ADVERTISEMENT

ದಿನ ಭವಿಷ್ಯ: ಈ ರಾಶಿಯ ಅವಿವಾಹಿತರು ಬೇಗ ವಿವಾಹದ ಬಗ್ಗೆ ತೀರ್ಮಾನ ತೆಗೆದುಕೊಳ್ಳಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಮೇ 2024, 0:25 IST
Last Updated 1 ಮೇ 2024, 0:25 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಇನ್ನೊಬ್ಬರೊಂದಿಗೆ ಮಾತನಾಡುವಾಗ ತುಂಬಾ ಅಳೆದು ತೂಗಿ ಮಾತನಾಡುವ ಪ್ರವೃತ್ತಿಯು ಎದುರಿನ ವ್ಯಕ್ತಿಗಳಿಗೆ ತಮ್ಮನ್ನು ದೂರವಿಟ್ಟಿದ್ದಾರೆ ಎಂಬ ಭಾವನೆಯನ್ನು ತರಬಹುದು. ಈ ಬಗ್ಗೆ ಗಮನ ಹರಿಸಿ.
  • ವೃಷಭ
  • ನಿಮ್ಮ ನಡುವಳಿಕೆಯು ಇತರರಿಗೆ ಗೊಂದಲಮಯವಾಗಿ ಕಂಡರೂ ಅಸಹಾಯಕತೆಯಿಂದ ನಿಲ್ಲುವ ಕಾರ್ಯವನ್ನು ಬಿಡುವುದಕ್ಕಿಂತ ಉಳಿಸಿಕೊಳ್ಳಲು ಪ್ರಯತ್ನ ಬೇಕಾಗುವುದರಿಂದ ನೀವು ಧೈರ್ಯದಿಂದ ಮಾಡಿ.
  • ಮಿಥುನ
  • ಗ್ರಹಗಳ ಚಲನೆಯು ಸುಖಮಯವಾಗಿ ಜೀವನ ನಡೆಸಲು ಅನುಕೂಲವಾಗಿದೆ. ಮಕ್ಕಳ ಮೂಲಕ ಕೆಲವು ಸಮಸ್ಯೆಗಳಿಗೆ ಪರಿಹಾರವು ದೊರೆಯುತ್ತದೆ. ತಂಪುಪಾನೀಯಗಳ ಉತ್ಪಾದಕರಿಗೆ ಲಾಭ ಸಿಗುತ್ತದೆ.
  • ಕರ್ಕಾಟಕ
  • ಗುರು ಹಿರಿಯರ ಅಣತಿಯಂತೆ ವಿವಾಹ ಸಂಬಂಧಿ ವಿಷಯಗಳಿಗೆ ನಿರಾಕರಣೆಯನ್ನು ಮಾಡದೆ ಒಪ್ಪಿಕೊಳ್ಳುವುದು ಉತ್ತಮ. ಏನನ್ನಾದರೂ ಸಾಧಿಸಲೇಬೇಕೆಂದಿರುವಾಗ ಆತ್ಮವಿಶ್ವಾಸದ ಕೊರತೆ ಕಾಣಿಸದು.
  • ಸಿಂಹ
  • ದೇಹಾಲಸ್ಯದಿಂದ ಹಲವು ದಿನಗಳಿಂದ ತಳ್ಳುತ್ತ ಬಂದಿದ್ದ ಕಾರ್ಯಗಳನ್ನು ಮುಂದು ಹಾಕುವುದು ಒಳ್ಳೆಯದಲ್ಲ. ಸ್ವಾಭಾವಿಕವಾಗಿ ಬಂದ ಕಾಯಿಲೆ ಸಹಜವಾಗಿ ಪರಿಹಾರವಾಗುವುದು.
  • ಕನ್ಯಾ
  • ಸಂಶೋಧನೆಯಲ್ಲಿ ತೊಡಗಿರುವ ರಾಸಾಯನಿಕ ಸಂಶೋಧನಾ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಅಂದುಕೊಂಡ ಕೆಲಸಗಳು ಪ್ರಯತ್ನದಿಂದ ಆಗುತ್ತದೆ.
  • ತುಲಾ
  • ದಿನಾಂತ್ಯದಲ್ಲಿ ಬಿರುಸಿನ ಕಾರ್ಯ ಚಟುವಟಿಕೆಗಳಿಂದ ಬಿಡುವು ಮಾಡಿಕೊಂಡು ಮನೆಯವರೊಡನೆ ಕಾಲ ಕಳೆಯಲು ಅಪೇಕ್ಷಿಸುವಿರಿ. ಮಕ್ಕಳ ರೋಗತಜ್ಞರಿಗೆ ವಿಶೇಷ ಸವಾಲೊಂದು ಎದುರಾಗುವ ಸಂಭವ ಈ ದಿನವಿದೆ.
  • ವೃಶ್ಚಿಕ
  • ಅವಿವಾಹಿತರು ಆದಷ್ಟು ಬೇಗ ವಿವಾಹದ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಿ. ಮುಖ ಕಪ್ಪಗಾಗುವಂತಹ ಪರಿಸ್ಥಿತಿಗಳನ್ನು ತಂದೊಡ್ಡಿಕೊಳ್ಳಬೇಡಿ. ತಂದೆ ತಾಯಿಯ ಮಾತನ್ನು ಮೀರಿ ಇಂದು ಪ್ರಯಾಣ ಕೈಗೊಳ್ಳಬೇಡಿ
  • ಧನು
  • ನಾಯಕತ್ವದ ಪಟ್ಟ ಹೊರುವ ನಿಮ್ಮ ಸಾಮರ್ಥ್ಯವು ಕೆಲವರ ಕಣ್ಣನ್ನು ಕೆಂಪಗೆ ಮಾಡುತ್ತದೆ, ಭಯ ಬೇಡ ಮುನ್ನುಗ್ಗಿ ಕಾರ್ಯ ನಿರ್ವಹಿಸಿ. ಮಧ್ಯಾಹ್ನದ ನಂತರದ ಪ್ರಯಾಣವನ್ನು ಮಾಡದಿರುವುದು ಉತ್ತಮವೆನಿಸಲಿದೆ.
  • ಮಕರ
  • ಸುದ್ದಿಗೋಷ್ಠಿಗಳಲ್ಲಿ ಭಾಗವಹಿಸುವಂತಾಗಲಿದೆ. ಮಗನ ವಿಷಯ ಮನೆಯಲ್ಲಿ ಚರ್ಚೆಗೆ ಬರುವುದು. ಸಂಗಾತಿಯೊಂದಿಗೆ ಭಾವನಾತ್ಮಕ ಪ್ರಕ್ಷುಬ್ಧತೆಗೆ ಒಳಗಾಗುವಂತಹ ಸಾಧ್ಯತೆ ಇದೆ.ಸಂತೋಷದ ದಿನವಾಗಿದೆ.
  • ಕುಂಭ
  • ಇಂದು ಮಾಡುವ ಸಹಾಯವು ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ. ಇಷ್ಟ ಕ್ಷೇತ್ರದಲ್ಲಿ ಹೊಸ ಉದ್ಯೋಗ ಪಡೆಯುವವರಿಗೆ ಕೆಲಸ ದೊರೆಯುತ್ತದೆ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅನುಕೂಲವಾಗಲಿದೆ.
  • ಮೀನ
  • ಸಿದ್ಧ ಉಡುಪಗಳ ವ್ಯಾಪಾರಸ್ಥರು ರಫ್ತು ವ್ಯಾಪಾರದಿಂದ ಹೇರಳ ಲಾಭ ಪಡೆಯುವಿರಿ. ಬಲವಾದ ಕಾರಣವಿಲ್ಲದೆ ಇಂದು ಯಾರ ಮೇಲೂ ಕೋಪಿಸಿಕೊಳ್ಳಬೇಡಿ. ಮನಃಪೂರ್ವಕವಾಗಿ ಮಾಡಿದ ಕೆಲಸಕ್ಕೆ ಶ್ಲಾಘನೆ ದೊರಕಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.