ADVERTISEMENT

ದಿನ ಭವಿಷ್ಯ: ಈ ರಾಶಿಯವರು ಹಿತಶತ್ರುಗಳ ಬಗ್ಗೆ ಎಚ್ಚರ ವಹಿಸಿ

ಗುರುವಾರ, 22 ಮೇ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 21 ಮೇ 2025, 23:30 IST
Last Updated 21 ಮೇ 2025, 23:30 IST
   
ಮೇಷ
  • ಸಾಧುಸಂತರ ದರ್ಶನದಿಂದ ಮನಸ್ಸಿಗೆ ಸಮಾಧಾನ ಕಂಡುಬರಲಿದೆ. ಆಕಸ್ಮಿಕ ಧನಲಾಭದಿಂದ ಹರ್ಷವಾಗುವುದು. ಪರೀಕ್ಷಾ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಪರೀಕ್ಷಿಸಬಹುದು. ಸಿದ್ಧರಾಗಿರಿ.
  • ವೃಷಭ
  • ಬಂಧು-ಮಿತ್ರರ ಒಡನಾಟದಿಂದ ಸಂತೋಷ ತೋರಿಬರಲಿದೆ. ಚಿನ್ನ–ಬೆಳ್ಳಿ ವ್ಯಾಪಾರಿಗಳಿಗಿಂದು ವ್ಯಾಪಾರವಾಗುವ ಸಂತೋಷದ ಜತೆಗೆ ಅಂಗಡಿಯಲ್ಲಿ ಬೆಲೆ ಬಾಳುವ ವಸ್ತುಗಳು ಕಾಣೆಯಾಗುವ ಆತಂಕವೂ ಎದುರಾಗಲಿದೆ.
  • ಮಿಥುನ
  • ಸತ್ಯನಾರಾಯಣ ಸ್ವಾಮಿಯ ಸೇವೆ ಮಾಡುವುದರಿಂದ ಜಟಿಲ ಸಮಸ್ಯೆಗಳೂ ಸೌಹಾರ್ದಯುತವಾಗಿ ಬಗೆಹರಿಯಲಿವೆ. ತಂತ್ರಗಾರಿಕಾ ಬುದ್ಧಿಯನ್ನು ಬದಲಿಸಿಕೊಳ್ಳುವ ಸಮಯ.
  • ಕರ್ಕಾಟಕ
  • ಪತ್ರಿಕೋದ್ಯಮಿಗಳಿಗೆ ಶುಭದಿನ. ಪ್ರಸ್ತುತ ರಾಜಕೀಯ ವಿದ್ಯಮಾನಗಳಿಂದ ಸಾಮಾಜಿಕ ಲಾಭವಾಗಲಿದೆ. ಅಧಿಕಾರ ಪಡೆದುಕೊಳ್ಳಲು ಲಾಬಿ ನಡೆಸಬೇಕಾಗಬಹುದು. ಪಾರಂಪರಿಕ ಹಿತಶತ್ರುಗಳ ಬಗ್ಗೆ ಎಚ್ಚರ ವಹಿಸಿ.
  • ಸಿಂಹ
  • ಹೊಸಕೆಲಸಕ್ಕೆ ಕೈ ಹಾಕಲಿಚ್ಛಿಸಿರುವ ನೀವು ಮೊದಲು ಆರ್ಥಿಕ ಪರಿಸ್ಥಿತಿ ಯನ್ನು ಉತ್ತಮಗೊಳಿಸಲು ಬೇಕಾಗುವ ಎಲ್ಲಾ ಕಾರ್ಯಗಳನ್ನು ಪ್ರಾರಂಭಿಸಿ. ಇನ್ನೊಬ್ಬರ ಜೀವನದ ಜತೆ ಆಟವಾಡುವುದು ಸರಿಯಲ್ಲ.
  • ಕನ್ಯಾ
  • ಪಟ್ಟು ಬಿಡದೆ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ವೃತ್ತಿ ತರಬೇತಿ ಸಂಸ್ಥೆಗಳಲ್ಲಿ ಉದ್ಯೋಗ ಸಿಗಲಿದೆ. ಮಕ್ಕಳಿಂದ ವಿದ್ಯಾಭ್ಯಾಸದ ವಿಷಯದಲ್ಲಿ ಖರ್ಚು ಸಂಭವವಿರುವುದು. ಉದ್ಯೋಗ ಬದಲಾವಣೆಗೆ ಪ್ರಯತ್ನಿಸಬಹುದು.
  • ತುಲಾ
  • ವಾಣಿಜ್ಯೋದ್ಯಮ ಮಂದಿಗೆ ಇಂದು ವ್ಯವಹಾರದಲ್ಲಿ ಬಂಡವಾಳ ತೊಡಗಿಸಲು ಉತ್ತಮ ದಿನ . ಆದರೆ ಹಣದ ಹೊಂದಾಣಿಕೆ ವಿಷಯವಾಗಿ ನಂಬಿದವರಿಂದ ಮೋಸವಾಗಿ ಪರಿಸ್ಥಿತಿ ಕಷ್ಟವಾಗಲಿದೆ.
  • ವೃಶ್ಚಿಕ
  • ವೈದ್ಯಕೀಯ ಖರ್ಚಿನ ಹಣವನ್ನು ಸಂಸ್ಥೆಯಿಂದ ಪಡೆದುಕೊಳ್ಳುವಂತಾಗುವುದು. ಕುಟುಂಬ ಕಲಹದಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರುಕುಳವು ತೋರಿಬಂದೀತು.
  • ಧನು
  • ಕಚೇರಿಗಳಲ್ಲಿ ಸಹೋದ್ಯೋಗಿಗಳ ಸಹಕಾರ ಪಡೆಯುವುದು ಅಗತ್ಯ. ಸುಗಂಧ ದ್ರವ್ಯಗಳ ಉಪಯೋಗದಿಂದ ಅಲರ್ಜಿ ಸಂಭವಿಸಬಹುದು. ನಿಗಾದಿಂದ ಉಪಯೋಗಿಸಿ. ವಿದ್ಯಾ ಕ್ಷೇತ್ರದವರಿಗೆ ಗೌರವ ದೊರಕಲಿದೆ.
  • ಮಕರ
  • ಮಂಜುನಾಥನ ದರ್ಶನ ಭಾಗ್ಯದಿಂದ ಕಾರ್ಯಾನುಕೂಲವಾಗಲಿದೆ. ಆದಾಯವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ. ಪ್ರತಿಭೆ ಮತ್ತು ಕೌಶಲಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ.
  • ಕುಂಭ
  • ಧೈರ್ಯದಿಂದ ದೊಡ್ಡ ಯೋಜನೆ ಕೈಗೊಳ್ಳಬಹುದು. ಆದರೆ, ಹಣದ ವಿಚಾರದಲ್ಲಿ ಎಚ್ಚರವಹಿಸಿ. ಆಪ್ತಸ್ನೇಹಿತರು ಮತ್ತು ನೆರೆಯವರೊಂದಿಗೆ ಬಾಂಧವ್ಯ ಉತ್ತಮಗೊಳ್ಳುವುದು. ವ್ಯಸನಗಳಿಂದ ದೂರವಿರಿ.
  • ಮೀನ
  • ಶ್ರಮಜೀವಿಗಳಿಗೆ ಉತ್ತಮ ಆದಾಯವಿರುವುದು. ನಿಮ್ಮ ಯೋಜನೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದರಿಂದ ಸಮಾಧಾನ ಇರಲಿದೆ. ಯಶಸ್ಸಿಗಾಗಿ ವಿಶೇಷ ಪರಿಶ್ರಮದ ಆಗತ್ಯವಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.