ADVERTISEMENT

ದಿನ ಭವಿಷ್ಯ: ಅನುಕಂಪ ತೋರಿಸುವ ಸಂದರ್ಭದಲ್ಲಿ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಸೆಪ್ಟೆಂಬರ್ 2025, 18:30 IST
Last Updated 26 ಸೆಪ್ಟೆಂಬರ್ 2025, 18:30 IST
   
ಮೇಷ
  • ಗ್ರಹಗತಿಗಳು ಉತ್ತಮವಾಗಿದ್ದು ಅದೃಷ್ಟ ಹುಡುಕಿಕೊಂಡು ಬರಲಿದೆ. ಕಾಳಜಿ ಹೊಂದಿದವರ ಸಲಹೆಗಳಿಗೆ ಕಿವಿಗೊಡಿ. ಮಗನಿಂದ ಶುಭ ಸುದ್ದಿ ಬರಲಿದೆ. ಹಲ್ಲಿನ ಸಮಸ್ಯೆ ಇದ್ದಲ್ಲಿ ಬಗೆಹರಿಸಿಕೊಳ್ಳಲು ಸೂಕ್ತ ಸಮಯ.
  • ವೃಷಭ
  • ಮೇಧಾವಿ ಜನರೊಂದಿಗಿನ ಸಂಪರ್ಕ ಬೆಳೆಯುವುದರಿಂದ ಕೆಲಸ ಕಾರ್ಯಗಳನ್ನು ಸಾಧಿಸಿ ಕೊಳ್ಳುವುದಕ್ಕೆ ಸುಲಭವಾಗುವುದು. ಅನುಕಂಪ ತೋರಿಸುವ ಸಂದರ್ಭದಲ್ಲಿ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ.
  • ಮಿಥುನ
  • ನೂತನ ವಾಹನ ಖರೀದಿಯ ಯೋಚನೆಗೆ ಪೋಷಕರಿಂದ ಒಪ್ಪಿಗೆ ಸಿಗಲಿದೆ. ಸೋದರಿಯ ವಿಷಯದಲ್ಲಿ ಧಾರಾಳತನ ತೋರುವಿರಿ. ಇವೆಲ್ಲದರಲ್ಲೂ ಆರ್ಥಿಕ ಪರಿಸ್ಥಿತಿಯನ್ನು ನೆನಪಿನಲ್ಲಿಟುಕೊಂಡು ಮುಂದುವರೆಯಿರಿ.
  • ಕರ್ಕಾಟಕ
  • ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವುದು ಸಂತೋಷವಾಗುವುದು, ಆದರೆ ಅತಿಯಾಗಿ ಬೀಗದಿರುವುದು ಲೇಸು. ಋಣ ಪರಿಹಾರವಾಗಿ ಕುಟುಂಬದಲ್ಲಿ ನೆಮ್ಮದಿ ಉಂಟಾಗುತ್ತದೆ.
  • ಸಿಂಹ
  • ಅನಿರೀಕ್ಷಿತವಾಗಿ ದುರ್ಘಟನೆಗಳು ಎದುರಾಗಲಿವೆ. ಯೋಜನೆಗಳು ಪೂರ್ವನಿಯೋಜಿತವಾಗಿ ವ್ಯವಸ್ಥಿತ ರೂಪದಲ್ಲಿ ಸಾಗುವುದಕ್ಕೆ ಪರಿಸ್ಥಿತಿ ಅಡ್ಡಗಾಲು ಹಾಕಿದಂತೆ ಆಗಬಹುದು. ವೃತ್ತಿಯಲ್ಲಿ ಬದಲಾವಣೆ ಇರುವುದಿಲ್ಲ.
  • ಕನ್ಯಾ
  • ಇದ್ದ ಪ್ರತಿಭೆಯನ್ನು ಇತರರು ಗಮನಿಸುವರು. ಆಸ್ತಿ ಖರೀದಿ ಮಾಡುವ ನಿರ್ಧಾರವನ್ನು ಮಾಡುವಿರಿ. ನಿಮ್ಮ ಮೇಲಧಿಕಾರಿಗಳು ಬಯಸಿದ ರೀತಿಯಲ್ಲಿ ನಿಮ್ಮ ಪರಿಶ್ರಮ, ಜವಾಬ್ದಾರಿಯುತವಾದ ನಡುವಳಿಕೆಯಿಂದಾಗಿ ಮೆಚ್ಚುವರು.
  • ತುಲಾ
  • ಪ್ರಮುಖ ಕೆಲಸಗಳು ಅನಾಯಾಸವಾಗಿ ಪೂರ್ಣಗೊಳ್ಳುವವು. ಮನೆಯಲ್ಲಿ ಮೃದು ಭಾಷಿಗಳು ಎನಿಸಿಕೊಳ್ಳುವಿರಿ. ದೂರದ ಸಂಬಂಧಿಕರೊಬ್ಬರ ಆಗಮನದಿಂದ ಮನೆಯಲ್ಲಿ ಸಡಗರ ಸೃಷ್ಟಿಸಲಿದೆ.
  • ವೃಶ್ಚಿಕ
  • ತಪ್ಪುಗಳು ಸಂಭವಿಸದಂತೆ ಗಮನಹರಿಸಿ. ರಾಸಾಯನಿಕ ವಸ್ತುಗಳ ಮಾರಾಟದಿಂದ ಹೆಚ್ಚಿನ ಆದಾಯ ಸಿಗುತ್ತದೆ. ನಿಮ್ಮ ಸಮಯ ಇಂದು ಅಮೂಲ್ಯವಾಗಿದೆ. ಆರೋಗ್ಯ ಸುಧಾರಿಸಿ ಎಂದಿನಂತೆ ಕೆಲಸಕ್ಕೆ ತೆರಳುವಿರಿ.
  • ಧನು
  • ಸ್ನೇಹಿತರು ನಿಮ್ಮ ಯೋಜನೆಗಳನ್ನು ಬೆಂಬಲಿಸಲಿದ್ದಾರೆ. ಉತ್ತಮ ಆಡಳಿತಗಾರರೆಂಬ ಖ್ಯಾತಿಯಿಂದಾಗಿ ಉನ್ನತ ಪದವಿ ಪ್ರಾಪ್ತವಾಗಲಿದೆ. ಶೀತ ಬಾಧೆಯಿಂದ ಮುಕ್ತರಾಗಲು ಆಹಾರದಲ್ಲಿ ನಿಯಮವಿರಲಿ.
  • ಮಕರ
  • ಮಂದಗತಿಯಲ್ಲಿ ಸಾಗುತ್ತಿದ್ದ ಕೆಲವು ಕೆಲಸಗಳನ್ನು ಶೀಘ್ರ ಪೂರೈಸಲು ಸಿಬ್ಬಂದಿಗೆ ತಾಕೀತು ಮಾಡಬೇಕಾಗುವುದು. ಜಾಗರೂಕತೆಯಿಂದ ವ್ಯವಹರಿಸಿ. ಈಶ್ವರನ ಸ್ಮರಣೆಯು ಶುಭವನ್ನು ನೀಡುತ್ತದೆ.
  • ಕುಂಭ
  • ಪ್ರಚಲಿತ ವಿದ್ಯಮಾನಗಳ ಬಗೆಗೆಗಿನ ಚರ್ಚಾ ವಿಷಯಗಳಲ್ಲಿ ಪಾಲ್ಗೊಳ್ಳುವಿರಿ. ಕಾರ್ಯಗಳನ್ನು ಮುಗಿಸಿಕೊಳ್ಳಲು ಮನೆಯವರಿಗೆಲ್ಲ ಆತುರ ತೋರುವುದು ಸರಿಯಲ್ಲ. ದಿನಸಿ ವರ್ತಕರಿಗೆ ಲಾಭವೂ ಇರುವುದು.
  • ಮೀನ
  • ಬದಲಾಗುವ ಬದುಕಿನ ಗತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ವೃತ್ತಿರಂಗದಲ್ಲಿ ಕಾರ್ಯ ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು. ಮಾರಾಟ ಪ್ರತಿನಿಧಿಗಳಿಗೆ ಕಮಿಷನ್ ದೊರೆಯಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.