ADVERTISEMENT

ದಿನ ಭವಿಷ್ಯ: ಹಣ ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಫೆಬ್ರುವರಿ 2024, 18:30 IST
Last Updated 12 ಫೆಬ್ರುವರಿ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಶ್ರಮದಿಂದ ಸಾಲ ತೀರಿಸಿದ ನೆಮ್ಮದಿ ನಿಮ್ಮದಾಗಲಿದೆ. ವೃತ್ತಿಯ ಪರವಾಗಿ ಬಹಳ ಮುಖ್ಯ ಕೆಲಸವನ್ನು ಮಾತ್ರ ಈ ದಿನ ಕೈಗೆತ್ತಿಕೊಳ್ಳಿ. ಸ್ವಂತ ಉದ್ಯೋಗಿಗಳಿಗೆ ಅಧಿಕ ಲಾಭ.
  • ವೃಷಭ
  • ಮಾತಿನಿಂದ ಕಾರ್ಯ ಸಾಧಿಸುವ ಗುಣದಿಂದ ಅನುಕೂಲಕರ ವಾತಾವರಣ ಕಾಣುವಿರಿ. ದಾರಿಗೆದುರಾಗಿ ಉತ್ತಮ ಅವಕಾಶಗಳು ಹುಡುಕಿ ಬರಲಿದೆ. ಸಗಟು ವ್ಯಾಪಾರಿಗಳಿಗೆ ಒಳ್ಳೆಯ ಸಮಯ.
  • ಮಿಥುನ
  • ಇತ್ತೀಚಿನ ದಿನದಲ್ಲಿ ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿ ಕಾಣಬಹುದು. ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗುವ ಕನಸು ಚಿಗುರೊಡೆಯಲಿದೆ.
  • ಕರ್ಕಾಟಕ
  • ಕುಟುಂಬದವರೊಡನೆ ಮನರಂಜನೆಗಾಗಿ ಅಲ್ಪಕಾಲ ಮೀಸಲಿ ಡಲು ಪ್ರಯತ್ನಿಸಿ. ನೂತನ ಗೃಹ ನಿರ್ಮಾಣದ ಯೋಜನೆಗೆ ಯೋಚಿಸಬಹುದು. ರಕ್ತದೊತ್ತಡ ವ್ಯತ್ಯಾಸವಾಗುವ ಸಾಧ್ಯತೆ ಇರುವುದರಿಂದ ಜಾಗ್ರತರಾಗಿರಿ.
  • ಸಿಂಹ
  • ಗೃಹೋಪಕರಣ ವಸ್ತುಗಳ ಖರೀದಿಯಲ್ಲಿ ಹಾಗೂ ಕೆಲವಾರು ಯೋಜನೆಗಳಲ್ಲಿ ಎಡವಿದ ಅನುಭವ ನಿಮಗಾಗಬಹುದು. ಕಮಿಷನ್ ಏಜೆಂಟ್‌ಗಳಿಗೆ ಮತ್ತು ಸರಕು ಸಾಗಾಣೆದಾರರಿಗೆ ಇಂದು ಉತ್ತಮವಾದ ದಿನ.
  • ಕನ್ಯಾ
  • ಕುಟುಂಬದಲ್ಲಿ ನಡೆಯುವ ಶುಭಸಮಾರಂಭಗಳ ಸಂಭ್ರಮವು ಹಿರಿಯರ ಮನಸ್ಸಿಗೆ ಸಂತೋಷ, ನೆಮ್ಮದಿ ತರುತ್ತದೆ. ಇಂದು ನಿಮ್ಮ ಹತ್ತಿರದವರಿಂದ ಅಡೆತಡೆ ಉಂಟಾಗಲಿದೆ. ಭಕ್ತಿಯಿಂದ ಮಹಾಗಣಪತಿಯನ್ನು ಆರಾಧಿಸಿ.
  • ತುಲಾ
  • ಸ್ನೇಹಿತರಲ್ಲಿ ಸಣ್ಣ ಪುಟ್ಟ ಕಾರಣಗಳಿಗಾಗಿ ಅಥವಾ ವಿನಾಕಾರಣವಾಗಿ ದ್ವೇಷವನ್ನು ಬೆಳೆಸಿಕೊಳ್ಳಬೇಡಿ. ಹವ್ಯಾಸಿ ಬರಹಗಾರರಿಗೆ ಹೇರಳ ಅವಕಾಶ ಇರಲಿದೆ. ಸಹೋದ್ಯೋಗಿಗಳನ್ನು ಹುರಿದುಂಬಿಸುವ ಕೆಲಸವನ್ನು ಮಾಡಿ.
  • ವೃಶ್ಚಿಕ
  • ಆಲೋಚನೆಗಳಿಗೆ ಗ್ರಹಣ ಸಂಭವಿಸಿದಂತಾಗುವುದರಿಂದ ಅಸಮಾಧಾನ , ಹೆದರಿಕೆ, ಧೈರ್ಯಗೆಡುವಂತೆ ಆಗಲಿದೆ. ಸರ್ಕಾರಿ ಗುತ್ತಿಗೆದಾರರಿಗೆ ಬಹಳ ದಿನಗಳಿಂದ ಬಾಕಿ ಇದ್ದ ಕಾಮಗಾರಿ ಹಣ ಮಂಜೂರಾಗಲಿದೆ.
  • ಧನು
  • ಹಿರಿಯರ ಆಸ್ತಿ ಲಭಿಸಲಿದೆ. ಅವಕಾಶಗಳನ್ನು ಹೆಚ್ಚಿಸಿಕೊಳ್ಳಲು ಈ ಸಂದರ್ಭವನ್ನು ಸೂಕ್ತವಾಗಿ ಬಳಸಿಕೊಳ್ಳಿ. ಎಂಜಿನಿಯರ್‌ಗಳ ಕೆಲಸದ ಸಮಯದಲ್ಲಿ ಬದಲಾವಣೆಯಾಗಬಹುದು.
  • ಮಕರ
  • ಹಣ ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ. ವಿದ್ಯಾರ್ಥಿಗಳಿಗೆ ಹಿನ್ನಡೆ ಉಂಟಾಗಿ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಾಗುವುದು. ಸುಗಂಧ ವಸ್ತುಗಳ ಮಾರಾಟದಲ್ಲಿ ಹೆಚ್ಚಳ.
  • ಕುಂಭ
  • ನಿಮ್ಮ ಮನಸ್ಥಿತಿಗೆ, ಆಲೋಚನೆಗಳಿಗೆ ಸರಿಯಾದ ವಾತಾವರಣ ದೊರಕುವ ಲಕ್ಷಣಗಳಿದೆ. ಪಾಕಪ್ರವೀಣರಿಗೆ ವೃತ್ತಿಯಲ್ಲಿ ಹೆಸರು ಸಂಪಾದನೆ ಮಾಡುವ ಕಾಲ ಒದಗಿಬರಲಿದೆ. ಸಂಜೆ ಶುಭ ಸುದ್ದಿಯೊಂದು ಬರಲಿದೆ.
  • ಮೀನ
  • ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಿ ಗ್ರಂಥ ಸಂಪಾದನೆ, ಪ್ರಕಟಣೆ ಕಾರ್ಯಗಳಲ್ಲಿ ತೊಡಗುವಿರಿ. ಶ್ವಾಸಕೋಶಕ್ಕೆ ಸಂಬಂಧ ಪಟ್ಟ ಕಾಯಿಲೆಗಳ ಬಗ್ಗೆ ನಿಗಾ ಇರಲಿ. ನಿಕಟ ವ್ಯಕ್ತಿಗಳ ಜೊತೆಗೆ ವಾಗ್ವಾದಕ್ಕೆ ಇಳಿಯಬೇಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.