ದಿನ ಭವಿಷ್ಯ: ಈ ರಾಶಿಯವರು ಹೊಸ ವಾಹನ ಖರೀದಿ ಮಾಡಲಿದ್ದೀರಿ..
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಆಗಸ್ಟ್ 2025, 23:30 IST
Last Updated 12 ಆಗಸ್ಟ್ 2025, 23:30 IST
ದಿನ ಭವಿಷ್ಯ
ಮೇಷ
ಸಾಮರ್ಥ್ಯಕ್ಕಿಂತ ಕೆಲಸವು ಕಳಪೆ ಮಟ್ಟದಲ್ಲಿರುವುದು ಬೇಸರ ಎನಿಸಬಹುದು. ತಾಯಿಯೊಂದಿಗೆ ಸಮಾಧಾನಕರ ಸಮಯ ಕಳೆಯುವಿರಿ. ಸಿಹಿ ಖಾದ್ಯಗಳನ್ನು ಸವಿಯುವ ಯೋಗವಿದೆ.
ವೃಷಭ
ಸಹೋದ್ಯೋಗಿಗಳ, ಅಕ್ಕಪಕ್ಕದವರ ಅಭಿವೃದ್ಧಿಯನ್ನು ಕಂಡು ಅಸೂಯೆ ಪಡುವ ಮನಸ್ಥಿತಿ ಇದ್ದರೆ ಸರಿಮಾಡಿಕೊಳ್ಳಿ. ಗುಣಮಟ್ಟದ ಹಾಲು ಮಾರಾಟಗಾರರಿಗೆ ಬೇಡಿಕೆ ದೊರೆಯುತ್ತದೆ.
ಮಿಥುನ
ಸರ್ಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರು ಕಾರ್ಯನಿಮಿತ್ತ ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗುವುದು. ಅನಗತ್ಯ ಅಲೆದಾಟಗಳನ್ನು ತಪ್ಪಿಸುವ ಪ್ರಯತ್ನ ಮಾಡಿ.
ಕರ್ಕಾಟಕ
ಉಡುಗೆ ತೊಡುಗೆ, ರೀತಿ-ನೀತಿಗಳೆ ಇನ್ನೊಬ್ಬರಿಗೆ ಮಾರ್ಗದರ್ಶನ ನೀಡುವಂತೆ ಇರಲಿ. ಹೊಸ ವಾಹನ ಖರೀದಿ ಮಾಡಲಿದ್ದೀರಿ. ಮನಸ್ಸಿನ ಇಚ್ಛೆಯಂತೆ ನಡೆದು ಗೃಹದಲ್ಲಿ ನೆಮ್ಮದಿಯ ವಾತಾವರಣ ಇರುವುದು.
ಸಿಂಹ
ಸಾರ್ವಜನಿಕ ಕೆಲಸದಲ್ಲಿ ಮುಂದಾಳತ್ವವು ಆರ್ಥಿಕವಾಗಿ ನಾನಾ ರೀತಿಯಲ್ಲಿ ಧನ ಸಂಗ್ರಹವಾಗುವಂತೆ ಮಾಡುವುದು. ಸಂಸ್ಥೆಯ ಉದ್ಯೋಗಿಗಳಿಗೆ ವಿದೇಶದಲ್ಲಿ ಉತ್ತಮ ಅವಕಾಶಗಳು ಸಿಗಲಿವೆ.
ಕನ್ಯಾ
ಸರ್ಕಾರಿ ಕೆಲಸ ಕಾರ್ಯಗಳು ಅನುಕೂಲವಾಗಿ ತೋರಿ ಬಂದಾವು. ಮಗಳ ವಿವಾಹದ ವಿಷಯದಲ್ಲಿ ಶೀಘ್ರ ಸಂತೋಷದ ಸುದ್ದಿಯನ್ನು ಕೇಳಲಿರುವಿರಿ. ಬಡತನದ ಅನುಭವ ಲೆಕ್ಕಾಚಾರಿಯನ್ನಾಗಿ ಮಾಡುವುದು.
ತುಲಾ
ಮನಸ್ಸಿನ ತೊಳಲಾಟಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮೂಲಕ ಪರಿಹರಿಸಿಕೊಳ್ಳಬಹುದು. ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಸ್ವಂತ ಕಾರ್ಖಾನೆಯನ್ನು ಹೊಂದಿದವರಿಗೆ ಜನಬಲದ ಕೊರತೆ ಕಾಣಲಿದೆ.
ವೃಶ್ಚಿಕ
ಕಿರಿಯರು ಹೇಳಿದ ಸಲಹೆಗಳನ್ನು ಅನನುಭವಿಗಳ ಮಾತು ಎಂದು ಕಡೆಗಣಿಸದೆ ಅದನ್ನು ಪರಾಮರ್ಶಿಸಿ. ಮೂರನೇ ವ್ಯಕ್ತಿಗಳ ಮಾತನ್ನು ಕೇಳಿಕೊಂಡು ವ್ಯವಹಾರಸ್ಥ ವ್ಯಕ್ತಿಗಳ ಸ್ನೇಹವನ್ನು ಹಾಳು ಮಾಡಿಕೊಳ್ಳದಿರಿ.
ಧನು
ಹೊಸ ವ್ಯಾಪಾರವನ್ನು ಆರಂಭ ಮಾಡಲು ಸೂಕ್ತ ಕಾಲ. ಆತ್ಮವಿಶ್ವಾಸಕ್ಕೆ ದೈವಬಲ ಒದಗುತ್ತದೆ. ಸಹೋದರರ ಮಧ್ಯದಲ್ಲಿದ್ದ ಭಿನ್ನಾಭಿಪ್ರಾಯ ಮನಸ್ಸು ಬಿಚ್ಚಿ ಮಾತನಾಡುವುದರ ಮೂಲಕ ದೂರವಾಗುತ್ತದೆ.
ಮಕರ
ಲೀಲಾಜಾಲವಾಗಿ ಮಾಡುತ್ತಿದ್ದ ಕೆಲಸಗಳು ಇವತ್ತಿನ ಕಾರ್ಯ ಒತ್ತಡದಿಂದ ಕೈಕಟ್ಟುವಂತಾಗುತ್ತವೆ. ಹೂವು ಬೆಳೆಗಾರರು ಕ್ರಿಮಿ-ಕೀಟಗಳ ಕಾಟಕ್ಕೆ ಒಳಪಡುವಂಥ ಸಾಧ್ಯತೆಗಳು ಹೆಚ್ಚಾಗಿವೆ.
ಕುಂಭ
ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇತರರ ವಿಷಯಗಳಲ್ಲಿ ಮೂಗು ತೂರಿಸದೆ ಅಧ್ಯಯನದ ಕಡೆಗೆ ಗಮನ ಕೊಡಿ. ಪದ್ಧತಿಯ ವಿರುದ್ಧವಿರುವ ಆಚರಣೆಗಳನ್ನು ಸರಿಮಾಡಿಕೊಳ್ಳುವ ಬಗ್ಗೆ ಪ್ರಯತ್ನವಿರಲಿ.
ಮೀನ
ಅವಿವೇಕದ ಕೆಲಸಗಳನ್ನು ಮಾಡಿಕೊಂಡು ಕುಟುಂಬದವರೆದುರು ತಲೆ ತಗ್ಗಿಸುವಂತೆ ಮಾಡಿಕೊಳ್ಳಬೇಡಿ. ಕೆಲಸದ ಒತ್ತಡದಿಂದ ಶಿರೋವೇದನೆ ಕಾಡಬಹುದು. ಕುಟುಂಬದಲ್ಲಿ ನೆಮ್ಮದಿ ಇರುವುದು.