ADVERTISEMENT

ದಿನ ಭವಿಷ್ಯ: ಈ ರಾಶಿಯವರು ಶಿರೋವೇದನೆಯಿಂದ ಬಳಲುವ ಸಾಧ್ಯತೆ ಇದೆ

ಶನಿವಾರ, 24 ಮೇ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಮೇ 2025, 19:30 IST
Last Updated 23 ಮೇ 2025, 19:30 IST
   
ಮೇಷ
  • ಇತರರನ್ನು ಮಾತಿನ ಮೂಲಕ ಗೆಲ್ಲುವ ಸಾಮರ್ಥ್ಯವಿದೆ. ನಿಮ್ಮ ಮಾತು ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಇರುವ ಬಗ್ಗೆ ಗಮನ ನೀಡಿ. ತಾಳ್ಮೆ ವಹಿಸಿ. ಶಿರೋವೇದನೆಯಿಂದ ಬಳಲುವ ಸಾಧ್ಯತೆ ಇರುವುದು.
  • ವೃಷಭ
  • ಅವಸರ ಮತ್ತು ಉದ್ವೇಗ ಇವೆರಡೂ ತಲೆ ತಗ್ಗಿಸುವಂತೆ ಮಾಡಬಹುದು. ಕೆಲಸದ ಬಗ್ಗೆ ವಿಮರ್ಶಿಸಿ ನಂತರದಲ್ಲಿ ಕಾರ್ಯರೂಪಕ್ಕೆ ತನ್ನಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಾಣಲಿದ್ದಾರೆ.
  • ಮಿಥುನ
  • ತಪ್ಪುಗಳನ್ನು ಪುನರಾವರ್ತನೆಯಾಗದಂತೆ ಗಮನಿಸಿದರೆ ಯಶಸ್ಸಿನ ದಾರಿ ಕಾಣಬಹುದು. ಸಿದ್ಧಿವಿನಾಯಕನ ಆರಾಧನೆಯು, ನಾಮಸ್ಮರಣೆಯು ಶುಭವನ್ನು ಉಂಟುಮಾಡುತ್ತದೆ.
  • ಕರ್ಕಾಟಕ
  • ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಮನೆಮದ್ದುಗಳಿಂದ ಸರಿಹೋಗುತ್ತದೆ. ಸಂಗೀತಗಾರರಿಗೆ ಮತ್ತು ನರ್ತಕರಿಗೆ ಅವಿಸ್ಮರಣೀಯ ದಿನ.
  • ಸಿಂಹ
  • ಸುಂದರ ವಸ್ತು, ಚಿತ್ರ ಅಥವಾ ಸಮಾಜದ ಅತಿ ಗಣ್ಯವ್ಯಕ್ತಿಗಳನ್ನು ನೋಡುವ, ಮಾತನಾಡುವ ಭಾಗ್ಯ ಸಿಗುವುದು. ಲೇಖನ ಬರೆಯುವುದರಿಂದ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ. ಅನುಯಾಯಿಗಳು ಹುಟ್ಟಿಕೊಳ್ಳುವರು.
  • ಕನ್ಯಾ
  • ಸೂಕ್ತ ಸಮಯದಲ್ಲಿ ಸರಿಯಾದ ಕೆಲಸ ಮಾಡುವುದರಿಂದ ಅದೃಷ್ಟ ಖುಲಾಯಿಸಲಿದೆ. ವೃತ್ತಿಯಲ್ಲಿ ಉನ್ನತ ಅಧಿಕಾರಿಗಳಿಗೆ ಸಲಹೆ ನೀಡುವ ಬಗ್ಗೆ ಹಿಂಜರಿಕೆ ಬೇಡ. ಆಲೋಚನೆ ಮಾಡಿ.
  • ತುಲಾ
  • ಅಧಿಕಾರದಲ್ಲಿ ಸ್ಥಾನಮಾನ ಪಡೆಯುವ ಬಯಕೆಯಿಂದಾಗಿ ದೇವರ ಸೇವೆಯಂಥ ಧಾರ್ಮಿಕ ಕಾರ್ಯಗಳನ್ನು ನಡೆಸುವುದು ಒಳ್ಳೆಯದು. ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆ ವೃದ್ಧಿಯಾಗಲಿದೆ.
  • ವೃಶ್ಚಿಕ
  • ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಸ್ವಲ್ಪಮಟ್ಟಿನ ಆಲಸ್ಯ ಉಂಟಾಗಲಿದೆ. ಕಾರ್ಯದ ವೇಗ ಕಡಿಮೆಯಾಗುವುದು. ಹೊಸ ಹೂಡಿಕೆಯಲ್ಲಿ ಎಚ್ಚರ ಇಲ್ಲದಿದ್ದರೆ ನಷ್ಟವಾಗುವುದು.
  • ಧನು
  • ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ ಅಥವಾ ಸಮಾಜದಲ್ಲಿ ಹೆಸರು ಲಭಿಸಲಿದೆ. ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯವನ್ನು ಹೊಂದುವಿರಿ. ಸಂಧಾನದಿಂದ ಸಮಸ್ಯೆ ಬಗೆಹರಿಯುತ್ತದೆ.
  • ಮಕರ
  • ಪಾಲಕರಾಗುವ ಸುದ್ದಿ ತಿಳಿದು ಅತೀವ ಸಂತಸ. ತೈಲಗಳ ಲೇಪನ ಮಾಡಿಕೊಳ್ಳುವುದರಿಂದ ಕಾಲುನೋವು ನಿವಾರಣೆ. ವಿವಾಹದ ವಿಚಾರದಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ.
  • ಕುಂಭ
  • ವೃತ್ತಿಯಲ್ಲಿ ಬದಲಾವಣೆ ಅನಿವಾರ್ಯವೆನಿಸಲಿದೆ. ಅದಕ್ಕೆ ಸ್ನೇಹಿತರೊಂದಿಗಿನ ಮಾತುಕತೆ ಉಪಯುಕ್ತವಾಗುವುದು. ಮಗನಿಗೆ ಓದಿನಲ್ಲಿ ಸಹಾಯ ಮಾಡುವಿರಿ. ಬಿಳಿ ಬಣ್ಣದ ಉಡುಗೆ ಶುಭ ತರುವುದು.
  • ಮೀನ
  • ಹಿಂದಿನ ದಿನಗಳಿಗೆ ಹೋಲಿಸಿದರೆ ಸಂಸಾರ ನಿರ್ವಹಣೆ ಸುಲಭವೆನಿಸುವುದು. ಕ್ರೀಡಾಪಟುಗಳ ಅಭ್ಯಾಸದ ಕೊರತೆಯು ವೈಫಲ್ಯಕ್ಕೆ ಕಾರಣವಾಗುತ್ತದೆ. ಎಲ್ಲಾ ವಿಧದ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.