ADVERTISEMENT

ದಿನ ಭವಿಷ್ಯ: ಕಾರಣವಿಲ್ಲದೆ ಮಾಡಿದ ಕೋಪವೂ ನಷ್ಟ ತರಲಿದೆ

ಶುಕ್ರವಾರ, 19 ಸೆಪ್ಟೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 18 ಸೆಪ್ಟೆಂಬರ್ 2025, 19:30 IST
Last Updated 18 ಸೆಪ್ಟೆಂಬರ್ 2025, 19:30 IST
   
ಮೇಷ
  • ಸ್ವಯಂ ಬುದ್ಧಿವಂತಿಕೆ ಇದ್ದರೂ ಅನುಭವ ಹೊಂದಿದವರ ಸಲಹೆ ಸಹಕಾರ ಪಡೆಯುವುದರಿಂದ ಲಾಭ ಹೆಚ್ಚುತ್ತದೆ. ಯಾವ ವ್ಯಕ್ತಿಯನ್ನೂ ತಿರಸ್ಕರಿ ಸಬೇಡಿ, ಮುಂದಿನ ದಿನಗಳಲ್ಲಿ ಅವರ ಸಹಾಯವೇ ಮುಖ್ಯವಾಗಬಹುದು.
  • ವೃಷಭ
  • ಕುಟುಂಬದವರ ಜೊತೆ ಸಂಭಾಷಿಸಲು ಸಮಯ ಮಾಡಿಕೊಳ್ಳಿ. ಸಾಮಾಜಿಕ ವಲಯದ ಅಭಿವೃದ್ಧಿಗೆ ರಾಜಕೀಯ ವ್ಯಕ್ತಿಯನ್ನು ಸಂಪರ್ಕಿಸಬೇಕಾ ಗುತ್ತದೆ. ತಂದೆ ಆರೋಗ್ಯ ಸುಧಾರಿಸಲು ಆಯುರ್ವೇದ ಔಷಧಿ ನೆರವಾಗಲಿದೆ.
  • ಮಿಥುನ
  • ಐಹಿಕ ಸುಖಗಳನ್ನು ಆದಷ್ಟು ಬಿಟ್ಟುಬಿಡುವ ಮನಸ್ಥಿತಿ ಹಿರಿಯ ನಾಗರಿಕರಲ್ಲಿ ಉಂಟಾಗುತ್ತದೆ. ಸಂಧಾನ ಅಥವ ಮಧ್ಯಸ್ಥಿಕೆ ವಹಿಸುವಂತಹ ಕೆಲಸ ಮಾಡುವಿರಿ. ಅಂಥ ವೇಳೆ ವಸ್ತು ನಿಷ್ಠವಾಗಿ ಮತ್ತು ಸತ್ಯದ ಪರವಾಗಿರಿ.
  • ಕರ್ಕಾಟಕ
  • ಪರೋಪಕಾರದ ಫಲ ಮತ್ತು ಆತ್ಮವಿಶ್ವಾಸ ನಿಮ್ಮನ್ನು ರಕ್ಷಿಸಲಿದೆ. ವಿವಾಹದಂತಹ ಶುಭಕಾರ್ಯಗಳ ನಿರೀಕ್ಷೆ ಮಾಡಬಹುದು. ವದಂತಿಗಳಿಗೆ ಕಿವಿಗೊಡದೆ ನಿಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುವುದು ಶುಭ.
  • ಸಿಂಹ
  • ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಅಥವಾ ವಿಶೇಷ ಗೌರವಗಳು ಲಭಿಸುವುದು. ನೆರೆ ಹೊರೆಯರಿಗೆ ನೀವು ಕೊಡುವಂತಹ ಅತಿಯಾದ ಸಲುಗೆಯು ದುರುಪಯೋಗಗೊಳ್ಳಬಹುದು.
  • ಕನ್ಯಾ
  • ಪ್ರಾಪಂಚಿಕ ಅನುಭವಕ್ಕಾಗಿ ಕಾನೂನಿನ ಬಗ್ಗೆ ಅಧ್ಯಯನ ಮಾಡುವ ಮನಸ್ಸಾಗುತ್ತದೆ. ಇಂದು ನೀವು ಅನುಭವಿಸಬೇಕಾದ ಅಪಾಯವು ಭಗವಂತ ಶ್ರೀ ಮಲ್ಲಿಕಾರ್ಜುನನ ಅನುಗ್ರಹದಿಂದ ಕೂದಲೆಳೆಯಲ್ಲಿ ತಪ್ಪಿಹೋಗುತ್ತದೆ.
  • ತುಲಾ
  • ಅಧಿಕಾರಿಗಳಿಂದ ಹೊಗಳಿಕೆ ಪಡೆಯಲು ಪರಿಸ್ಥಿತಿ ಅವಲೋಕಿಸಿ ಮುಂದಿನ ಹೆಜ್ಜೆ ಇಡಿ. ಇಂದಿನ ನಿಮ್ಮ ನಡೆಯಲ್ಲಿ ಮೂಲ ಉದ್ದೇಶ ಬಿಡದೇ ಇರುವುದು ಕಷ್ಟ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ನಿರ್ಲಕ್ಷಿಸಬೇಡಿ. ‌
  • ವೃಶ್ಚಿಕ
  • ಮನೆ ಸಮಸ್ಯೆ ತನ್ನಂತಾನೇ ಬಗೆಹರಿಯುವುದು ಎಂದುಕೊಂಡರೆ ಒಂದಕ್ಕೆ ಎರಡಾಗುತ್ತದೆ. ಅದರ ಬಗ್ಗೆ ಕಾರ್ಯ ಪ್ರವೃತ್ತರಾಗಿ ಪರಿಹರಿಸಿ. ಸರ್ಕಾರಿ ಗುತ್ತಿಗೆ ಪಡೆದು ಕೊಳ್ಳಲು ನಾನಾ ಉಪಾಯಗಳು ಬೇಕಾಗುತ್ತವೆ.
  • ಧನು
  • ಹೊಸ ಉದ್ಯೋಗ ಹುಡುಕುವ ನಿಮ್ಮ ಆಲೋಚನೆ ಇಂದು ಸರಿಯಲ್ಲ. ವೃತ್ತಿಗೆ ಸಂಬಂಧ ಪಟ್ಟ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಚರ್ಚೆ ನಡೆಸುವುದು ಉಚಿತವೆನಿಸಲಿದೆ. ಅಡಿಗೆ ಎಣ್ಣೆ ವ್ಯಾಪಾರಿಗಳಿಗೆ ಲಾಭ.
  • ಮಕರ
  • ಕ್ರೀಯಾಶೀಲ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳಿದೆ. ಜೀವನದ ಪ್ರಯಾಣದಲ್ಲಿ ವಿಘ್ನಗಳು ಬಂದರೂ ಧೈರ್ಯದಿಂದ ಮುನ್ನಡೆದರೆ ಯಶಸ್ಸು ಸಾಧಿಸುತ್ತೀರಿ. ಕಾರಣವಿಲ್ಲದೆ ಮಾಡಿದ ಕೋಪವೂ ನಷ್ಟ ತರಲಿದೆ.
  • ಕುಂಭ
  • ಅನಿರೀಕ್ಷಿತವಾಗಿ ನಡೆದ ಕೆಟ್ಟ ಘಟನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುವ, ಭಯ ಪಡುವ ಅಗತ್ಯವಿಲ್ಲ. ವೃತ್ತಿ ತರಬೇತಿ ಪಡೆದವರಿಗೆ ವಿಶೇಷವಾಗಿ ನರ್ಸಿಂಗ್ ಟ್ರೈನಿಂಗ್‌ ಮುಗಿಸಿದವರಿಗೆ ಉದ್ಯೋಗ ದೊರಕಿದ್ದಕ್ಕೆ ಸಂತೋಷವಾಗಲಿದೆ.
  • ಮೀನ
  • ನಿಶ್ಚಿತವಾದ ಗುರಿ ತಲುಪುವ ವಿಚಾರದಲ್ಲಿ ಅಡೆತಡೆ, ವಿಘ್ನ ಎದುರಾಗು ತ್ತದೆ. ಷೇರು ವ್ಯಾಪಾರ, ವ್ಯವಹಾರದಲ್ಲಿ ಲಾಭವಾಗಲಿದೆ. ಅನಿವಾರ್ಯವಾಗಿ ಕೂಡಿಟ್ಟ ಹಣ ವಿನಿಯೋಗ ಮಾಡಬೇಕಾದ ಸ್ಥಿತಿ ಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.