ADVERTISEMENT

ದಿನ ಭವಿಷ್ಯ: ಈ ರಾಶಿಯ ವ್ಯಾಪಾರಸ್ಥರಿಗೆ ಆದಾಯ ಹೆಚ್ಚು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಅಕ್ಟೋಬರ್ 2025, 23:30 IST
Last Updated 3 ಅಕ್ಟೋಬರ್ 2025, 23:30 IST
   
ಮೇಷ
  • ಗೃಹ ನಿರ್ಮಾಣ ಕಾರ್ಯಗಳ ಚಿಂತನೆ ಕಾರ್ಯಗತವಾಗಲಿದೆ. ಆದಾಯವು ಸಾಕಷ್ಟು ಕೂಡಿ ಬರಲಿದೆ. ಬಟ್ಟೆ ಉದ್ಯಮದವರಿಗೆ  ಲಾಭ. ಗೃಹದಲ್ಲಿ ಶುಭ, ಮಂಗಳ ಕಾರ್ಯಗಳ ಚಟುವಟಿಕೆಗಳು ತೋರಿ ಬರುವವು.
  • ವೃಷಭ
  • ಕೆಲಸ ಕಾರ್ಯಗಳಲ್ಲಿ ಉತ್ಸಾಹ ಹೊಂದುವಿರಿ.  ಒತ್ತಡಗಳಿಗೆ ಸಿಲುಕ ಬೇಡಿ. ಗುಣಾತ್ಮಕ ಕಾರ್ಯಗಳಿಗೆ ಹೆಚ್ಚಿನ ಮಹತ್ವ ನೀಡುವಿರಿ. ಸಹೋದ್ಯೋಗಿಗಳಲ್ಲಿ ಪ್ರೀತಿಯಿಂದ ವರ್ತಿಸುವುದರಿಂದ ಕೆಲಸ ಸರಾಗವಾಗಿ ಸಾಗಲಿದೆ.
  • ಮಿಥುನ
  • ಋಣಬಾಧೆ, ಖರ್ಚು-ವೆಚ್ಚ, ಕುಟುಂಬ ಸ್ಥಾನದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಎಲ್ಲಾದರಲ್ಲೂ ಹೆಚ್ಚಿನ ಜಾಗ್ರತೆ ವಹಿಸಿರಿ. ಸಹೋದರರ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿಕೊಳ್ಳುವ ಪ್ರಯತ್ನಮಾಡಿ.
  • ಕರ್ಕಾಟಕ
  • ವೃತ್ತಿರಂಗದಲ್ಲಿ ಅನವಶ್ಯಕವಾಗಿ ಇತರರ ಕೋಪಕ್ಕೆ ಗುರಿಯಾಗುವುದನ್ನು ಸ್ನೇಹಿತರು ತಪ್ಪಿಸುವರು. ಯಂತ್ರೋಪಕರಣಗಳ ಮಾರಾಟದಿಂದ ಲಾಭ. ಮಕ್ಕಳ ವಿದ್ಯಾಭ್ಯಾಸವು ಒಳ್ಳೆಯ ಹಂತವನ್ನು ತಲುಪಲಿದೆ.
  • ಸಿಂಹ
  • ಸಂಬಂಧದಲ್ಲಿ ನಂಬಿಕೆಯನ್ನು ಕಳೆದುಕೊಳ್ಳಬೇಡಿ. ಮನೆಯಲ್ಲಿ ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ. ಗೃಹ ತಾಪತ್ರಯಗಳಿಂದಲೂ ಮುಕ್ತರಾಗಿ ನಿಶ್ಚಿಂತತೆ ತೋರಿ ಬರುತ್ತದೆ.
  • ಕನ್ಯಾ
  • ಉತ್ತಮ ಗುಣಮಟ್ಟವನ್ನು ನೋಡಿಯೇ ತೆಗೆದುಕೊಂಡ ಜಮೀನು ಈಗ ಕೈ ಕೊಡುವ ಸಾಧ್ಯತೆ ಇದೆ. ಮಧ್ಯಮ ಮಟ್ಟದ ಜೀವನಕ್ಕೆ ಹಣಕಾಸಿನ ತೊಂದರೆ ಕಾಣುವುದಿಲ್ಲ. ನಿಮ್ಮ ತೀರ್ಮಾನಗಳು ಭಾಗಶಃ ಸರಿಯಾಗಿರುವುದು.
  • ತುಲಾ
  • ಕೆಲಸಗಳು ಬೇಡವೆಂದುಕೊಂಡರೂ ಹೆಗಲೇರುವ ಸಾಧ್ಯತೆ ಇದೆ. ಉತ್ಸವಾದಿಗಳಲ್ಲಿ ಭಾಗವಹಿಸುವ ಮೂಲಕ ಮನಸ್ಸಿಗೆ ಒಂದು ರೀತಿಯ ದಿವ್ಯ ಅನುಭೂತಿಯು ದೊರೆಯುತ್ತದೆ.
  • ವೃಶ್ಚಿಕ
  • ಸ್ನೇಹಿತರಲ್ಲಿ ಮನಸ್ತಾಪಗಳು ಸರಿಯಾಗದ ಹೊರತು ಅಭಿವೃದ್ಧಿಗೆ ತೊಡಕು ಉಂಟಾಗಬಹುದು. ಸಾಮಾಜಿಕ ಚಟುವಟಿಕೆಗಳು ಹೆಚ್ಚಲಿವೆ. ಪಾಲುದಾರರಲ್ಲಿ ಒಮ್ಮತ ಮೂಡಿಸುವಲ್ಲಿ ಯಶಸ್ವಿಯಾಗುವಿರಿ.
  • ಧನು
  • ವೃತ್ತಿರಂಗದಲ್ಲಿ ಅನಿವಾರ್ಯವಾಗಿ ಮೋಸ ಮಾಡಬೇಕಾದ ಸಂದರ್ಭಗಳು ಎದುರಾಗುವುದು. ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರು ಊರು ಮನೆಯವರ ವಿಶ್ವಾಸವನ್ನು ಉಳಿಸಿಕೊಳ್ಳುವುದು ಮುಖ್ಯ ಆಗುತ್ತದೆ.
  • ಮಕರ
  • ನಂಬಿಕೆ ಹಾಗೂ ದೃಢ ನಿರ್ಧಾರದಿಂದ ಮಾಡಿದ ಕೆಲಸಗಳು  ನಿರೀಕ್ಷೆಯನ್ನು ನಿಸ್ಸಂಶಯವಾಗಿ ತಲುಪುತ್ತವೆ. ಉಡುಪು ವಿನ್ಯಾಸಗಾರರು ಕಂಡುಕೊಂಡ ಹೊಸ ಮಾದರಿಯು ಜನರ ಮನಸ್ಸನ್ನು ಗೆಲ್ಲಲಿದೆ.
  • ಕುಂಭ
  • ಸಾಂಸಾರಿಕವಾಗಿ ತುಸು ನೆಮ್ಮದಿಯ ಚೇತರಿಕೆಯ ದಿನವನ್ನು ಕಾಣುತ್ತೀರಿ. ಕಾಡಿನಲ್ಲಿ ಕೆಲಸ ಮಾಡುವಾಗ ವಿಷಪೂರಿತ ಜಂತುಗಳ ಮೇಲೆ ನಿಗಾ ಇರಲಿ.  ಅಪೇಕ್ಷೆಯಂತೆ  ಉತ್ತಮ ಪಾಲುದಾರರು ಸಿಗಲಿದ್ದಾರೆ.
  • ಮೀನ
  • ಹಿರಿಯರ ಕೆಲವು ಮಾತುಗಳನ್ನು ಮನಸ್ಸಿಗೆ ಹಚ್ಚಿಕೊಂಡು ಯೋಚಿಸುವುದರಲ್ಲಿ ಪ್ರಯೋಜನವಿಲ್ಲ. ಗೃಹ ಪ್ರವೇಶವನ್ನು ಮುಂದುಹಾಕುವುದು ಅನಿವಾರ್ಯ. ನಡೆಯುವ ಸಣ್ಣ ವಿಷಯಗಳು ಜೀವನಕ್ಕೆ ಪಾಠಗಳಾಗುತ್ತವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.