ADVERTISEMENT

ದಿನ ಭವಿಷ್ಯ: 29 ನವೆಂಬರ್ 2025 ಶನಿವಾರ– ನವವಿವಾಹಿತೆಗೆ ಮುಖ್ಯ ವ್ಯಕ್ತಿಗಳ ಮರೆವು

ದಿನ ಭವಿಷ್ಯ: 29 ನವೆಂಬರ್ 2025 ಶನಿವಾರ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 28 ನವೆಂಬರ್ 2025, 18:31 IST
Last Updated 28 ನವೆಂಬರ್ 2025, 18:31 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಮಾರಂಭ ಮುಗಿದ ಬಳಿಕ ಉಳಿದ ಕೆಲಸಗಳು ಮಾಡಿದಷ್ಟೂ ಇದ್ದಂತೆ ಭಾಸವಾಗುತ್ತದೆ. ಭೂಸಂಬಂಧಿತ ವ್ಯವಹಾರಗಳಿಂದ ಲಾಭವಿದ್ದರೂ ದಾಖಲೆಗಳಿಂದ ಮೋಸ ಹೋಗದಿರಿ. ಹಲ್ಲುನೋವು ಕಂಡುಬರುವುದು.
  • ವೃಷಭ
  • ಮುಕ್ತವಾಗಿ ಮಾತನಾಡಲಾಗದ ಸ್ವಭಾವವು ಸಭೆಯಲ್ಲಿ ನಿಮ್ಮನ್ನೇ ಉದ್ದೇಶಿಸಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಂದರ್ಭವನ್ನು ತರುತ್ತದೆ. ಎಲ್ಲಾ ಕಾರ್ಯಗಳೂ ಅಂದುಕೊಂಡಂತಾಗದು.
  • ಮಿಥುನ
  • ಸೂಕ್ತ ರೂಪುರೇಷೆಯನ್ನು ಹಾಕಿಕೊಳ್ಳದೆ ಶುರು ಮಾಡಿದ ಕೆಲಸಗಳಲ್ಲಿ ಹಲವು ವಿಘ್ನಗಳಿವೆ. ಸಣ್ಣ ಮಕ್ಕಳೊಂದಿಗಿನ ಒಡನಾಟವು ಮನಸ್ಸನ್ನು ಮುದಗೊಳಿಸುತ್ತದೆ.
  • ಕರ್ಕಾಟಕ
  • ಮೇಲಧಿಕಾರಿಗಳು, ಹಿರಿಯರಿಂದ ಬಯಸಿದ ಉಪಕಾರವನ್ನು ಪಡೆಯಬಹುದು. ಹೊಸ ಕೆಲಸಗಳನ್ನು ಶುರುಮಾಡುವ ಮೊದಲೇ ಸಾಧ್ಯತೆ ಬಾಧ್ಯತೆಗಳ ಬಗ್ಗೆ ಯೋಚಿಸಿ. ಅಧಿಕ ಸುತ್ತಾಟದಿಂದ ಆಯಾಸ.
  • ಸಿಂಹ
  • ನಿಂತು ಹೋಗಿರುವ ಕೃಷಿಯಲ್ಲಿಯೇ ಹೆಚ್ಚು ಆದಾಯ ಎಂಬುದನ್ನು ಕಂಡುಕೊಳ್ಳುವಿರಿ. ಸಾಮ್ಯತೆಗಳನ್ನೇ ಹುಡುಕಿ ಗೆಳೆತನ ಮಾಡಿದರೂ ಗೆಳೆತನದಲ್ಲಿ ಭಿನ್ನಾಭಿಪ್ರಾಯಗಳೇ ಹೆಚ್ಚಾಗಿ ಕಾಣುವುದು.
  • ಕನ್ಯಾ
  • ವೃತ್ತಿ ವಿಷಯದಲ್ಲಿ ಏಳುಬೀಳುಗಳು ಸಹಜ ಎಂದು ನೀವು ಕಂಡು ಕೊಂಡದ್ದನ್ನು ಕಿರಿಯರಿಗೂ ತಿಳಿಸುವ ಕೆಲಸ ಮಾಡುವಿರಿ. ನವವಿವಾಹಿತೆಗೆ ಮುಖ್ಯ ವ್ಯಕ್ತಿಗಳ ಮರೆವು ಬಹಳವಾಗಿ ಕಾಡಿಸುತ್ತದೆ.
  • ತುಲಾ
  • ಸಣ್ಣ ಕೈಗಾರಿಕೋದ್ಯಮಿಗಳಿಗೆ ರಫ್ತು ಮಾರಾಟದಿಂದ ಹೇರಳ ಲಾಭ. ಪ್ರಾರಂಭಿಸಿದ ಕೆಲಸ ನಾಳೆಗೆ ಎನ್ನದೆ ವೃತ್ತಿಯಲ್ಲಿ ಪಾದರಸದಂತೆ ಇರಲು ಪ್ರಯತ್ನಿಸಿ. ಸ್ವಕಾರ್ಯ ಹಾಗೂ ಸ್ವಪ್ರತಿಭೆಯಿಂದ ಪ್ರಭಾವಿಗಳಾಗುವಿರಿ.
  • ವೃಶ್ಚಿಕ
  • ಅಪ್ರಿಯವಾದ ಸತ್ಯವನ್ನು ಸ್ವೀಕರಿಸಲು ಅಸಾಧ್ಯವಾಗುವಂಥ ಹಿರಿಯ ನಾಗರಿಕರ ಬಳಿ ಹೇಳದಿರುವುದು ಒಳ್ಳೆಯದೆಂದು ಯೋಚಿಸುವಿರಿ. ಚಿನ್ನ-ಬೆಳ್ಳಿ ವ್ಯಾಪಾರಿಗಳಿಗೆ ನಷ್ಟವಾಗುವ ಸಂಭವವಿದೆ.
  • ಧನು
  • ಸುಲಭವಾಗಿ ಕೆಲವೊಂದು ವಿಷಯಗಳನ್ನು ಎಲ್ಲರ ಬಳಿ ಹೇಳುವುದರಿಂದ ಕುಟುಂಬದವರಿಗೆ ತೊಂದರೆಯಾಗುತ್ತದೆ. ಸಣ್ಣ ವಿದ್ಯುತ್ ಉಪಕರಣಗಳ ಮಾರಾಟವು ಲಾಭದಾಯಕವಾಗಿರುತ್ತದೆ.
  • ಮಕರ
  • ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆಯ ಮಾತುಗಳು ಹಿರಿಯರಿಂದ ಕೇಳಬೇಕಾಗಬಹುದು. ಅದೇ ರೀತಿಯಾಗಿ ನಡೆದುಕೊಳ್ಳಿ. ಪರಿಶ್ರಮಕ್ಕೆ ಫಲ ಪ್ರಾಪ್ತಿ.
  • ಕುಂಭ
  • ಧಾರ್ಮಿಕ ಕೆಲಸಗಳಿಗಾಗಿ ಖರ್ಚುಗಳಿದ್ದರೂ ದೈವಬಲದಿಂದ ಎಲ್ಲಾ ವ್ಯವಹಾರಗಳಲ್ಲಿ ಉತ್ತಮ ಧನಾದಾಯವನ್ನು ಹೊಂದುವಿರಿ. ಹಣದ ವಿಚಾರವಾಗಿ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸುವಿರಿ.
  • ಮೀನ
  • ಈವರೆಗೆ ತುಂಬ ಮೃದುವಾಗಿ ಬದುಕನ್ನು ಸಾಗಿಸಿದವರಿಗೆ ಇನ್ನು ನೀವು ಕಳೆಯಬೇಕಾದ ಬದುಕು ಸ್ವಲ್ಪ ಕಷ್ಟಕರವೆಂದು ತೋರಬಹುದು. ಧರ್ಮಾಚರಣೆಯಲ್ಲಿ ಕುಂದುಕೊರತೆಗಳನ್ನು ಮಾಡುವುದು ಶ್ರೇಯಸ್ಕರವಲ್ಲ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.