ADVERTISEMENT

ದಿನ ಭವಿಷ್ಯ: ರೈತಾಪಿ ವರ್ಗದವರಿಗೆ ಶುಭವಾಗುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 24 ಅಕ್ಟೋಬರ್ 2024, 18:30 IST
Last Updated 24 ಅಕ್ಟೋಬರ್ 2024, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಮನೆಯಲ್ಲಿ ಯಾವುದಾದರೂ ಕಾರ್ಯಕ್ರಮದ ಸಲುವಾಗಿ ಕುಟುಂಬಸ್ಥರೆಲ್ಲ ಒಂದಾಗುವ ಸನ್ನಿವೇಶಗಳಿವೆ. ಮಗಳ ಮದುವೆಯ ಭರ್ಜರಿ ತಯಾರಿಗಳು ನಡೆಯಲಿವೆ. ಸುಮಧುರ ಗಾಯನ ಕೇಳುವಿರಿ.
  • ವೃಷಭ
  • ರೇಷ್ಮೆ ವಸ್ತ್ರಗಳ ತಯಾರಕರಿಗೆ ಹಾಗೂ ಮಾರಾಟಗಾರರಿಗೆ ವಿಶೇಷವಾದ ವ್ಯಾಪಾರವಾಗುವುದು. ದೇಶದ ಪರ್ಯಟನೆ ಮಾಡುವ ಕನಸಿಗೆ ಪುಷ್ಟಿ ದೊರೆಯುತ್ತದೆ. ಧಾರ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದುವಿರಿ.
  • ಮಿಥುನ
  • ಗುರಿ ತಲುಪುವ ವೇಳೆಯಲ್ಲಿ ಎದುರಾಗುವಂಥ ವಿಘ್ನಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಗೃಹಸ್ಥರಿಗೆ ಮಕ್ಕಳ ವಿಷಯವಾಗಿ ತಲೆ ನೋವಾಗಬಹುದು. ದೇಹಕ್ಕೆ ಆಗದಂಥ ಆಹಾರದಿಂದ ದೂರವಿರಿ.
  • ಕರ್ಕಾಟಕ
  • ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗ ಮಾಡುತ್ತಿರುವವರು, ಸ್ವಂತ ಉದ್ಯೋಗ ನಡೆಸುವ ಯೋಚನೆ ಬಂದರೂ ಅದರಂತೆ ನಡೆಯುವುದು ಸರಿಯಲ್ಲ. ದುಂದುವೆಚ್ಚದಿಂದ ಹಣದ ಅಭಾವ ಉಂಟಾಗುತ್ತದೆ.
  • ಸಿಂಹ
  • ತರಬೇತಿ ಹೊಂದಿದ ಮರದ ಕೆತ್ತನೆಯ ಕುಶಲಕರ್ಮಿಗಳಿಗೆ ಆದಾಯ ಮತ್ತು ಬೇಡಿಕೆ ಹೆಚ್ಚಲಿದೆ. ಚರ್ಮವ್ಯಾಧಿಯಂತಹ ಅನಾರೋಗ್ಯ ಎದುರಾಗಬಹುದು. ಮಗನಿಗೆ ಉದ್ಯೋಗ ದೊರೆತು ಸಂತೋಷ ಆಗುವುದು.
  • ಕನ್ಯಾ
  • ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಪ್ರವಾಸದ ಯೋಜನೆ ಹಾಕುವಿರಿ. ಇಂದಿನ ಯೋಚನೆ ಹೆಚ್ಚಿನ ಖರ್ಚಿಗೆ ದಾರಿಯಾದರೂ, ಅದರ ಫಲದಿಂದ ಸಂತೋಷವಿರುವುದು. ಹಬ್ಬದ ಖರೀದಿ ಮಾಡುವಿರಿ.
  • ತುಲಾ
  • ಅಧಿಕಾರಿಗಳ ಜತೆ ಸರಿ ಸಮಯದಲ್ಲಿ ಮುಕ್ತ ಚರ್ಚೆ ಮಾಡಿದಲ್ಲಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಪಡೆದುಕೊಳ್ಳಬಹುದು. ಕುಟುಂಬದಲ್ಲಿ ಸೌಹಾರ್ದತೆ ಕಾಪಾಡುವಲ್ಲಿ ಯಶಸ್ವಿಯಾಗುವಿರಿ.
  • ವೃಶ್ಚಿಕ
  • ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆತು ಮುಂದಿನ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಯೋಜನೆಗಳಿಗೆ ಸ್ತ್ರೀವರ್ಗದಿಂದ ಮಹತ್ವದ ಸಹಾಯ ಪ್ರಾಪ್ತವಾಗಲಿದೆ.
  • ಧನು
  • ಗ್ರಹಗಳ ಚಲನೆಯು ತಿರುಗಾಟವನ್ನು ಮಾಡಿಸುವುದರಿಂದ ಆರೋಗ್ಯದ ಬಗ್ಗೆ ಗಮನಹರಿಸುವುದು ಅನಿವಾರ್ಯ. ಸಂಸ್ಥೆಯ ಅಭಿವೃದ್ಧಿಗಾಗಿ ಕಾರ್ಮಿಕ ವರ್ಗದೊಡನೆ ಸಕಾರಾತ್ಮಕ ಮಾತುಕತೆ ನಡೆಸಲು ನಿರ್ಧರಿಸಿ.
  • ಮಕರ
  • ಕುಟುಂಬದ ಹಿರಿಯರ ಆರೋಗ್ಯ ನಷ್ಟದಿಂದ ಆಸ್ಪತ್ರೆಯ ತಿರುಗಾಟದ ಕ್ಲೇಶ ಉಂಟಾಗುವುದು. ಹಣ್ಣು ಹೂವಿನ ಮಾರಾಟಗಾರರಿಗೆ ಸಾಧಾರಣ ಮಾರಾಟವಿರುವುದು. ಕಲಿಕೆಯಲ್ಲಿ ಸೋಮಾರಿತನದಿಂದ ಹಿಂದುಳಿಯುವಿರಿ.
  • ಕುಂಭ
  • ಜಮೀನು ಖರೀದಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನವನ್ನು ಹೆಚ್ಚಿಸಿಕೊಳ್ಳಬಹುದು. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಸ್ಥಾನಮಾನ ಹೆಚ್ಚಾಗಲಿದೆ. ರೈತಾಪಿ ವರ್ಗದವರಿಗೆ ಶುಭವಾಗುವುದು.
  • ಮೀನ
  • ಕಚೇರಿ ಕೆಲಸಗಳನ್ನು ಸಮರ್ಪಣಾ ಭಾವನೆಯಿಂದ ನಿರ್ವಹಿಸಿ. ಸ್ವಂತ ಉದ್ಯೋಗ ನಡೆಸುವವರ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಇಂದಿನ ದೂರದ ಪ್ರಯಾಣ ಸುಖಕರವಾಗಿರುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.