ADVERTISEMENT

ದಿನ ಭವಿಷ್ಯ: ನಿಮ್ಮ ಎಣಿಕೆಯಂತೆ ಕಾರ್ಯಗಳು ಸಿದ್ಧಿಸಲಿವೆ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 30 ಮೇ 2025, 23:30 IST
Last Updated 30 ಮೇ 2025, 23:30 IST
   
ಮೇಷ
  • ಹೊಸದನ್ನು ಕಲಿಯುವುದಕ್ಕೆ ನೀವು ಬಹಳ ಉತ್ಸುಕರಾಗಿದ್ದೀರಿ. ಇತರರನ್ನು ಹೀಯಾಳಿಸುವ ಅಥವಾ ನಿಂದನೆ ಮಾಡುವ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಬಹುಕಾಲದ ಯೋಜನೆಗಳು ಯಶಸ್ವಿಯಾಗಲಿವೆ.
  • ವೃಷಭ
  • ಅಧಿಕಾರಿಗಳ ಜೊತೆ ವ್ಯವಹರಿಸುವಾಗ ಕೆಲವೊಂದು ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ತೋರುವುದರಿಂದ ನಿರಾಳವಾಗಿ ಮುಂದುವರೆಯಿರಿ. ಕುಲದೇವರ ದರ್ಶನದಿಂದ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವಿರಿ.
  • ಮಿಥುನ
  • ಅಸಾಧ್ಯ ಕಾರ್ಯಗಳನ್ನು ಸಹ ಸಾಧಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಆದರೆ ಇಂದು ಯಾವುದೇ ಹೊಸ ಉದ್ಯೋಗ ಅಥವಾ ಕರಾರಿಗೆ ಆತುರದಲ್ಲಿ ಸಹಿ ಹಾಕಬೇಡಿ. ಪೂರ್ವಸಿದ್ಧತೆಯಿಲ್ಲದೆ ಯಾವುದೇ ಕೆಲಸ ಮಾಡಬೇಡಿ.
  • ಕರ್ಕಾಟಕ
  • ಒಂದು ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳಬೇಡಿ. ಈ ದಿನ ಎದುರಾಗುವ ಕಹಿ ಘಟನೆಗಳಿಗೆ ಹೆಚ್ಚು ಪಾಶಸ್ತ್ಯ ಕೊಡುವ ಅವಶ್ಯಕತೆಯಿಲ್ಲ.
  • ಸಿಂಹ
  • ನೈತಿಕ ಶಕ್ತಿ ಹೆಚ್ಚುವುದರಿಂದ ಕೆಲಸದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುವಿರಿ. ಮಗನೊಡನೆ ವ್ಯಾವಹಾರಿಕ ಬಾಂಧವ್ಯ ಹೆಚ್ಚಿ, ವ್ಯವಹಾರದಲ್ಲಿ ಲಾಭವನ್ನು ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಎಣಿಕೆಯಂತೆ ಕಾರ್ಯಗಳು ಸಿದ್ಧಿಸಲಿವೆ.
  • ಕನ್ಯಾ
  • ಈ ದಿನ ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲ ಕಾರ್ಯಗಳಲ್ಲಿಯೂ ಯಶಸ್ಸು ಪಡೆಯುವಿರಿ. ಅಧಿಕಾರಿಗಳಿಗೆ ಸಹೋದ್ಯೋಗಿ ಗಳಿಂದ ಸಹಾಯ ದೊರೆಯುವುದು. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ.
  • ತುಲಾ
  • ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಬಹಳ ಉತ್ಸಾಹವನ್ನು ತೋರಿ ಅದರಲ್ಲಿ ಯಶಸ್ಸು ಪಡೆಯುವಿರಿ. ಧಾನ್ಯಗಳ‌ ರಪ್ತು ಮಾರಾಟಗಾರರಿಗೆ ಹೆಚ್ಚಿನ ಲಾಭವಿದೆ.
  • ವೃಶ್ಚಿಕ
  • ನಿರುದ್ಯೋಗಿಗಳಿಗೆ ನಿರೀಕ್ಷೆಗೂ ಮೀರಿದಂತಹ ಕೆಲಸ ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸಗಳಲ್ಲಿನ ಜವಾಬ್ದಾರಿಗಳು ಹೆಚ್ಚಿ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದೇಶದಲ್ಲಿನ ಹುದ್ದೆಗಾಗಿ ಅರ್ಜಿ ಸಲ್ಲಿಸಬಹುದು.
  • ಧನು
  • ಕುಟುಂಬದಲ್ಲಿ ಹಿರಿಯರ ಭಿನ್ನಾಭಿಪ್ರಾಯವನ್ನು ಮುರಿದು ಹೊಸ ತಲೆಮಾರಿನವರು ನೂತನವಾಗಿ ಸಂಬಂಧವನ್ನು ಬೆಳೆಸುವಂತಾಗಲಿದೆ. ಈ ದಿನ ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯು ಮೂಡಲಿದೆ.
  • ಮಕರ
  • ಉಪಹಾರ ಗೃಹಗಳ ಮಾಲೀಕರು ಅಧಿಕ ಲಾಭವನ್ನು ಪಡೆಯುವಿರಿ. ಹಿರಿಯರಿಂದ ಪಡೆದ ಸಲಹೆಯು ನಿಮ್ಮ ಜೀವನಕ್ಕೆ ಹೊಸ ಬುನಾದಿಯಾಗಲಿದೆ. ತೆಂಗಿನ ಕೃಷಿ ಮಾಡುವ ರೈತರಿಗೆ ಹೇರಳವಾಗಿ ಲಾಭವಾಗಲಿದೆ.
  • ಕುಂಭ
  • ರಾಜಕೀಯ ವ್ಯಕ್ತಿಗಳು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಜನ ಸಂಪಾದನೆಯಾಗಲಿದೆ. ನಿಮ್ಮ ನೂತನ ಕೆಲಸ ಕಾರ್ಯಗಳಿಗೆ ಅಪೇಕ್ಷಿಸಿದ ಬೆಂಬಲ ನಿಮಗೆ ದೊರೆಯಲಿದೆ.
  • ಮೀನ
  • ಮನೆಯಲ್ಲಿ ಆನಂದದ ವಾತಾವರಣ ಇರಲಿದೆ. ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ವಿಷಯದಲ್ಲಿ ಜಾಗ್ರತೆ ಇರಲಿ. ಮನೆಗೆ ಬಂಧುಗಳ, ಆತ್ಮೀಯರ ಆಗಮನವಿರುವುದು. ಬರಹಗಾರರಿಗೆ ಉತ್ತೇಜನದ ಕೊರತೆ ಕಾಣಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.