ADVERTISEMENT

ದಿನ ಭವಿಷ್ಯ: ಹೊಸ ವ್ಯಕ್ತಿಗಳ ಪರಿಚಯದಿಂದ ಹಣಕಾಸಿನಲ್ಲಿ ಮೋಸ ಹೋಗುವ ಸಂಭವವಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 3 ಮೇ 2025, 1:06 IST
Last Updated 3 ಮೇ 2025, 1:06 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಲ್ಲಿ ಸಂಪರ್ಕದಲ್ಲಿರುವುದು ಆನಂದ ನೀಡಲಿದೆ. ಭೂಮಿ ಬಿಟ್ಟು ಎತ್ತರದಲ್ಲಿ ಕೆಲಸ ಮಾಡುವವರು ಜಾಗ್ರತೆಯಿಂದಿರಿ. ರೇಷ್ಮೆ ವ್ಯಾಪಾರಿಗಳಿಗೆ ಆದಾಯ ಇರುವುದು.
  • ವೃಷಭ
  • ಅಧ್ಯಾಪನ ವೃಂದಕ್ಕೆ ಕೆಲಸದ ಒತ್ತಡ ಕಡಿಮೆಯಾಗಲಿದೆ. ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ತಾಳ್ಮೆಯು ಜೀವನದ ಮೂಲಮಂತ್ರವಾಗಿರಲಿ. ಸಂಗಾತಿಯ ಆಯ್ಕೆ ವಿಚಾರದಲ್ಲಿ ಗಮನ ಕೊಡಿ.
  • ಮಿಥುನ
  • ಖರ್ಚು ವೆಚ್ಚಗಳನ್ನು ಸಮತೋಲನದಲ್ಲಿ ಇರಿಸಿಕೊಳ್ಳುವಿರಿ. ಮಿತ ಮತ್ತು ಶುಚಿಯ ಆಹಾರ ಸೇವನೆಯಿಂದ ಆರೋಗ್ಯ ಉತ್ತಮ. ಸಂಸಾರದಲ್ಲಿ ನೆಮ್ಮದಿ ವೃದ್ಧಿ . ಶ್ರೀಸುಬ್ರಹ್ಮಣ್ಯನನ್ನು ಪೂಜಿಸಿ.
  • ಕರ್ಕಾಟಕ
  • ವಿಶ್ವಾಸವನ್ನು ಉಳಿಸಿಕೊಳ್ಳಲು ಕಷ್ಟವಾಗಬಹುದು. ಮಕ್ಕಳನ್ನು ಶಿಕ್ಷಿಸುವ ಬದಲಾಗಿ ನಯವಾಗಿ ತಿಳಿಹೇಳಿ. ಕೃಷಿಗೆ ಸಂಬಂಧಿಸಿದ ಆರ್ಥಿಕತೆಯಲ್ಲಿ ಪಡೆದ ಸಾಲವನ್ನು ಹಿಂದಿರುಗಿಸುವ ಶಕ್ತಿ ದೊರಕಲಿದೆ.
  • ಸಿಂಹ
  • ಲಾಭ ತರುವಂಥ ಮತ್ತು ಅನಿವಾರ್ಯದ ಕೆಲಸಗಳಿಗೆ ಮಾತ್ರ ಗಮನ ಕೊಡಿ. ಅವಿವಾಹಿತ ಯೋಗ್ಯ ವಯಸ್ಕರಿಗೆ ಹೊಸ ಸಂಬಂಧಗಳು ಹುಡುಕಿಕೊಂಡು ಬರುವ ಸಾಧ್ಯತೆಗಳಿವೆ.
  • ಕನ್ಯಾ
  • ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸುವ ಬಗ್ಗೆ ಹೆಚ್ಚಿನ ಗಮನವಿರಲಿ. ಹೊಸ ವ್ಯಕ್ತಿಗಳ ಪರಿಚಯದಿಂದ ಹಣಕಾಸಿನಲ್ಲಿ ಮೋಸ ಹೋಗುವ ಸಂಭವವಿದೆ.
  • ತುಲಾ
  • ಕೆಲಸ ಆರಂಭಿಸುವ ಮುನ್ನ ಆಮೂಲಾಗ್ರ ಚಿಂತನೆ ಅಗತ್ಯ. ಚಿತ್ರನಟ ನಟಿಯರು ಮತ್ತು ಸಂಗೀತಗಾರರಿಗೆ ಉತ್ತಮ ದಿನ. ಗಣಿಗಾರಿಕೆಯಲ್ಲಿ ಉತ್ತಮ ಲಾಭ.
  • ವೃಶ್ಚಿಕ
  • ಬಹುಕಾಲದಿಂದ ಅನುಭವಿಸುತ್ತಿರುವ ರೋಗಬಾಧೆ ಹಂತಹಂತವಾಗಿ ಚೇತರಿಕೆಯ ಮೆಟ್ಟಿಲನ್ನು ಹತ್ತಲಿದೆ. ಸ್ವಯಂ ನಿರ್ಧಾರದಿಂದ ತೆಗೆದುಕೊಳ್ಳುವ ಔಷಧಿಯು ಅಡ್ಡಪರಿಣಾಮ ಬೀರಬಹುದು. ಎಚ್ಚರದಿಂದಿರಿ.
  • ಧನು
  • ಹಾಸ್ಯ ಮನೋಭಾವಕ್ಕೆ ಹೊಂದಿಕೊಳ್ಳುವ ಸ್ನೇಹಿತರು ಸಿಗಲಿದ್ದಾರೆ. ಹಳ್ಳಿಯ ಭೇಟಿ ಖುಷಿ ತರುವುದು. ಅಪರೂಪಕ್ಕೆ ಖುಷಿಯಿಂದ ಆಡಿದ ಕ್ರೀಡೆಯು ಕೈಕಾಲು ನೋವಿಗೆ, ದೇಹಾಯಾಸಕ್ಕೆ ಕಾರಣವಾಗಬಹುದು.
  • ಮಕರ
  • ಇನ್ನೊಬ್ಬರಿಗೆ ಸಹಾಯ ಮಾಡಲು ಯೋಚಿಸುವ ನೀವು ಸಮಯದ ಬಗ್ಗೆಯೂ ಗಮನಹರಿಸಿ. ಜಗತ್ತೆ ಶೂನ್ಯ ಎಂದು ಕಾಣುತ್ತಿರುವವರಿಗೆ ಜೀವನವನ್ನು ಬೆಳಗಿಸುವ ವ್ಯಕ್ತಿಯ ಪರಿಚಯವಾಗುವುದು.
  • ಕುಂಭ
  • ವೃತ್ತಿಯಲ್ಲಿ ಜವಾಬ್ದಾರಿ ಹೆಚ್ಚಿ ಉತ್ತಮ ಆದಾಯ ತೋರಿಬಂದು ಅಭಿವೃದ್ಧಿಗೆ ಕಾರಣವಾಗುವುದು. ವಿಶೇಷ ಅವಕಾಶಕ್ಕಾಗಿ ಅಥವಾ ಅವಿಸ್ಮರಣೀಯ ಕ್ಷಣವನ್ನು ಎದುರುನೋಡುವ ಚಡಪಡಿಕೆ ನಿಮ್ಮದಾಗಿರುತ್ತದೆ.
  • ಮೀನ
  • ವ್ಯಾಪಾರ ವಹಿವಾಟಿನಲ್ಲಿ ಚಾಕಚಕ್ಯತೆ ತೋರಿದರೆ ವ್ಯವಹಾರ ಸಾಧ್ಯ. ವಾಹನ ಮಾರಾಟಗಾರರಿಗೆ ಉದ್ಯೋಗದಲ್ಲಿ ಬಿಡುವಿಲ್ಲದ ಕಾರ್ಯ ಇರಲಿದೆ. ಶ್ರೀ ವಿಷ್ಣುಸಹಸ್ರನಾಮವನ್ನು ಪಠಿಸಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.