ದಿನ ಭವಿಷ್ಯ: ಈ ರಾಶಿಯವರು ಈಶ್ವರನ ಉಪಾಸನೆ ಮಾಡುವುದು ಉತ್ತಮ..
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
ದಿನ ಭವಿಷ್ಯ
ಮೇಷ
ಮಾಡುತ್ತಿರುವ ಯೋಗಾಭ್ಯಾಸ ಹಾಗೂ ವೈದ್ಯರ ಸಲಹೆಯಿಂದ ಆರೋಗ್ಯವು ಸುಧಾರಿಸುವುದು. ಆತ್ಮವಿಶ್ವಾಸದಿಂದಾಗಿ ಕೆಲಸಕಾರ್ಯಗಳಲ್ಲಿ ಅತಿ ಯಶಸ್ಸು ಹೊಂದುವಿರಿ.
ವೃಷಭ
ಹರಿತ ಮಾತುಗಳು ಕೆಲವರ ತೇಜೋವಧೆಯನ್ನು ಮಾಡಬಹುದು. ಅದಕ್ಕೆ ಅವಕಾಶವನ್ನು ಕೊಡದಿರಿ.ಅಡುಗೆಯಲ್ಲಿ ಉಂಟಾದ ವ್ಯತ್ಯಾಸದಿಂದ ಅಸಮಾಧಾನ ಉಂಟಾಗಬಹುದು.
ಮಿಥುನ
ರಾಜಕೀಯ ಪ್ರತಿಸ್ಪರ್ಧಿಗಳು ಗಲಾಟೆಯನ್ನು ಉಂಟುಮಾಡಬಹುದು. ಹಿಂದಿಕ್ಕುವ ಪ್ರಯತ್ನವನ್ನು ಮಾಡಲಿದ್ದಾರೆ.ಒಳ್ಳೆಯ ನಡತೆಗಳು ತಾಯಿಯ ಪ್ರತಿಬಿಂಬದಂತೆ ಕಾಣಲಿವೆ.
ಕರ್ಕಾಟಕ
ಸುಖಕರ ಜೀವನವನ್ನು ನಡೆಸುತ್ತಿರುವಾಗ ಸಣ್ಣ ಪುಟ್ಟ ಕಷ್ಟಗಳು ಬಂದದ್ದೇ ಹೆಚ್ಚಾಗಿ ಕಾಣಬಹುದು. ಹಿಂಸೆಯುಂಟಾಗುತ್ತದೆ ಎನ್ನಿಸುವ ವಿಚಾರದಿಂದ ಆದಷ್ಟು ದೂರ ಇರುವಂಥ ಪ್ರಯತ್ನವನ್ನು ಮಾಡಿ.
ಸಿಂಹ
ವಿಶೇಷ ಆಹಾರವನ್ನು ತಿನ್ನುವ ಅವಕಾಶವಿದ್ದರೂ ಆರೋಗ್ಯದ ದೃಷ್ಟಿಯಿಂದ ಹಿಂದೆ ಸರಿಯುವಿರಿ. ವ್ಯಾಪಾರ ವ್ಯವಹಾರಗಳಿಂದ ಸಣ್ಣ ಬಿಡುವು ತೆಗೆದುಕೊಳ್ಳುವಿರಿ. ನಿತ್ಯದ ಔಷಧಿಯನ್ನು ಮರೆಯಬೇಡಿ.
ಕನ್ಯಾ
ಅನುಪಸ್ಥಿತಿಯನ್ನು ಕುಟುಂಬದವರು ದುಃಖದಿಂದ ಅನುಭವಿಸುವರು. ಸಣ್ಣ ಪುಟ್ಟ ವಿಷಯಗಳಿಗೂ ಬಹಳವಾಗಿ ನೊಂದುಕೊಳ್ಳುವಿರಿ. ವಾಹನವನ್ನು ಚಲಾಯಿಸುವಾಗ ಜಾಗ್ರತೆ ವಹಿಸಿ.
ತುಲಾ
ಹಲವು ದಿನಗಳ ತಿರುಗಾಟದಿಂದ ದೇಹಾಯಾಸ ಹೊಂದುವಿರಿ. ವಾರ್ಷಿಕವಾಗಿ ನಡೆಯಬೇಕಾದ ಮನೆಯ ಸಂಪ್ರದಾಯ ನಡೆಸುವ ಜವಾಬ್ದಾರಿ ತೆಗೆದುಕೊಳ್ಳುವಿರಿ. ಕೃಶವಾದ ಶರೀರವನ್ನು ಪುಷ್ಟಿಗೊಳಿಸುವ ಕಡೆ ಗಮನಿಸಿ.
ವೃಶ್ಚಿಕ
ಸಾರ್ವಜನಿಕರ ಸ್ವತ್ತನ್ನು ಹಾಳುಗೆಡುವಿದ ಪರಿಣಾಮವಾಗಿ ದಂಡ ಕಟ್ಟುವಿರಿ. ಈಶ್ವರನ ಉಪಾಸನೆ ಮಾಡುವುದು ಉತ್ತಮ. ತಿಂಗಳ ಸಂಬಳ ಈಗಾಗಲೇ ಖಾಲಿಯಾದ ಪರಿಸ್ಥಿತಿ ಬರುವುದು.
ಧನು
ಮನೆಯಲ್ಲಿರುವ ಸಣ್ಣ ಮಕ್ಕಳ ಆರೋಗ್ಯದಲ್ಲಿನ ವ್ಯತ್ಯಾಸ ಆತಂಕಕ್ಕೆ ಕಾರಣವಾಗುವುದು. ಹಣಕಾಸಿನ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸುವ ಕೆಲಸ ಮಾಡುವಿರಿ. ಧ್ಯಾನ ಯೋಗದಲ್ಲಿ ಆಸಕ್ತಿ ಬರುವುದು.
ಮಕರ
ಶಕ್ತಿಗಿಂತ ಯುಕ್ತಿಯೇ ಮೇಲು ಎಂಬುದನ್ನು ತೋರಿಸುವಿರಿ. ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯವು ಸವಾಲಾಗುವುದು. ಮಾಡಿದ ಎಲ್ಲಾ ಕೆಲಸಗಳನ್ನು ಮತ್ತೊಮ್ಮೆ ಇಂಚು ಇಂಚಾಗಿ ಪರಿಶೀಲನೆ ಮಾಡುವುದು ಸೂಕ್ತ.
ಕುಂಭ
ಸಾಲಗಾರರು ಸಾಲ ಚುಕ್ತ ಮಾಡಲು ಹೆಣಗಾಡುವಿರಿ. ಚಿತ್ರಕಲಾಕಾರರಿಗೆ ವಿಶೇಷ ಅವಕಾಶ ಸಿಗುತ್ತದೆ. ನವದಂಪತಿ ಪ್ರಯಾಣ ಮಾಡುವುದಿದ್ದಲ್ಲಿ ಬಹಳ ಮುಂಜಾಗ್ರತೆ ವಹಿಸಬೇಕು.
ಮೀನ
ಸಮಾರಂಭಕ್ಕೆ ಬಂಧು-ಮಿತ್ರರ ದೊರೆಯಲಿದೆ. ಆಗು-ಹೋಗುಗಳನ್ನು ಅರಿತು ವ್ಯವಹಾರದಲ್ಲಿ ಮುಂದುವರಿಯುವುದು ಉತ್ತಮ.ಮನೆಯವರೆಲ್ಲರೂ ಕೆಲಸ ಕಾರ್ಯಗಳಲ್ಲಿ ನಿಮ್ಮಿಚ್ಛೆಯಂತೆ ನಡೆದುಕೊಳ್ಳುವರು.