ADVERTISEMENT

ದಿನ ಭವಿಷ್ಯ | ಅನಗತ್ಯ ವಿಚಾರಗಳ ಬಗ್ಗೆ ಚಿಂತಿಸುವುದನ್ನು ಬಿಡಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 17 ಜುಲೈ 2025, 18:30 IST
Last Updated 17 ಜುಲೈ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು. ಸರ್ಕಾರಿ ಕಚೇರಿಗಳಲ್ಲಿನ ಕೆಲಸಕ್ಕೆ ಹೆಚ್ಚು ಓಡಾಡುವ ಸಂದರ್ಭ ಎದುರಾಗಲಿದೆ. ಮಗನ ಉದ್ಯೋಗ ನಿಮಿತ್ತ ಅಧಿಕಾರಿಯೊಬ್ಬರ ನೆರವು ಪಡೆಯುವಿರಿ.
  • ವೃಷಭ
  • ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟ ಇರುವುದು. ಖರ್ಚು–ವೆಚ್ಚಗಳಲ್ಲಿ ಮಿತವ್ಯಯ ಸಾಧಿಸಲು ಪ್ರಯತ್ನಿಸುವಿರಿ. ಕಠಿಣ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕವಾಗಿ ಅನುಕೂಲ ಉಂಟಾಗುವುದು.
  • ಮಿಥುನ
  • ನ್ಯಾಯಾಂಗ ಇಲಾಖೆಯವರಿಗೆ ಬಡ್ತಿ ಅಥವಾ ವರ್ಗಾವಣೆ ಸಾಧ್ಯತೆ. ಕಾನೂನು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು ಅಪೇಕ್ಷಿಸಬಹುದು. ಶ್ರೀ ಮಹಾಲಕ್ಷ್ಮಿಯನ್ನು ಪೂಜಿಸಿ ಏಳಿಗೆಯನ್ನು ಹೊಂದುವಿರಿ.
  • ಕರ್ಕಾಟಕ
  • ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪರಿಶ್ರಮ ಮತ್ತು ದೇವರ ಕೃಪಾ ಕಟಾಕ್ಷ ಪಡಬೇಕಾಗುವುದು. ಸರ್ಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ.
  • ಸಿಂಹ
  • ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಜೀವನದ ಹಾದಿ ಬದಲಾಗುವುದು ಅನುಭವಕ್ಕೆ ಬರಲಿದೆ. ಸಮಸ್ಯೆ ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
  • ಕನ್ಯಾ
  • ಸಣ್ಣ ವಿಷಯಗಳಿಗೆ ಕೋಪಿಸಿಕೊಳ್ಳುವ ಮನಸ್ಥಿತಿಯಿಂದಾಗಿ ಹಿರಿಯರ ಕೋಪಕ್ಕೆ ಗುರಿಯಾಗುವ ಸಾಧ್ಯತೆಗಳಿವೆ. ಅರ್ಥಶಾಸ್ತ್ರಜ್ಞರಿಗೆ ಹಿಂದಿನ ಸಾಧನೆಗಳನ್ನು ಗುರುತಿಸಿ ಗೌರವದ ಕರೆ ಬರಲಿದೆ.
  • ತುಲಾ
  • ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಇತರರಿಗೆ ಅಸೂಯೆ ಉಂಟಾಗದಂತೆ ಕಾರ್ಯ ಸಾಧಿಸಿ ಕೊಳ್ಳುವುದು ಉತ್ತಮ. ಮನೆಯ ಹೊರಗಿನ ಆಹಾರ ಸೇವನೆ ಬೇಡ.
  • ವೃಶ್ಚಿಕ
  • ಮೇಲಧಿಕಾರಿಗಳಿಗೆ ಸಲ್ಲಿಸಿದ ಅರ್ಜಿಯು ಮುಂದುವರಿಯದೆ ಇರುವುದು ಮನಸ್ಸಿಗೆ ಗಾಸಿಗೊಳಿಸಬಹುದು. ಬೆಂಕಿಯಿಂದ ಸಂಭವವಾಗುವಂಥ ತೊಂದರೆಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ವಹಿಸಿ.
  • ಧನು
  • ಆಯ್ಕೆ, ತೀರ್ಮಾನ ಮಾಡುವ ವಿಚಾರಗಳಲ್ಲಿಮನಸ್ಸಿನ ಚಂಚಲ ಸ್ವಭಾವದಿಂದ ವಿಫಲರಾಗುವ ಸನ್ನಿವೇಶಗಳಿರುವುದು. ನಿಮ್ಮ ಒಳ್ಳೆಯ ಮಾತುಗಳು ಸ್ಫೂರ್ತಿದಾಯಕವಾಗಿರುತ್ತವೆ.
  • ಮಕರ
  • ಕಾರ್ಮಿಕರಿಗೆ ಆಡಳಿತ ವರ್ಗದವರಿಂದ ಅನುಕೂಲಗಳು ಉಂಟಾಗಲಿವೆ. ಭಾವನೆಗಳ ಮೇಲೆ ಹಿಡಿತವನ್ನು ಸಾಧಿಸುವ ಪ್ರಯತ್ನವನ್ನು ಮಾಡಿ. ಸಾಧನೆಗೆ ಅಪರಿಚಿತರೂ ಪ್ರಶಂಸಿಸುವಂತೆ ಆಗುವುದು.
  • ಕುಂಭ
  • ಸಂಘಟನಾ ಶಕ್ತಿಯನ್ನು ಹೊಂದಿರುವ ನಿಮಗೆ ಪಾಲುದಾರರಲ್ಲಿ ವ್ಯವಹರಿಸುವುದು ಸುಲಭ. ವಿದ್ಯಾಭ್ಯಾಸದಲ್ಲಿ ಆಲಸ್ಯ ತೋರಿ ಬರುವುದು. ಉದ್ಯೋಗ ನಿರೀಕ್ಷೆಯಲ್ಲಿರುವವರು ಉತ್ತಮ ಸಮಾಚಾರವನ್ನು ಕೇಳುವಿರಿ.
  • ಮೀನ
  • ತಲೆಬೇನೆ, ಮಾನಸಿಕ ಅಸ್ವಸ್ಥತೆಯಂಥ ತೊಂದರೆಗಳು ಕಾಡುವ ಸಂಭವವಿದೆ. ಅನಗತ್ಯ ವಿಚಾರಗಳ ಬಗ್ಗೆ ಚಿಂತಿಸುವುದನ್ನು ಬಿಡಿ. ಹಣಕಾಸಿಗೆ ಸಂಬಂಧಿಸಿದಂತೆ ಹೊಸದಾದ ತೀರ್ಮಾನವನ್ನು ಕೈಗೊಳ್ಳುವುದು ಸರಿಯಲ್ಲ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.