ಗೋಚರಿಸಿದ ಅವಘಡವು ನಿಜವಾಗುವ ಸಂಭವವಿದೆ. ಸಂಸಾರದ ಬಗ್ಗೆ ಹೆಚ್ಚು ಗಮನಹರಿಸಬೇಕಾಗುವುದು.
  • ಸಿಂಹ
  • ಅಳಿಯನ ಸಹಾಯ ಪಡೆದು ಹೊಸ ನಿವೇಶನವನ್ನು ವ್ಯಾವಹಾರಿಕ ದೃಷ್ಟಿಯಿಂದ ಖರೀದಿಸುವಿರಿ. ಮನೆಯಲ್ಲಿ ಮಗುವಿನ ಸಂಶಯನ್ನು ಬಗೆಹರಿಸುವುದರಲ್ಲಿ ದಿನ ಕಳೆಯುವಿರಿ.
  • ಕನ್ಯಾ
  • ನಿಮ್ಮ ಮನೆಯಲ್ಲಿನ ಪುರುಷ –ಸ್ತ್ರೀಯರ ನಡುವಿನ ಅಂತರ ಕಡಿಮೆ ಮಾಡಲು ಪ್ರಯತ್ನಿಸುವಿರಿ. ಮುಕ್ತ ಮನೋಭಾವದಿಂದ ಆಡುವ ಮಾತುಗಳಿಂದ ಹಲವಾರು ಗುಪ್ತ ವಿಷಯಗಳು ಬಹಿರಂಗಗೊಳ್ಳಲಿವೆ.
  • ತುಲಾ
  • ಆಹಾರದಲ್ಲಿನ ವ್ಯತ್ಯಾಸದಿಂದಾಗಿ ಹಲವು ಕಾಯಿಲೆಗಳು ಏಕಕಾಲದಲ್ಲಿ ಕಾಣಿಸಿಕೊಳ್ಳುತ್ತವೆ. ಸಣ್ಣ ಕಾರಣಗಳಿಂದ ಶುರುವಾದ ವಾದ– ಪ್ರತಿವಾದ ದೊಡ್ಡ ಮಟ್ಟಕ್ಕೆ ತಲುಪಿ, ಸಂಸಾರವನ್ನು ಒಡೆಯಲು ಬಿಡದಿರಿ.
  • ವೃಶ್ಚಿಕ
  • ಯಾವುದೇ ಸಂದರ್ಭದಲ್ಲೂ ಒತ್ತಡಕ್ಕೆ ಸಿಲುಕದೆ ಕಾರ್ಯ ನಿರ್ವಹಿಸುವ ನೀವು ಎಲ್ಲರಿಂದಲೂ ಗುರುತಿಸಲ್ಪಡುವಿರಿ. ವಿದ್ವಾನ್‌ಗಳ ಎದುರು ಮಾತನಾಡುವ ಬದಲು ಮೌನವಾಗಿದ್ದರೆ ಗೌರವ ಹೆಚ್ಚುತ್ತದೆ.
  • ಧನು
  • ಸಣ್ಣ ವಯಸ್ಸಿಗೆ ವಯಸ್ಸನ್ನು ಮೀರಿದ ಜವಾಬ್ದಾರಿ ಹೊರಬೇಕಾದ ಸಂದರ್ಭ ಬರುತ್ತದೆ. ವರಮಾನದಲ್ಲಿ ಈ ದಿನ ಯಾವುದೇ ರೀತಿಯ ಕೊರತೆ ಇರುವುದಿಲ್ಲ. ಗಾರ್ಮೆಂಟ್ಸ್ ಉದ್ಯಮದವರು ಲಾಭ ಹೊಂದಲಿದ್ದೀರಿ.
  • ಮಕರ
  • ರಾಜಕಾರಣದ ರಹಸ್ಯ ಮಾತುಕತೆಗಳಲ್ಲಿ ನಿಮ್ಮ ಸ್ಥಾನ ಮುಖ್ಯವಾಗಿರುವುದು. ತಾಯಿಯಿಂದ ಕಲಿತ ಪಾಠಗಳನ್ನು ನಿಮ್ಮ ಮುಂದಿನ ಪೀಳಿಗೆಗೆ ಕಲಿಸಿಕೊಡುವಂಥ ಸಂತಸದ ದಿನಗಳನ್ನ ನಿರೀಕ್ಷಿಸುವಿರಿ.
  • ಕುಂಭ
  • ನಿಮಗೆ ಬೇಕಾದ ವಸ್ತುಗಳು ನಿಮ್ಮ ಬಳಿ ಇಲ್ಲದಿದ್ದರು ಸಹ ಸ್ನೇಹಿತರಿಂದಾಗಿ ಸಮಯಕ್ಕೆ ಸರಿಯಾಗಿ ಬಂದೊದಗುತ್ತದೆ. ಲಕ್ಷ್ಯಗೊಟ್ಟು ಕೇಳಿದ ವಿಷಯಗಳು ಅಗತ್ಯ ಸಮಯದಲ್ಲಿ ಪ್ರಯೋಜನಕ್ಕೆ ಬರಲಿದೆ.
  • ಮೀನ
  • ಈ ದಿನದ ನಿಮ್ಮ ಕೆಲವು ತಪ್ಪುಗಳಿಗೆ ನಿಮ್ಮ ಸಣ್ಣ ವಯಸ್ಸಿನ ಕಾರಣಕ್ಕೆ ಕ್ಷಮೆ ಸಿಗಬಹುದು. ಶುಭ್ರವಾದಂತಹ ಉಡುಗೆ ತೊಡುಗೆಗಳು ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತದೆ. ತಾಳ್ಮೆ ನಿಮ್ಮ ಮಂತ್ರವಾಗಿರಲಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.