ADVERTISEMENT

ದಿನ ಭವಿಷ್ಯ: ನಿಮ್ಮ ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಫೆಬ್ರುವರಿ 2026, 0:20 IST
Last Updated 1 ಫೆಬ್ರುವರಿ 2026, 0:20 IST
   
ಮೇಷ
  • ನೀವು ಖರೀದಿಸಿದ ನಿವೇಶನ ಈಗ ಮಾರುವುದಾದರೆ ಉತ್ತಮ ಬೆಲೆಗೆ ಮಾರಾಟ ಆಗುವುದು. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ. ಗುರಿ ಸಾಧಿಸಲು ಕೆಲ ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿದೆ.
  • ವೃಷಭ
  • ಉದ್ಯೋಗದಲ್ಲಿ ನಿಮ್ಮೊಂದಿಗೆ ಸೆಣಸಾಡಲು ಬಂದವರನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಿ . ನಿಮ್ಮ ಕೆಲಸಗಳಲ್ಲಿ ಯಾವುದೇ ವಿಘ್ನಗಳು ಎದುರಾದರೂ ಅದು ಕ್ಷಣ ಮಾತ್ರದ್ದಾಗಿರುತ್ತದೆ.
  • ಮಿಥುನ
  • ಮೈಬಣ್ಣದ ಕಾರಣಕ್ಕೆ ಸಂಬಂಧದಲ್ಲಾಗಲಿ, ವ್ಯವಹಾರದಲ್ಲಾಗಲಿ ಯಾರನ್ನೂ ಕಡೆಗಣಿಸಬೇಡಿ. ಆರೋಗ್ಯಕ್ಕಿಂತ ಹಣ ಮುಖ್ಯ ಎನ್ನುವ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಾಗುವುದು.
  • ಕರ್ಕಾಟಕ
  • ನೀವು ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪದೇ ಇರುವುದರಿಂದ ಹಿಡಿದಂತಹ ಕಾರ್ಯಗಳಲ್ಲಿ ಜಯ ಸಾಧಿಸುವಿರಿ. ನಿಮ್ಮ ವೃತ್ತಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ.
  • ಸಿಂಹ
  • ವಿದ್ಯಾರ್ಥಿಗಳು ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವಿರಿ. ಬಂದಂತಹ ಫಲಿತಾಂಶವು ನಿರೀಕ್ಷೆಗಿಂತ ಹೆಚ್ಚಿನ ಸಂತೋಷವನ್ನು ನೀಡುವುದು.
  • ಕನ್ಯಾ
  • ಮನೆಯಲ್ಲಿನ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದ ನೀವು ಪ್ರತಿಯೊಂದು ರೂಪಾಯಿಯನ್ನು ಖರ್ಚು ಮಾಡುವಾಗ ಅನೇಕ ಬಾರಿ ಯೋಚಿಸುವಿರಿ. ಲೇಖಕರಿಗೆ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ.
  • ತುಲಾ
  • ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಸಹೋದರನಲ್ಲಿ ಹೇಳಿಕೊಂಡಾಗ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸಹಾಯ ದೊರೆಯಲಿದೆ. ಮಾತಿಗಿಂತ ಕೃತಿ ಮುಖ್ಯ ಎನ್ನುವ ರೀತಿಯಲ್ಲಿ ನಿಮ್ಮ ಸಾಮರ್ಥ್ಯ ತೋರಿಬರಲಿದೆ.
  • ವೃಶ್ಚಿಕ
  • ನಿಮ್ಮ ಕೆಲಸಗಳಿಗೆ ಹೆಚ್ಚಿನ ಸಾಮಾಜಿಕ ಸಹಕಾರ ಸಿಗುವುದು. ಉತ್ಪಾದನಾ ಕೆಲಸಗಳು ಚುರುಕುಗತಿಯಿಂದ ಸಾಗುವುದು ಲಾಭವನ್ನು ತರಲಿದೆ. ಮದುವೆಯ ನಿಮಿತ್ತವಾಗಿ ಒಡವೆಗಳ ಖರೀದಿ ಮಾಡುವಿರಿ.
  • ಧನು
  • ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಏಕೆಂದರೆ ನಿಮ್ಮ ಮೇಲಿರುವ ವಿಶ್ವಾಸದಿಂದಾಗಿ ಹಲವಾರು ಅವಕಾಶಗಳು ನಿಮ್ಮದಾಗಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿಯ ಕರೆಯೋಲೆ ಬರಬಹುದು.
  • ಮಕರ
  • ರಾಸಾಯನಿಕ ವಸ್ತುಗಳ ರಫ್ತು ವ್ಯಾಪಾರವನ್ನು ಮಾಡುವವರಿಗೆ ರಫ್ತು ಕಾರ್ಯದಲ್ಲಿ ಕೆಲವು ತಾಪತ್ರಯಗಳು ಕಾಣಿಸಿಕೊಳ್ಳಲಿವೆ. ಅನಾವಶ್ಯಕವಾಗಿ ಯಾರನ್ನೂ ಟೀಕಿಸುವುದು ಸರಿಯಲ್ಲ.
  • ಕುಂಭ
  • ಅಚ್ಚುಕಟ್ಟಾದ ಕೆಲಸಗಳಿಂದ ಮೇಲಾಧಿಕಾರಿಗಳಿಗೆ ನಿಮ್ಮ ಮೇಲಿನ ವಿಶ್ವಾಸ ಹೆಚ್ಚಲಿದೆ. ಬುದ್ಧಿಶಕ್ತಿಯನ್ನು ಒಳ್ಳೆಯ ಕೆಲಸಗಳಿಗಾಗಿ ಉಪಯೋಗಿಸಿ ಕೊಂಡಲ್ಲಿ ಯಶಸ್ಸು ಪಡೆಯುವಿರಿ.
  • ಮೀನ
  • ಹಣಕಾಸು ಸಂಸ್ಥೆಗಳನ್ನು ನಡೆಸುವವರಿಗೆ ನಷ್ಟ ಸಂಭವಿಸಲಿದೆ. ಆಫೀಸಿನ ಕಾರ್ಯದಲ್ಲಿ ಎಲ್ಲರ ಮಾತನ್ನು ತಾಳ್ಮೆಯಿಂದ ಕೇಳಿ. ಮಗನ ಪ್ರಬುದ್ಧತೆಯಿಂದ ನಿಮ್ಮ ಹೆಗಲ ಭಾರ ಕಡಿಮೆಯಾಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.