ADVERTISEMENT

ದಿನ ಭವಿಷ್ಯ | ಕೃಷಿ ಮೂಲದಿಂದ ಆರ್ಥಿಕವಾಗಿ ಮುನ್ನಡೆ ಸಾಧಿಸುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 19 ಜುಲೈ 2025, 18:30 IST
Last Updated 19 ಜುಲೈ 2025, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಪಾಲುದಾರಿಕೆ ವ್ಯವಹಾರ ನಡೆಸಲು ಇಚ್ಛಿಸುವವರು ನಿಯಮಗಳ ಕುರಿತಾಗಿ ಇನ್ನೊಮ್ಮೆ ಮಾತನಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಸ್ನೇಹ ಸಂಬಂಧ ಉಳಿಯುತ್ತದೆ. ಸನ್ಮಾರ್ಗದಲ್ಲಿ ಹಣ ವಿನಿಯೋಗವಾಗುವುದು.
  • ವೃಷಭ
  • ದೇವತಾನುಗ್ರಹದಿಂದ ಮತ್ತು ಅಪಾರವಾದ ಆತ್ಮ ವಿಶ್ವಾಸದಿಂದ ಕೆಲಸ ಆರಂಭಿಸಿ, ವಿಘ್ನಗಳು ದೂರವಾಗುವುದು. ನಿರೀಕ್ಷಿತ ಮೂಲಗಳಿಂದ ಬರಬೇಕಿದ್ದ ಹಣದ ವಿಚಾರದಲ್ಲಿ ಅಡ್ಡಿ ಆತಂಕ ಎದುರಾಗುವುದು.
  • ಮಿಥುನ
  • ಹೆಚ್ಚುವರಿ ಆದಾಯದ ಬಗ್ಗೆ ದೀರ್ಘವಾದ ಆಲೋಚನೆ ಮಾಡುವಿರಿ. ಕನಸನ್ನು ಸಾಕಾರಗೊಳಿಸುವ ಮನಸ್ಸು ನಿಮಗೀಗ ಬರಲಿದೆ. ನಿಯಮ ಉಲ್ಲಂಘನೆ ಸರಿಯಲ್ಲ. ಸಾಲ ಮರುಪಾವತಿಗೆ ಅವಕಾಶ ಇದೆ.
  • ಕರ್ಕಾಟಕ
  • ರೈತಾಪಿ ವರ್ಗದವರಿಗೆ ಪ್ರಾಕೃತಿಕ ವಾತಾವರಣ ಮತ್ತು ಕೂಲಿ ಕಾರ್ಮಿಕರಿಂದ ಸಹಕಾರ ಹೆಚ್ಚಿನ ಲಾಭವನ್ನು ಉಂಟುಮಾಡಲಿದೆ. ಕುಟುಂಬ ವ್ಯವಹಾರಗಳಲ್ಲಿ ಸಾಕಷ್ಟು ಸಂಯಮ ವಹಿಸುವುದು ಒಳ್ಳೆಯದು.
  • ಸಿಂಹ
  • ಮೇಲ್ನೋಟಕ್ಕೆ ಕಾಣುವುದೇ ಸತ್ಯವೆಂದು ನಂಬಬೇಡಿ, ಆಳವಾದ ಅಧ್ಯಯನ ನಡೆಸಿ ತೀರ್ಮಾನಿಸಿರಿ. ದೈನಂದಿನ ಕೆಲಸದ ಹೊರತಾಗಿ ಹೆಚ್ಚುವರಿ ಕೆಲಸದಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ.
  • ಕನ್ಯಾ
  • ವ್ಯವಹಾರಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಇರುವುದು. ವಿದ್ಯಾಭ್ಯಾಸ ದಲ್ಲಿ ಹೆಚ್ಚಿನ ಉತ್ಸಾಹ ಉಂಟಾಗಲಿದೆ. ತರಕಾರಿ ಬೆಳೆಗಳಿಗೆ ಉತ್ತಮ ಬೆಲೆ ದೊರೆತು ಸಮಾಧಾನದ ಜೊತೆಯಲ್ಲಿ ಆರ್ಥಿಕವಾಗಿ ಭದ್ರವಾಗುವಿರಿ.
  • ತುಲಾ
  • ಬರವಣಿಗೆ, ಮುದ್ರಣ ಕೆಲಸ ಮಾಡುತ್ತಿರುವವರಿಗೆ ಲಾಭದಾಯಕ ಅವಕಾಶ ಸಿಗಲಿದೆ. ಆದಾಯದಲ್ಲಿ ಗಣನೀಯ ವ್ಯತ್ಯಾಸವಾಗುವುದು. ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸ ಅನಾರೋಗ್ಯವನ್ನು ಉಂಟುಮಾಡಲಿದೆ.
  • ವೃಶ್ಚಿಕ
  • ನಾಟಕೀಯ ಬುದ್ಧಿ ಬಿಟ್ಟು ಪ್ರಾಮಾಣಿಕವಾಗಿರಿ. ನಿಜವಾದ ಭಾವನೆಗಳಿಂದ ಪ್ರಾಮಾಣಿಕವಾಗಿರಲು ಸಾಧ್ಯ. ವೃತ್ತಿ ಕೌಶಲ ಹಾಗೂ ಜಾಣ್ಮೆ ಮೆಚ್ಚುಗೆಗೆ ಪಾತ್ರವಾಗುವುದು. ಸಾಕಷ್ಟು ಹಣ ಹೂಡಿಕೆ ಮಾಡುವಿರಿ.
  • ಧನು
  • ಹಳೆಯ ಸಮಸ್ಯೆಗಳನ್ನು ಕೆದಕುವ ಬದಲು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿ. ನಿಮಗೆ ವೃತ್ತಿ ಜೀವನದ ಬಗ್ಗೆ ಇರುವ ಸಂಶಯವನ್ನು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಿ. ಬೇಳೆಕಾಳು ಸಗಟು ವ್ಯಾಪಾರಿಗಳಿಗೆ ಲಾಭವಿದೆ.
  • ಮಕರ
  • ಕನಸುಗಳನ್ನು ನನಸು ಮಾಡಲು ಸಾಕಷ್ಟು ಶ್ರಮ ಅನಿವಾರ್ಯ. ಸಮಸ್ಯೆಗಳಿಗೆ ಉತ್ತಮ ಪರಿಹಾರಗಳು ದೊರೆಯುವವು. ವೃತ್ತಿಯ ಜೊತೆಜೊತೆಗೆ ಉನ್ನತ ವಿದ್ಯಾಭಾಸ ಮಾಡುವ ಮನಸ್ಸಾಗಲಿದೆ.
  • ಕುಂಭ
  • ಮಕ್ಕಳ ಓದಿನ ವಿಚಾರದಲ್ಲಿ ಕಠಿಣ ಕ್ರಮ ಅಗತ್ಯವಾಗುವುದು. ದೈನಂದಿನ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕಿರುವರು.
  • ಮೀನ
  • ಕುಟುಂಬದ ಸದಸ್ಯರಲ್ಲಿ ಉತ್ತಮ ಆರೋಗ್ಯವಿರುವುದು ಮನಸ್ಸಿಗೆ ನೆಮ್ಮದಿ ತರಲಿದೆ. ಕೃಷಿ ಮೂಲದಿಂದ ಆರ್ಥಿಕವಾಗಿ ಮುನ್ನಡೆ ಸಾಧಿಸುವಿರಿ. ಸ್ನೇಹಿತರ ಕೆಲಸಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.