ADVERTISEMENT

ದಿನ ಭವಿಷ್ಯ: ದೇವತಾ ಕಾರ್ಯಗಳಿಂದ ನೆಮ್ಮದಿ ಸಿಗುತ್ತದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ಸೆಪ್ಟೆಂಬರ್ 2025, 18:30 IST
Last Updated 27 ಸೆಪ್ಟೆಂಬರ್ 2025, 18:30 IST
   
ಮೇಷ
  • ಸ್ವತ್ತು ವಿಚಾರದಲ್ಲಿ ಬಂಧುಗಳು ನೆರವಿಗೆ ಬರುವರು. ತಂದೆಯ ಮಾತಿನಂತೆ ನಡೆಯುವುದು ಉತ್ತಮ. ಉದ್ಯೋಗ ದೊರೆತು ಮನೆಯವರಿಗೆ ಸಮಾಧಾನವಾಗುವುದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದೆ.
  • ವೃಷಭ
  • ದೇವಾಲಯಕ್ಕೆ ಪ್ರಯಾಣ ಮಾಡಬೇಕಾಗುವುದು. ಕುಟುಂಬದಲ್ಲಿ ಎಲ್ಲರ ಆರೋಗ್ಯವೂ ಉತ್ತಮವಾಗಿರುವುದು. ಸಿವಿಲ್ ಎಂಜಿನಿಯರ್‌ಗಳಿಗೆ ಹೆಚ್ಚು ಲಾಭ. ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ತೃಪ್ತಿಯಿರಲಿದೆ.
  • ಮಿಥುನ
  • ಪೋಷಕರ ಮಾತಿನಂತೆ ದೇವತಾ ಕಾರ್ಯಗಳನ್ನು ನಡೆಸುವ ಕುರಿತು ಯೋಜನೆಯನ್ನು ಕೈಗೊಳ್ಳುವಿರಿ. ಮೂರನೇ ವ್ಯಕ್ತಿ ಅವ್ಯವಹಾರ ಮಾಡುವುದರ ಬಗ್ಗೆ ಗಮನಹರಿಸಿ ಪಾಲುದಾರರೊಂದಿಗೆ ಮಾತುಕತೆ ನಡೆಸಿ.
  • ಕರ್ಕಾಟಕ
  • ವಿವಾಹದ ವಿಷಯದಲ್ಲಿ ನಿಮ್ಮ ಆಸೆ-ಆಕಾಂಕ್ಷೆಯನ್ನು ಕುಟುಂಬದ ಗಮನಕ್ಕೆ ತರುವುದು ಉತ್ತಮ. ಕೃಷಿ ಸಂಬಂಧಿತ ಕಾರ್ಯಗಳು ಈ ದಿನ ಬಿಡುವಿಲ್ಲದೆ ನಡೆಯಲಿದೆ. ಹಣಕಾಸಿನ ಕೊರತೆ ಇರುವುದಿಲ್ಲ.
  • ಸಿಂಹ
  • ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚು ಪ್ರಯತ್ನ ಪಡಬೇಕಾಗುವುದು. ಮನೆಯಲ್ಲಿನ ಆಂತರಿಕ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಹಲ್ಲು ನೋವು ಸಂಭವಿಸಿ ವೈದ್ಯರನ್ನು ಸಂಪರ್ಕಿಸಬೇಕಾಗಲಿದೆ.
  • ಕನ್ಯಾ
  • ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕ ಅನುಕೂಲವಾಗಲಿದೆ. ಸಾಮಾಜಿಕ ಬದುಕಿನಲ್ಲಿ ಹುರುಪು ಕಾಣಲಿದ್ದೀರಿ. ಲೇವಾದೇವಿ ವ್ಯವಹಾರಗಳು ಉತ್ತಮವಾಗಿರುವುದು. ದೇವತಾಕಾರ್ಯಗಳಿಂದ ನೆಮ್ಮದಿ ಸಿಗುತ್ತದೆ.
  • ತುಲಾ
  • ಎಣ್ಣೆ ಮತ್ತು ಬೇಳೆ ಕಾಳು ವ್ಯಾಪಾರಿಗಳಿಗೆ ಮಾರಾಟ ಜೋರು. ಮಕ್ಕಳಿಗೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ವಹಿಸುವಂತೆ ತಿಳಿ ಹೇಳಬೇಕಾಗುವುದು. ಆಸ್ತಿ ಕೊಳ್ಳುವ ವಿಷಯದಲ್ಲಿ ಹೆಂಡತಿಯೊಂದಿಗೆ ಮಾತುಕತೆ ನಡೆಸಿ.
  • ವೃಶ್ಚಿಕ
  • ಸ್ನೇಹಪರ ಸ್ವಭಾವದಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು. ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ನೀವು ಸುಲಭವಾಗಿ ಸ್ಥಾನಗಳಿಸುವಿರಿ. ಪರಿಸ್ಥಿತಿ ಅವಲೋಕಿಸಿಕೊಂಡು ಮುಂದಿನ ಹೆಜ್ಜೆ ಇರಿಸಿ.
  • ಧನು
  • ನಿರೀಕ್ಷಿಸಿದ್ದ ಉದ್ಯೋಗ ಸಿಕ್ಕದಿದ್ದರೂ, ಸಣ್ಣ ಮಟ್ಟಿನ ಉದ್ಯೋಗ ಸಿಕ್ಕಿರು ವುದಕ್ಕೆ ಸಂತೋಷವಾಗಲಿದೆ. ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ. ಅಭಿವೃದ್ಧಿ ಸಾಧಿಸಬಲ್ಲಿರಿ. ತಾಳ್ಮೆಯು ಜೀವನದ ಮೂಲಮಂತ್ರವಾಗಿರಲಿ.
  • ಮಕರ
  • ಆಡಂಬರದ ಜೀವನ ಶೈಲಿಯವರಾದ ನೀವು ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯ ಮಾಡುವಿರಿ. ಬಟ್ಟೆ ಮಾರಾಟಗಾರರಿಗೆ ಲಾಭವಿರುವುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪರಿಶ್ರಮ ಅಗತ್ಯ.
  • ಕುಂಭ
  • ಸ್ನೇಹಿತರ ಹಾಗೂ ಬಂಧುಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳ ಆದಾಯದಲ್ಲಿ ಹೆಚ್ಚು ಏರಿಕೆ ಕಾಣಲಿರುವಿರಿ. ಕುಟುಂಬದಲ್ಲಿ ಸೋದರಿಗೆ ವಿವಾಹ ನಿಶ್ಚಯವಾಗುವುದು. ಸಿದ್ಧಿವಿನಾಯಕನ ಆರಾಧನೆಯಿಂದ ಶುಭ
  • ಮೀನ
  • ಬಂಧು ಮಿತ್ರರು ಮನೆಗೆ ಬರಲಿದ್ದಾರೆ. ನಿಮ್ಮ ಕ್ರಿಯೆಯನ್ನು ಸಮರ್ಥಿಸಿ ಕೊಳ್ಳಲು ಸಾಕಷ್ಟು ಕಾರಣ ಸಿಗಲಿವೆ. ಬೇರೆಯವರ ಬಗ್ಗೆ ಅನುಕಂಪ ತೋರುವ ನೀವು ನಿಮ್ಮ ಬಗ್ಗೆಯೂ ಗಮನ ಹರಿಸುವುದನ್ನು ಮರೆಯದಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.