ADVERTISEMENT

ದಿನ ಭವಿಷ್ಯ: ನಿವೇಶನ ಖರೀದಿ ಯೋಜನೆ ಹಾಕಿಕೊಳ್ಳಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಮೇ 2025, 18:30 IST
Last Updated 12 ಮೇ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ದೇವತಾನುಗ್ರಹ ಇದೆ ಎಂಬುವುದು ಅನುಭವಕ್ಕೆ ಬಂದಂತೆ ಆಗುವುದು. ವಿದ್ಯಾಭ್ಯಾಸದ ಪೂರಕ ಪರೀಕ್ಷೆಗಳಿಗೆ ಬೇಕಾದ ತಯಾರಿ ಮಾಡಿಕೊಳ್ಳುವುದು ಒಳ್ಳೆಯದು.
  • ವೃಷಭ
  • ಅಕ್ಕಪಕ್ಕದವರ ಪ್ರೀತಿ ವಿಶ್ವಾಸ ಹಿತವೆನಿಸಲಿದೆ. ಮಕ್ಕಳೊಡನೆ ವಿರಸ, ಕಲಹ ಬರದಂತೆ ಪ್ರೀತಿಯಿಂದ ವರ್ತಿಸಿ. ಕಾರ್ಯಪ್ರವೃತ್ತರಾಗಿ ದುಡಿದರೆ ಉತ್ತಮ ಫಲಗಳು ಅನುಭವಕ್ಕೆ ಬರಲಿವೆ.
  • ಮಿಥುನ
  • ಅನಿರೀಕ್ಷಿತ ವರ್ಗಾವಣೆಯಿಂದ ಅನುಕೂಲವೇ ಹೊರತಾಗಿ ಪ್ರತಿಕೂಲ ಇರುವುದಿಲ್ಲ. ಮೇಲಧಿಕಾರಿಗಳ ಅಪ್ಪಣೆಯಂತೆ ಹೆಜ್ಜೆಯಿಡಿ. ಕುಟುಂಬ ಅಭಿವೃದ್ಧಿಗೆ ಉತ್ತಮ ಯೋಚನೆಗಳು ಬರಲಿವೆ.
  • ಕರ್ಕಾಟಕ
  • ಕ್ರೀಡಾಸಕ್ತರಿಗೆ ಅಥವಾ ಕ್ರೀಡಾಪಟುಗಳಿಗೆ ಇಂದು ಶುಭ ದಿನ. ಕಿರುತೆರೆಯಲ್ಲಿ ಅಭಿನಯಿಸಲು ಒತ್ತಾಯಪೂರ್ವಕ ಅವಕಾಶಗಳು ಲಭಿಸುವುದು. ಅವಿವಾಹಿತರಿಗೆ ವಿವಾಹ ಭಾಗ್ಯವಿರುವುದು.
  • ಸಿಂಹ
  • ಎಚ್ಚರದಿಂದ ಕಾರ್ಯ ನಿರ್ವಹಿಸಿ. ಯಂತ್ರಗಳನ್ನು ಬಳಸುವಾಗ ತೊಂದರೆಯಾಗುವ ಸಂಭವವಿದೆ. ತೈಲ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ಸಿಗಲಿದೆ. ಮನಸ್ಸು ಉಲ್ಲಾಸದಾಯಕವಾಗಿ ಇರುತ್ತದೆ.
  • ಕನ್ಯಾ
  • ಇನ್ನೊಬ್ಬ ವ್ಯಕ್ತಿಯಿಂದ ಯಾವುದೇ ರೀತಿಯ ಸಲಹೆ ಅಪೇಕ್ಷಿಸಬೇಡಿ. ವೆಂಕಟರಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ. ಬಾಳು ಹಸನವಾಗುವುದರೊಂದಿಗೆ ವೈವಾಹಿಕ ಜೀವನ ಸುಧಾರಿಸಲಿದೆ.
  • ತುಲಾ
  • ಆಭರಣಗಳ ಖರೀದಿ ನಡೆಸುವುದರಿಂದ ಸಂತೋಷವಾಗುವುದು. ವೃತ್ತಿಯಲ್ಲಿ ಸೋಮಾರಿತನ, ದುರಾಸೆಗಳನ್ನು ಬಿಟ್ಟು ಶ್ರಮಪಡುವ ಮನೋಭಾವ ಬೆಳೆಸಿಕೊಳ್ಳಿರಿ. ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ.
  • ವೃಶ್ಚಿಕ
  • ಆಹಾರದ ಪದ್ದತಿ ನಿಯಂತ್ರಿಸಿಕೊಂಡು ರಕ್ತದೊತ್ತಡ ಸ್ಥಿತಿಯನ್ನು ಸಮತೋಲನಕ್ಕೆ ಬರುವಂತೆ ಮಾಡಿಕೊಳ್ಳಿ. ದೇಹಾಯಾಸ ತೋರಿಬಂದು ತಪ್ಪಾದ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿ ಎದುರಾಗಬಹುದು.
  • ಧನು
  • ನವದಂಪತಿಗಳು ಪರಸ್ಪರ ಬೇಕು ಬೇಡಗಳನ್ನು ಅರಿತು ಬಹಳ ಎಚ್ಚರಿಕೆ ವಹಿಸಿ ಪ್ರತಿ ಹೆಜ್ಜೆ ಇಡಿ. ಸ್ಥಾನಮಾನ ಮತ್ತು ಅತಿ ಪರಿಶ್ರಮದ ದುಡಿಮೆ ಜನರ ಅಸೂಯೆಯ ದೋಷದ ನೋಟಕ್ಕೆ ಗುರಿಯಾಗುವುದು.
  • ಮಕರ
  • ಕೌಟುಂಬಿಕ ಮಾತುಕತೆಯಲ್ಲಾಗಲಿ ಅಥವಾ ಆಫೀಸಿನ ಸಭೆಯಲ್ಲಾಗಲಿ ಸಂದರ್ಭಕ್ಕೆ ಸರಿಯಾದ ಮಾತುಗಳನ್ನು ಆಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದು. ಸಾಮಾಜಿಕವಾಗಿ ಬದುಕಿನಲ್ಲಿ ಹುರುಪನ್ನು ಕಾಣಲಿದ್ದೀರಿ.
  • ಕುಂಭ
  • ನಿಶ್ಚಿತ ಕಾರ್ಯಗಳು ಪ್ರಕೃತಿಯಲ್ಲಿನ ಅನಿಶ್ಚಿತ ಬದಲಾವಣೆಗಳಿಂದಾಗಿ ಹಿಂದುಮುಂದಾಗಬಹುದು. ಹೊಸ ಕೆಲಸವನ್ನು ಆರಂಭ ಮಾಡುವುದು ಸರಿಯಲ್ಲ . ರಾಜಕೀಯ ರಂಗದಲ್ಲಿ ಉತ್ತಮ ಅನುಕೂಲಗಳ ಸಂಭವವಿದೆ.
  • ಮೀನ
  • ಅಣ್ಣ-ತಮ್ಮಂದಿರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಮನೆಯಲ್ಲಿ ಆಗಾಗ ಅಶಾಂತಿಯ ವಾತಾವರಣ ಸೃಷ್ಟಿಯಾಗಬಹುದು. ನಿವೇಶನ ಖರೀದಿ ಯೋಜನೆ ಹಾಕಿಕೊಳ್ಳಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.