ADVERTISEMENT

ದಿನ ಭವಿಷ್ಯ | ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 2 ಜುಲೈ 2025, 22:20 IST
Last Updated 2 ಜುಲೈ 2025, 22:20 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನೀವು ಆಧ್ಯಾತ್ಮದತ್ತ ವಾಲಲಿದ್ದೀರಿ. ಅಲೌಕಿಕ ಶಕ್ತಿಗಳತ್ತ ಗಮನಹರಿಸುವಿರಿ. ಸಂಜೆ ಹೊತ್ತಿಗೆ ಹಳೆಯ ಸ್ನೇಹಿತರ ಸಂಪರ್ಕ ಸಾಧಿಸಲಿದ್ದೀರಿ. ಕೆಲಸ ಮಾಡುವ ಮುನ್ನ ವಾಸ್ತವಾಂಶಗಳನ್ನು ಅರಿತುಕೊಳ್ಳುವ ಪ್ರಯತ್ನ ಒಳ್ಳೆಯದು.
  • ವೃಷಭ
  • ವಾಣಿಜ್ಯ ರಂಗದಲ್ಲಿ ಹೊಸ ತಿರುವು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪರವಾನಗಿ ಕೇಳಿದವರಿಗೆ ಶುಭ ಸಂಕೇತ ಸಿಗುವುದು. ಅಧಿಕಾರಿ ವರ್ಗದವರಿಂದ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರಶಂಸೆ ಕೇಳುವಿರಿ.
  • ಮಿಥುನ
  • ಒಡನಾಟ ಹೊಂದಿರುವ ವ್ಯಕ್ತಿಗಳ ಹರಿತ ನುಡಿಗಳು ಮನಸ್ಸಿಗೆ ಬೇಸರವನ್ನು ಉಂಟುಮಾಡಬಹುದು. ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಹೊಸ ಯೋಜನೆಗಳು ಜಾರಿಯಾಗಲಿವೆ.
  • ಕರ್ಕಾಟಕ
  • ಒತ್ತಾಯಪೂರ್ವಕವಾಗಿ ಮಾಡುತ್ತಿರುವ ಕಾರ್ಯಗಳನ್ನು ಬಿಡಬೇಕು ಎನ್ನುವಂಥ ಮನೋಭಾವ ಬರುವ ಸಾಧ್ಯತೆಗಳಿವೆ. ರಾಜಕಾರಣಿಗಳೊಂದಿಗೆ ಬೆಳೆಸಿಕೊಂಡ ಒಡನಾಟವು ಅಪಾಯ ತಂದೊಡ್ಡಲಿದೆ.‌
  • ಸಿಂಹ
  • ತಂದೆ-ತಾಯಿಯ ಆರೋಗ್ಯದಲ್ಲಿ ಏರುಪೇರಾಗಲಿದೆ. ನೆರೆಹೊರೆಯವರ ಕಿರಿಕಿರಿ ತಪ್ಪದು. ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯಿರಿ. ಮಹಾಗಣಪತಿಯನ್ನು ಆರಾಧಿಸಿ.
  • ಕನ್ಯಾ
  • ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು. ಉದಯೋನ್ಮುಖ ತಾರೆಯರಿಗೆ ಮತ್ತು ಕಲಾವಿದರಿಗೆ ಅವಕಾಶ ಲಭಿಸಲಿದೆ. ಹಿಂದಿನ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ.
  • ತುಲಾ
  • ಆತ್ಮವಿಶ್ವಾಸದಿಂದಾಗಿ ಕೆಲಸಕಾರ್ಯಗಳಲ್ಲಿ ಅತಿ ಯಶಸ್ಸು ಹೊಂದುವಿರಿ. ಭವಿಷ್ಯದ ವಿಚಾರವಾಗಿ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ. ಕರ್ತವ್ಯದಲ್ಲಿ ಲೋಪವಾಗದಂತೆ ಗಮನವಹಿಸಿ.
  • ವೃಶ್ಚಿಕ
  • ಮನೆಯ ಜವಾಬ್ದಾರಿಯಲ್ಲದೇ ಉದ್ಯೋಗಕ್ಕೂ ಪತ್ನಿಯ ಸಹಕಾರ ಸಂಪೂರ್ಣ ಸಿಗಲಿದೆ. ರಿಯಲ್ ಎಸ್ಟೇಟುದಾರರಿಗೆ ಉತ್ತಮ ಅವಕಾಶ ಎದುರಾಗುವುದು, ದುರಾಸೆ ಪಡುವುದು ಸರಿಯಲ್ಲ.
  • ಧನು
  • ಬಟ್ಟೆ ವಿನ್ಯಾಸಗಾರರು ತಮ್ಮ ಉಡುಪುಗಳ ರಫ್ತು ಮಾರಾಟವನ್ನು ಹೆಚ್ಚಿಸಿಕೊಳ್ಳಬಹುದು. ಜವಳಿಯ ಮೇಲೇ ಬಂಡವಾಳ ಹಾಕಲು ಸಕಾಲ. ಆಸ್ತಿ ಮಾರಾಟ ಮಾಡಿ ಸಾಲ ಮುಕ್ತರಾಗುವ ಯೋಚನೆ ಸರಿಯಲ್ಲ.
  • ಮಕರ
  • ನಾಲ್ಕಾರು ಜನರ ಎದುರು ಅಗೌರವ ಎದುರಿಸುವ ಲಕ್ಷಣಗಳಿವೆ. ಕೆಲಸದ ಕ್ಷೇತ್ರದಲ್ಲಿ ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸಿ. ಆಸ್ತಿಯ ವಿಚಾರವಾಗಿ ಅಣ್ಣ-ತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಮೂಡಲಿದೆ.
  • ಕುಂಭ
  • ಸ್ವಂತ ಉದ್ಯೋಗಿಗಳಿಗೆ ಹಣಕಾಸಿನ ಸ್ಥಿತಿ ಉತ್ತಮಗೊಳ್ಳುವುದರಿಂದ ಆಸ್ತಿ ಖರೀದಿಯ ಸಾಧ್ಯತೆ ಇದೆ. ವಿದೇಶಕ್ಕೆ ಹೋಗುವ ಕನಸು ಕಟ್ಟಿಕೊಂಡವರಿಗೆ ಅವಕಾಶ ಎದುರಾಗುವುದು. ಜೀರ್ಣಕ್ರಿಯೆ ಸಮಸ್ಯೆ ಉಂಟಾಗಬಹುದು.
  • ಮೀನ
  • ಮೇಲಧಿಕಾರಿಗಳ ಜತೆಯಲ್ಲಿ ಮನಸ್ತಾಪ ಹೆಚ್ಚಾಗದಂತೆ ಜಾಗ್ರತೆ ವಹಿಸಿ. ಖಾಸಗಿ ಉದ್ಯೋಗದಲ್ಲಿರುವವರಿಗೆ ಒತ್ತಡ ಅಥವಾ ಅಭದ್ರತೆಯ ಅನುಭವ ಆಗುವುದು. ಯಾರದ್ದೋ ಮಾತು ಕೇಳಿ ಸ್ನೇಹ ಕಳೆದುಕೊಳ್ಳಬೇಡಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.