ADVERTISEMENT

ದಿನ ಭವಿಷ್ಯ: ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಆಗಸ್ಟ್ 2024, 23:30 IST
Last Updated 8 ಆಗಸ್ಟ್ 2024, 23:30 IST
   
ಮೇಷ
  • ಹಿರಿಯರು ಗಹನವಾದ ಸಮಸ್ಯೆಗಳಿಗೆ ತಕ್ಷಣ ಸುಲಭ ಪರಿಹಾರಗಳನ್ನು ತಿಳಿಸಿಕೊಡುವರು. ಸಹೋದರರಲ್ಲಿ ಬರಬೇಕಿದ್ದ ಹಣ ಹಿಂತಿರುಗಿ ಬಂದು ಕೈ ಸೇರುವುದು. ಸೌಂದರ್ಯ ವಿನ್ಯಾಸಕರಿಗೆ  ಉತ್ತಮ ದಿನ.
  • ವೃಷಭ
  • ಆಫೀಸಿನಲ್ಲಿ ವಿನಯದಿಂದ ವರ್ತಿಸಿ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ. ಮನೆಯವರ ಮಾತುಗಳಿಗೆ ಸಮಾಧಾನದಿಂದ ಉತ್ತರಿಸಿ. ಉತ್ತಮ ಆದಾಯದಿಂದ ಹಣಕಾಸಿನ ತೊಂದರೆ  ಕಾಣಿಸದು.
  • ಮಿಥುನ
  • ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಸೇವಿಸುವ ಅಭ್ಯಾಸ ಮಾಡುವುದರಿಂದ ಆರೋಗ್ಯ ವೃದ್ಧಿ. ಕಚ್ಚಾ ತೈಲದ ವ್ಯವಹಾರದಲ್ಲಿರುವವರಿಗೆ ಅಧಿಕವಾಗಿ ಲಾಭ ಸಿಗಲಿದೆ.
  • ಕರ್ಕಾಟಕ
  • ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸಿಗಾಗಿ ಅದರಲ್ಲೂ ವಿಶೇಷವಾಗಿ ವಿಜ್ಞಾನ ವಿಷಯದಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಕೋರ್ಟು-ಕಚೇರಿ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಪಡೆಯುವಲ್ಲಿ ತೊಡಕು ಇರಲಿದೆ.
  • ಸಿಂಹ
  • ನಿಮಗೆದುರಾಗುವ ಎಲ್ಲಾ ಸವಾಲುಗಳನ್ನು ಬುದ್ಧಿವಂತಿಕೆಯಿಂದ ಎದುರಿಸಿ. ಇನ್ನಷ್ಟು ಮನೋಬಲವನ್ನು ಹೆಚ್ಚಿಸಿಕೊಳ್ಳಿರಿ. ಬಹಳ ಬೇಗ ಗುರಿ ತಲುಪಬೇಕು ಎಂಬ ತೀವ್ರ ಇಚ್ಛೆ ಫಲಿತಾಂಶಕ್ಕೆ ಅಡ್ಡಿ ಮಾಡುವ ಸಾಧ್ಯತೆಯಿದೆ.
  • ಕನ್ಯಾ
  • ಕೆಲಸದ ಒತ್ತಡದಿಂದ ದೇಹಾಯಾಸ ತೋರಿಬಂದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಸಿಗಲಿದೆ. ಹಿರಿಯರ ಆಸೆಯಂತೆ ಹೊಸ ಆಸ್ತಿ ಕೊಳ್ಳುವ ಅವಕಾಶ ಸಿಗಲಿದೆ. ‌
  • ತುಲಾ
  • ರಾಜಕೀಯ ವ್ಯಕ್ತಿಗಳಿಗೆ ಸಾಮಾಜಿಕವಾಗಿ ಜನ ಬೆಂಬಲದ ಮತ್ತು ಆರ್ಥಿಕತೆಯ ಕೊರತೆ ಕಾಡಲಿದೆ. ಹಣ್ಣಿನ ವ್ಯಾಪಾರಿಗಳಿಗೆ ಲಾಭದ ದಿನ. ಪ್ರಯಾಣದಲ್ಲಿ ಆಪತ್ತುಗಳು ಎದುರಾಗಬಹುದು, ಜಾಗ್ರತರಾಗಿರಿ.
  • ವೃಶ್ಚಿಕ
  • ಕೆಲಸಗಳಲ್ಲಿನ ಜವಾಬ್ದಾರಿಗಳು ಹೆಚ್ಚಿ ಆರ್ಥಿಕ ಸ್ಥಿತಿಯು ಸುಧಾರಣೆ ಹಂತದಲ್ಲಿರುವುದು. ರಾಜಕಾರಣಿಗಳು  ಹೆಚ್ಚಿನ ಸಮಯವನ್ನು ಸಾಮಾಜಿಕ ಹಿತಾಸಕ್ತಿಗಾಗಿ ಕಳೆಯಬೇಕಾಗುವುದು.
  • ಧನು
  • ಜಾಗ ಖರೀದಿಸಲು ಅಥವಾ ಒಪ್ಪಂದಕ್ಕೆ ಸಹಿ ಹಾಕಲು ಸುದಿನ. ಚಿತ್ರಕಲೆ, ಗಣಿತದಂಥ ವಿಚಾರದಲ್ಲಿ ಆಸಕ್ತಿ ಮೂಡುವುದು. ಔದ್ಯೋಗಿಕ ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಉತ್ತಮ ಅಂಕಗಳನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ.
  • ಮಕರ
  • ಕುಟುಂಬದಲ್ಲಿ ಇರುವಂಥ ಎಲ್ಲರ ಅಭಿಪ್ರಾಯವನ್ನೂ ಕೇಳಿ ತೀರ್ಮಾನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ವೃತ್ತಿರಂಗದಲ್ಲಿ ನಿಮ್ಮ ಪ್ರಾಮಾಣಿಕ ಪ್ರಯತ್ನ ಇದ್ದಲ್ಲಿ ಸ್ಥಾನ ಬದಲಾವಣೆ ಸಾಧ್ಯತೆಯಿದೆ.
  • ಕುಂಭ
  • ಮನೆಯಲ್ಲಿರುವ ಆಂತರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಬಟ್ಟೆ ಮಾರಾಟಗಾರರಿಗೆ ಉತ್ತಮ ವ್ಯಾಪಾರವಿದ್ದು ಅಧಿಕ ಲಾಭ. ಸಾಮಾಜಿಕ ಬದುಕಿನಲ್ಲಿ ಹೊಸ ಹುರುಪು ಕಾಣಲಿದ್ದೀರಿ.
  • ಮೀನ
  • ವಿವಾಹದ ವಿಷಯದಲ್ಲಿ ಮೌನ ಮುರಿಯುವುದು ಅನಿವಾರ್ಯ ವಿಷಯವಾಗಿ ಪರಿಣಮಿಸುವುದು. ಅಗಾಧ ಜ್ಞಾನ ಶಕ್ತಿ ಹೊರ ಹೊಮ್ಮಿ ಬರಲು ಸೂಕ್ತ ಕಾಲವಿದು. ಮನೆಯ ಖರ್ಚಿನಲ್ಲಿ ಹಿಡಿತವಿರ
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.