ADVERTISEMENT

ದಿನ ಭವಿಷ್ಯ: ಈ ರಾಶಿಯ ವ್ಯಾಪಾರಸ್ಥರು ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಅಕ್ಟೋಬರ್ 2025, 23:30 IST
Last Updated 25 ಅಕ್ಟೋಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಬಿಟ್ಟುಹೋದ ಸಂಬಂಧಗಳನ್ನು ಮತ್ತೆ ಬೆಳೆಸುವ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ, ಒಮ್ಮತದ ತೀರ್ಮಾನಕ್ಕೆ ಬರುವುದು ಉತ್ತಮ. ಬಾಕಿ ಉಳಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ.
  • ವೃಷಭ
  • ನಿಮ್ಮ ಕಾರ್ಯ ವೈಖರಿಯು ಕೆಲವರಲ್ಲಿ ಮತ್ಸರ ಉಂಟುಮಾಡುತ್ತದೆ. ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಕೆಲಸದ ಅಧಿಕ ಒತ್ತಡದಿಂದ ಬೆನ್ನು ನೋವು ಕಾಡಬಹುದು.
  • ಮಿಥುನ
  • ಯೋಜನೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಅಗತ್ಯವಾಗಿ ಚರ್ಚೆ ನಡೆಸಿ. ವ್ಯಾಪಾರಸ್ಥರು ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ. ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬದಲಾವಣೆಯ ಸೂಚನೆ ಕಂಡುಬರಲಿದೆ.
  • ಕರ್ಕಾಟಕ
  • ನಿಮ್ಮ ಗುಪ್ತ ವಿಷಯಗಳನ್ನು ತಿಳಿದುಕೊಳ್ಳಲು ನಿಮ್ಮೊಡನೆ ಕಪಟ ಸ್ನೇಹವನ್ನು ಮಾಡುವವರ ಬಗ್ಗೆ ಗಮನವಿರಲಿ. ಮೊದಲು ಕೊಟ್ಟ ಮಾತಿನಂತೆಯೆ ನಡೆದುಕೊಳ್ಳಲು ಹರಸಹಾಸವನ್ನು ಪಡುವಂತಾಗಬಹುದು.
  • ಸಿಂಹ
  • ದೇಹದಲ್ಲಿನ ಉಷ್ಣತೆಯನ್ನು ನೀವಾಗಿಯೆ ಆಹಾರದ ಮೂಲಕ ನಿವಾರಿಸಿಕೊಳ್ಳದಿದ್ದರೆ ವೈದ್ಯರ ದರ್ಶನ ಅನಿವಾರ್ಯವಾಗುವುದು. ಪ್ರೀತಿ ಪಾತ್ರರೊಂದಿಗೆ ದೂರದ ಊರಿಗೆ ಪ್ರಯಾಣ ಬೆಳೆಸುವ ಯೋಗವಿದೆ.
  • ಕನ್ಯಾ
  • ನಿವೇಶನಗಳ ಖರೀದಿಯ ವ್ಯವಹಾರದಲ್ಲಿ ಮತ್ತೊಮ್ಮೆ ದಾಖಲೆಗಳ ಪರೀಕ್ಷೆ ಅನಿವಾರ್ಯ ಎನಿಸಲಿದೆ. ಕುಟುಂಬದ ವತಿಯಿಂದ ವಾರ್ಷಿಕವಾಗಿ ನಡೆಸಬೇಕಾದ ಸತ್ಕಾರ್ಯಗಳನ್ನು ಕುರಿತು ಸಮಾಲೋಚನೆ ನಡೆಸಿ.
  • ತುಲಾ
  • ಸಾಮಾಜಿಕ ಸೇವೆಯಲ್ಲಿ ಸಮಯ ವ್ಯರ್ಥವಾಗದಂತೆ ಜಾಗರೂಕತೆ ವಹಿಸಿ. ಸಾಧ್ಯವಾದಷ್ಟೂ ಉಳಿತಾಯ ಮಾಡುವ ಪ್ರಯತ್ನ ರೂಢಿಸಿಕೊಳ್ಳಿ. ಯೋಜನೆಗಳು ಪೂರ್ವವ್ಯವಸ್ಥಿತ ರೂಪದಲ್ಲಿ ಸಾಗಲಿವೆ.
  • ವೃಶ್ಚಿಕ
  • ಪರಿಸ್ಥಿತಿಗಳನ್ನು ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಬೋಧನೆಯಲ್ಲಿ ಗಣಿತಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಪರಿಣತೆಯನ್ನು ಹೊಂದಿರುವ ನಿಮಗೆ ಶಿಷ್ಯರ ಸಂಖ್ಯೆ ವೃದ್ಧಿಯಾಗಲಿದೆ.
  • ಧನು
  • ಮಕ್ಕಳ ವಿಷಯದಲ್ಲಿ ಅಸಡ್ಡೆ ತೋರಿಸಬಾರದು ಎಂಬುವುದು ಅರಿವಾಗಲಿದೆ. ಕುಟುಂಬದಲ್ಲಿ ಹಿಂದೆ ನಡೆದ ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದರಿಂದ ಸಹೋದರರಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ.
  • ಮಕರ
  • ಆಹಾರ ಪದಾರ್ಥದ ವ್ಯಾಪಾರಸ್ಥರಿಗೆ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ. ಸಂಘ ಸಮೂಹದ, ಸಜ್ಜನರ ಸಹವಾಸದಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ. ದುರ್ಗಾದೇವಿಯಲ್ಲಿ ಶರಣಾಗುವುದರಿಂದ ಶುಭ ಪ್ರಾಪ್ತಿ.
  • ಕುಂಭ
  • ಒಂಟಿತನ ಹೋಗಲಾಡಿಸಿಕೊಳ್ಳಲು ಮನಸ್ಸನ್ನು ಅಧಿಕ ಸಮಯ ಕೆಲಸಗಳತ್ತ ಹರಿಸುವಿರಿ. ಉದ್ಯೋಗದಲ್ಲಿ ಒತ್ತಡಗಳಿಗೆ ಸಿಲುಕಬೇಡಿ. ರಾಜಕೀಯ ಧುರೀಣರಿಗೆ ಈ ದಿನವು ಮೋಡ ಮುಸುಕಿದಂತಿರುವುದು.
  • ಮೀನ
  • ಚಿನ್ನಾಭರಣದ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಸಮಸ್ಯೆಗಳಿಗೆ ಸುಲಭವಾಗಿ ಉತ್ತರ ಸಿಗುವುದು. ಸರಕು ಸಾಗಾಣಿಕೆದಾರರಿಗೆ ಮತ್ತು ಬಂದರು ಕಾರ್ಮಿಕರಿಗೆ ಉತ್ತಮವಾದ ಪ್ರತಿಫಲ ದೊರೆಯಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.