ADVERTISEMENT

ದಿನ ಭವಿಷ್ಯ: ಈ ರಾಶಿಯವರು ವೃತ್ತಿಯಲ್ಲಿ ಅನಗತ್ಯ ವಿಷಯಗಳತ್ತ ಗಮನಹರಿಸದಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಜನವರಿ 2026, 23:03 IST
Last Updated 16 ಜನವರಿ 2026, 23:03 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸತತ ಪ್ರಯತ್ನದ ಫಲವಾಗಿ ಯಶಸ್ಸು ಹುಡುಕಿಕೊಂಡು ಬರುವುದರಿಂದ  ಸಂತಸ ಸಿಗಲಿದೆ. ಸ್ವ ಉದ್ಯೋಗಿಗಳು ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಇದು ಸಕಾಲ.
  • ವೃಷಭ
  • ಉತ್ಸಾಹದಿಂದ ಕೆಲಸ ಆರಂಭಿಸಿದಲ್ಲಿ ಸಮಸ್ಯೆಗಳು ತಾನಾಗಿಯೇ ಪರಿಹಾರಗೊಳ್ಳಲಿವೆ. ಅಭಿರುಚಿಗೆ ತಕ್ಕ ವ್ಯಕ್ತಿಗಳೊಂದಿಗೆ ವ್ಯವಹರಿಸುವುದರಿಂದ  ಭಿನ್ನಾಭಿಪ್ರಾಯಗಳಿಗೆ ಅವಕಾಶವಿರುವುದಿಲ್ಲ.
  • ಮಿಥುನ
  • ಚರ್ಮದ ವ್ಯಾಪಾರಿಗಳಿಗೆ ಲಾಭದಾಯಕ ದಿನ. ಮಕ್ಕಳ ಆರೋಗ್ಯದ ವಿಚಾರದಲ್ಲಿ ವೈದ್ಯರನ್ನು ಭೇಟಿ ಮಾಡಬೇಕಾದ ಸ್ಥಿತಿಯು ಎದುರಾಗಬಹುದು. ರೈತರ ಫಸಲಿಗೆ ಉತ್ತಮ ಬೆಲೆ ನಿರೀಕ್ಷಿಸಬಹುದು.
  • ಕರ್ಕಾಟಕ
  • ಹೂಡಿಕೆ ವಿಚಾರದಲ್ಲಿ ದೀರ್ಘಾಲೋಚನೆ ಮಾಡಿ. ವೃತ್ತಿಯಲ್ಲಿ ಆಪಾದನೆಗಳು ಎದುರಾಗಿ ಮಾನಸಿಕವಾಗಿ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ಅನಗತ್ಯ ವಿಷಯಗಳತ್ತ ಗಮನಹರಿಸದಿರಿ.
  • ಸಿಂಹ
  • ಸ್ನೇಹಿತರ ಜೊತೆ ಹಣಕಾಸಿನ ವಿಚಾರದಲ್ಲಿ ದಾಕ್ಷಿಣ್ಯ ಪ್ರವೃತ್ತಿಗೆ ಒಳಗಾಗದಂತೆ ನಿಸ್ಸಂಕೋಚವಾಗಿ ಇರಬೇಕಾಗುತ್ತದೆ. ತಪ್ಪುಗಳು ನಡೆಯದಂತೆ ಜಾಗರೂಕತೆ ವಹಿಸಬೇಕಾಗುತ್ತದೆ.
  • ಕನ್ಯಾ
  • ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ನ್ಯಾಯ ಸಮ್ಮತವಾಗಿ ಬಗೆಹರಿಸಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಕಳೆದ ವಾರದ  ಎಲ್ಲ ಕೆಲಸಗಳು ಸಂಪೂರ್ಣಗೊಂಡು ವಿಫುಲ ಆದಾಯ ಪಡೆದುಕೊಳ್ಳುವಿರಿ.
  • ತುಲಾ
  • ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ. ಸ್ವಾದ್ವಿಷ್ಟ ಭೋಜನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ತರಬಹುದು.  ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು.
  • ವೃಶ್ಚಿಕ
  • ಜೀವನದ ಕಷ್ಟ ಸುಖಗಳು ತಿರುಗುವ ಚಕ್ರದಂತಿರುವುದರಿಂದ  ಒಳ್ಳೆಯ ದಿನಗಳು ಜೀವನದಲ್ಲಿದೆ ಎಂಬ ಆಶಾ ಭಾವನೆಯನ್ನು ಮರೆಯದಿರಿ. ಮಹಾವಿಷ್ಣುವಿನ ಸೇವೆಯಿಂದ ದೈವಾನುಕೂಲ ಒದಗಿ ಬರುವುದು.
  • ಧನು
  • ಆರ್ಥಿಕ ಸ್ಥಿತಿಯಲ್ಲಿ ಯಾವುದೇ ತಾಪತ್ರಯಗಳಿಲ್ಲದೆ ವ್ಯಾಪಾರ ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ಮಸಾಲೆ ಪದಾರ್ಥ ಅಥವಾ ಖಾದ್ಯ ವಸ್ತುಗಳ ಮಾರಾಟದ ಉದ್ಯೋಗದವರು ನೆಮ್ಮದಿ ಕಾಣಬಹುದು.
  • ಮಕರ
  • ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ. ಧಾರ್ಮಿಕ ವ್ಯಕ್ತಿಯ ಸ್ನೇಹ ಸಂಬಂಧ ಅಥವಾ ಧಾರ್ಮಿಕ ಉಪನ್ಯಾಸಗಳಿಂದ  ಜೀವನ ಶೈಲಿ ಬದಲಾಗಲಿದೆ. ಮನೆಯವರ ಆರೋಗ್ಯ ಸುಧಾರಣೆಯಾಗುತ್ತದೆ.
  • ಕುಂಭ
  • ಕಾರ್ಮಿಕ ವರ್ಗದವರಲ್ಲಿ ಜನ ಸಂಪತ್ತಿನ ಕೊರತೆಯ ಕಾರಣದಿಂದ ಅಧಿಕ ಶ್ರಮ ಉಂಟಾಗುವುದು . ಮನರಂಜನೆಯ ಕಾರ್ಯಕ್ರಮದಲ್ಲಿ ಸಮಯ ಕಳೆಯುವಿರಿ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ಸಂತಸ ಮೂಡಲಿದೆ.
  • ಮೀನ
  • ನಿಧಾನ ಗತಿಯಲ್ಲಿ ನಡೆಯುತ್ತಿದ್ದ ಕಾರ್ಯಗಳು ಪ್ರಗತಿಯನ್ನು ಹೊಂದುತ್ತವೆ. ಹಿಂದಿನಿಂದಲೂ ಪ್ರಭಾವಿತ ವ್ಯಕ್ತಿಗಳ ಜೊತೆ ಇರುವ ಪರಿಚಯ ನಿಮಗೆ ಈ ಸಮಯದಲ್ಲಿ ಸಹಾಯ ಮಾಡುತ್ತದೆ.