ADVERTISEMENT

ದಿನ ಭವಿಷ್ಯ: ಈ ರಾಶಿಯವರ ಆಫೀಸಿನ ತೊಂದರೆಗಳು ತನ್ನಿಂತಾನೆ ಬಗೆಹರಿಯಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಏಪ್ರಿಲ್ 2024, 22:33 IST
Last Updated 1 ಏಪ್ರಿಲ್ 2024, 22:33 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಶತ್ರುಗಳು ವಂಚನೆ ಮಾಡುವ ಸಲುವಾಗಿ ಮಿತ್ರರಾಗುವಂತೆ ನಟನೆ ಮಾಡಿಯಾರು. ಸ್ವಪ್ನದಲ್ಲಿ ಕೂಡಾ ಅಂಥವರ ಬಗ್ಗೆ ಜಾಗ್ರತರಾಗಿರಿ. ನೂತನ ಅಧಿಕಾರಿಗಳ ಆಗಮನದಿಂದ ಕಚೇರಿಯಲ್ಲಿ ಕೆಲಸಗಳು ತೋರಿಬರಲಿದೆ.
  • ವೃಷಭ
  • ಎಲೆಕ್ಟ್ರಾನಿಕ್ಸ್‌ ಉಪಕರಣ ವ್ಯಾಪಾರಿಗಳಿಗೆ ಒಳ್ಳೆಯ ಲಾಭ ಪ್ರಾಪ್ತಿಯಾಗುತ್ತದೆ. ಲೆಕ್ಕಪತ್ರಗಳನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳುವ ಕಾರ್ಯದ ಬಗ್ಗೆ ಯೋಚನೆ ಮಾಡಿ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು.
  • ಮಿಥುನ
  • ಸಾಂಸಾರಿಕವಾಗಿ ಹಾಗೂ ಸಾಮಾಜಿಕವಾಗಿ ವರ್ತನೆಯಲ್ಲಿ ಸಮತೋಲನವನ್ನು ಹಾಗೂ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಉತ್ತಮ. ಕೆಲಸಗಳ ಬಗ್ಗೆ ನಿಗಾ ಕೊಡುವಂತೆ ಅಧಿಕಾರಿಗಳಿಂದ ಆದೇಶವಾಗುವುದು.
  • ಕರ್ಕಾಟಕ
  • ಮಕ್ಕಳ ಹೊಸ ವ್ಯವಹಾರದಲ್ಲಿ ತಂದೆ-ತಾಯಿಯ ಆಶೀರ್ವಾದ ಮತ್ತು ಸಹಕಾರ ದೊರೆಯಲಿದೆ. ಆಲೋಚನೆಯಂತೆಯೇ ನೂತನ ಮನೆ ಕೊಳ್ಳಲು ಹಣದ ವ್ಯವಸ್ಥೆಯಾಗಲಿದೆ.
  • ಸಿಂಹ
  • ಉತ್ತಮ ಗುಣಗಳು ಪರಿಸ್ಥಿತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಹಾಯ ಮಾಡುವುದು. ಸಮಾಜದಲ್ಲಿ ಗೌರವ ಕಾಪಾಡಿಕೊಳ್ಳುವ ಬಗ್ಗೆ ಗಮನಹರಿಸಿ. ಹಣಕಾಸಿನ ಹೊಸ ಮೂಲವೊಂದು ಸೃಷ್ಟಿಯಾಗುವುದು
  • ಕನ್ಯಾ
  • ನೂತನ ಕಾರ್ಯವನ್ನು ಆರಂಭಿಸಲು ಸಮಯಾವಕಾಶ ಒದಗಿ ಬರುವುದು. ಕಬ್ಬಿಣ, ಸಿಮೆಂಟ್ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವು ದೊರೆಯುತ್ತದೆ.
  • ತುಲಾ
  • ಸಾಲದ ಹಣ ಮರುಪಾವತಿ ಮಾಡುವುದರಿಂದ ಆತ್ಮಾಭಿಮಾನವನ್ನು ಕಾಪಾಡಿಕೊಳ್ಳಬಹುದು. ಕೆಲಸವನ್ನು ಆಲಸ್ಯದಿಂದಾಗಲಿ ಅಥವಾ ತಾಂತ್ರಿಕ ದೋಷದಿಂದಾಗಲಿ ಮುಂದೂಡುವುದು ಸರಿಯಲ್ಲ.
  • ವೃಶ್ಚಿಕ
  • ನಿಂತಿರುವ ಕಾರ್ಯಗಳನ್ನು ಬೇರೆ ಬೇರೆ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡು ಕೆಲಸವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ನಡೆಸಿ. ಕಳೆದು ಹೋಗಿದ್ದ ವಸ್ತುಗಳು ಪತ್ತೆಯಾಗಿ ಕೈ ಸೇರುವುದು.
  • ಧನು
  • ಮನೋಬಲದಿಂದಾಗಿ ನಡೆಯಬೇಕಾದ ಕೆಲಸ ಕಾರ್ಯಗಳು ಚುರುಕಾಗಿ ನಡೆಯುವುದು. ಹೈನುಗಾರಿಕೆಯಲ್ಲಿ ಆದಾಯ ಹೆಚ್ಚಿಸಿಕೊಳ್ಳುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ದೊರೆಯುವುದು.
  • ಮಕರ
  • ಬೌದ್ಧಿಕ ಚಟುವಟಿಕೆಗಳ ಬೆಳವಣಿಗೆಗೆ ಬೇಕಾದ ಪ್ರತಿಭಾನ್ವಿತರ ಸಮಾಗಮ ಆಗಲಿದೆ. ಉಪಯೋಗಿಸಿಕೊಳ್ಳುವುದು ಸ್ವಂತಿಕೆಯ ವಿಚಾರವಾಗಿರುತ್ತದೆ. ಕೃಷಿಕರಿಗೆ ಕೆಲಸದಲ್ಲಿ ಬಿಡುವಿಲ್ಲದಂತೆ ಆಗುವುದು.
  • ಕುಂಭ
  • ನಿರಾಳವಾಗಲಿದೆ. ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ಪ್ರಾಪ್ತಿಯಾಗುತ್ತದೆ. ತಂಗಿಗಾಗಿ ಖರ್ಚು ಮಾಡಬೇಕಾದ ಸಂದರ್ಭ ಬರುವುದು.
  • ಮೀನ
  • ಉದ್ಯೋಗಕ್ಕೆ ಸಂಬಂಧಿಸಿದ ಸಂಶೋಧನಾತ್ಮಕ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕಾನುಕೂಲದ ಜೊತೆಗೆ ಸಾಮಾಜಿಕವಾಗಿ ತೂಕದ ವ್ಯಕ್ತಿಯಾಗುವಿರಿ. ಕಬ್ಬಿಣದ ಕೆಲಸ ಮಾಡುವವರು ಕೆಲಸದಲ್ಲಿ ಜಾಗ್ರತರಾಗಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.