ADVERTISEMENT

ದಿನ ಭವಿಷ್ಯ | ಈ ರಾಶಿಯವರಿಗೆ ಆರೋಗ್ಯದಲ್ಲಿ ಗಮನವಿರಲಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 6 ಜುಲೈ 2025, 0:28 IST
Last Updated 6 ಜುಲೈ 2025, 0:28 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮಕ್ಕಳಿಗೆ ಜೀವನದ ಪಾಠ ಹೇಳುವಿರಿ. ಜೀವನೋಪಾಯಕ್ಕೆ ಹಲವಾರು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಆಂಜನೇಯನ ಸೇವೆ ಮಾಡುವುದರಿಂದ ಗೊಂದಲ ನಿವಾರಣೆಯಾಗುತ್ತದೆ.
  • ವೃಷಭ
  • ಎಲ್ಲವನ್ನು ಮಾಡಬಲ್ಲೆನೆಂಬ ಹುಮ್ಮಸ್ಸು ನಿಮ್ಮಲ್ಲಿದೆ. ಇದರಿಂದ ಸುಲಭವಾಗಿ ಕೆಲಸ ಪೂರೈಸುವಿರಿ. ತಂದೆಯ ಅಭಿಪ್ರಾಯಗಳಿಗೆ ಬೆಲೆ ಕೊಡಿ. ಏಜೆನ್ಸಿಯಂತಹ ಉದ್ಯೋಗ ತೆರೆಯಲು ಸ್ಥಳ ಹುಡುಕಾಟ ಆರಂಭಿಸುವಿರಿ.
  • ಮಿಥುನ
  • ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯವಾಗುತ್ತದೆ. ತಂಗಿಗಾಗಿ ಖರ್ಚು ಮಾಡಬೇಕಾದ ಸಂದರ್ಭ ಬರುವುದು. ಧರ್ಮ-ಕರ್ಮಗಳಲ್ಲಿ ಆಸಕ್ತಿ ಹೆಚ್ಚಲಿದೆ. ಕಬ್ಬಿಣ ಸಿಮೆಂಟ್ ವ್ಯಾಪಾರಿಗಳಿಗೆ ಸಾಧಾರಣ ಲಾಭ.
  • ಕರ್ಕಾಟಕ
  • ವೃತ್ತಿ ಜೀವನವನ್ನು ಗಂಭೀರವಾಗಿ ಪರಿಗಣಿಸುವಿರಿ. ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗುವುದು. ನಿಮಗೆ ಹೂಡಿಕೆಯಿಂದ ಅಧಿಕ ಲಾಭವು ಬಂದಿರುವ ಸುದ್ದಿಯನ್ನು ತಿಳಿದು ಅತೀವ ಸಂತೋಷಗೊಳ್ಳುವಿರಿ.
  • ಸಿಂಹ
  • ಮಗನ ಅಭಿವೃದ್ಧಿ ನೋಡಿ ಸಂತೋಷವಾಗುತ್ತದೆ. ಹಣದ ಅಡಚಣೆ ಇರುವುದಿಲ್ಲ. ಒಂಟಿತನ ಹೋಗಲಾಡಿಸಿಕೊಳ್ಳಲು ಕೆಲಸಗಳತ್ತ ಮನಸ್ಸು ಹರಿಸುವಿರಿ. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಧ್ಯಯನ ಅಗತ್ಯ.
  • ಕನ್ಯಾ
  • ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯ ಹೊಂದುವಿರಿ. ಸಂಸ್ಥೆಯೊಂದರಲ್ಲಿ ಕೆಲಸ ಕೊಡಿಸಿಕೊಡಲು ಅಣ್ಣನ ಸಹಾಯ ಕೇಳಿದರೆ ಶುಭವಾಗುತ್ತದೆ. ಮನೆ ದೇವರಿಗೆ ಹರಕೆ ಸಲ್ಲಿಸುವ ಬಗ್ಗೆ ಯೋಚಿಸಿ.
  • ತುಲಾ
  • ಮಗಳಿಂದ ಶುಭ ಸುದ್ದಿಯೊಂದನ್ನು ತಿಳಿಯುವಿರಿ. ನಿಮ್ಮ ಆಲಸ್ಯತನ ನಿಮ್ಮ ಕುಟುಂಬದ ಅಭಿವೃದ್ಧಿಯನ್ನು ಹಾಳು ಮಾಡುತ್ತದೆ. ಆದ್ದರಿಂದ ಉತ್ಸಾಹಭರಿತರಾಗಿರಿ. ನಿಮ್ಮ ರಾಜಕೀಯ ಭವಿಷ್ಯಕ್ಕೆ ಮೋಡಕವಿದಂತೆ ಆಗುತ್ತದೆ.
  • ವೃಶ್ಚಿಕ
  • ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಅವರೊಂದಿಗಿನ ಸಮಸ್ಯೆಗಳನ್ನು ಸಂಧಾನದಿಂದ ಬಗೆಹರಿಸಿಕೊಳ್ಳಿ. ಜಮೀನು ಮತ್ತು ಅದರ ಕೆಲಸಗಳನ್ನು ನೋಡಿಕೊಳ್ಳಲು ಆಳನ್ನು ಗೊತ್ತು ಮಾಡುವಿರಿ.
  • ಧನು
  • ಮಹಿಳೆಯರಿಗೆ ಋಣಾತ್ಮಕ ಚಿಂತನೆಯು ಆರೋಗ್ಯವನ್ನು ಹಾಳು ಮಾಡುತ್ತದೆ. ಮನೆಯಲ್ಲಿ ಶಾಂತಿ ಹೋಮ ನಡೆಸುವ ಕುರಿತು ಚರ್ಚೆ ನಡೆಯುತ್ತದೆ.ವೃತ್ತಿಯಲ್ಲಿ ಅನುಭವ ಹೊಂದಿದವರಿಂದ ಬೈಗುಳ ಕೇಳ ಬೇಕಾಗುವುದು.
  • ಮಕರ
  • ಸದಾ ತಾಳ್ಮೆಯಿಂದ ವ್ಯವಹರಿಸಿ. ವಿವಾದಗಳಿಂದ ದೂರ ಉಳಿಯಿರಿ. ವೈದ್ಯರು ನೀಡಿದ ಸಲಹೆಯನ್ನು ಚಾಚೂ ತಪ್ಪದೆ ಆಚರಿಸಿ. ಮೋಸ ಹೋಗುವ ಸಾಧ್ಯತೆಯಿದೆ ಜಾಗ್ರತೆವಹಿಸಿ. ಪಾಲಕರಾಗುವ ಸುದ್ದಿ ತಿಳಿದು ಅತೀವ ಸಂತಸ.
  • ಕುಂಭ
  • ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿರುವ ನಿಮಗೆ, ನಿಮ್ಮ ಹಲವಾರು ಕನಸುಗಳು ಈಡೇರುವ ಅವಕಾಶ ಅಪರಿಚಿತ ವ್ಯಕ್ತಿ ತೋರುವರು. ತೈಲ ಲೇಪನ ಮಾಡುವುದರಿಂದ ಕಾಲು ನೋವು ನಿವಾರಣೆಯಾಗುವುದು.
  • ಮೀನ
  • ವಿವಾಹದ ವಿಚಾರದಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ರಸಗೊಬ್ಬರ,ಕೀಟ ನಾಶಕಗಳನ್ನು ವ್ಯಾಪಾರಿಗಳಿಗೆ ಲಾಭದ ಜೊತೆ ಆಯಾಸವೂ ಕಾಡಲಿದೆ. ಆರೋಗ್ಯದಲ್ಲಿ ಗಮನವಿರಲಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.